ಮಂಗಳೂರು : ನಗರದ ಪರಿಸ್ಥಿತಿ ಪರಿಶೀಲನೆಗಾಗಿ ಏ.8 ರ ಬುಧವಾರ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ವೇದವ್ಯಾಸ್ ಕಾಮತ್ ಹಾಗೂ ಶಾಸಕ ಯು. ಟಿ ಖಾದರ್ ಇವರಿಬ್ಬರೂ ದ್ವಿಚಕ್ರ ವಾಹನದಲ್ಲಿ ಸಿಟಿ ರೌಂಡ್ ಹೊಡೆದು ನಗರದ ಸ್ಥಿತಿಯ ಬಗ್ಗೆ ಅವಲೋಕನ ನಡೆಸಿದರು.
ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೋಲೀಸರ ಜೊತೆ ಶಾಸಕರಿಬ್ಬರು ಮಂಗಳೂರಿನಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದರು.
ಲಾಕ್ಡೌನ್ ಇದ್ದರೂ ಅನಗತ್ಯವಾಗಿ ತಿರುಗಾಡುತ್ತಿದ್ದ ಕೆಲವರಿಗೆ ಮನೆಯಲ್ಲೇ ಇರುವಂತೆ ಶಾಸಕರು ತಿಳಿಸಿದರು. ದಿನಸಿ ಅಂಗಡಿ ಗಳಲ್ಲಿ ನಿಂತಿದ್ದವರಿಗೆ ಸಾಮಾಜಿಕ ಅಂತರ ಕಾಯ್ದು ಕೊಳ್ಳಲು ಸೂಚಿಸಿದರು.
Click this button or press Ctrl+G to toggle between Kannada and English