ಪ್ಯಾರಿಸ್: ಕೊರೋನಾ ಸೋಂಕು ವಿಶ್ವಾದ್ಯಂತ 1.5 ಮಿಲಿಯನ್ ಗೂ ಅಧಿಕ ಮಂದಿಗೆ ತಗುಲಿದ್ದು 87 ಸಾವಿರದ 320 ಮಂದಿ ಮೃತಪಟ್ಟಿದ್ದಾರೆ. 192 ದೇಶಗಳಿಗೆ ಸೋಂಕು ಪಸರಿಸಿದೆ ಎಂದು ಎಎಫ್ ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಚೀನಾದಲ್ಲಿ ಕಾಣಿಸಿಕೊಂಡ ಸೋಂಕಿನ ಬಗ್ಗೆ ಎಎಫ್ ಪಿ ಸಂಸ್ಥೆ ರಾಷ್ಟ್ರೀಯ ಪ್ರಾಧಿಕಾರಗಳು ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿಯನ್ನಾಧರಿಸಿ ಅಂಕಿಅಂಶಗಳನ್ನು ನೀಡಿದೆ. ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚಾಗಿರಬಹುದು ಎಂದು ಹೇಳಲಾಗುತ್ತಿದೆ. ಏಕೆಂದರೆ ಬಹುತೇಕ ದೇಶಗಳು ಅತಿ ಗಂಭೀರ ಕೇಸುಗಳನ್ನು ಮಾತ್ರ ಪರೀಕ್ಷೆ ನಡೆಸಿವೆ.
ಅಮೆರಿಕಾದಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಇದುವರೆಗೆ 14 ಸಾವಿರದ 817 ಜನರು ಮೃತಪಟ್ಟಿದ್ದು 4 ಲಕ್ಷದ 32 ಸಾವಿರದ 132 ಜನಕ್ಕೆ ತಗುಲಿದೆ. ಸ್ಪೈನ್ ನಲ್ಲಿ 14 ಸಾವಿರದ 555 ಮಂದಿ ಮೃತಪಟ್ಟಿದ್ದು 1 ಲಕ್ಷದ 46 ಸಾವಿರದ 690 ಮಂದಿ ಸೋಂಕಿತರಿದ್ದಾರೆ. ಇಟಲಿ ದೇಶದಲ್ಲಿ 17 ಸಾವಿರದ 669 ಮಂದಿ ಮೃತಪಟ್ಟಿದ್ದು 1 ಲಕ್ಷದ 39 ಸಾವಿರದ 422 ಮಂದಿ ಸೋಂಕಿತರಿದ್ದಾರೆ.
ಕೊರೋನಾ ಸೋಂಕು ಯುರೋಪ್ ಖಂಡದಲ್ಲಿ ಹೆಚ್ಚು ವ್ಯಾಪಿಸಿದೆ. ಇಲ್ಲಿ 7 ಲಕ್ಷದ 72 ಸಾವಿರದ 592 ಜನಕ್ಕೆ ಸೋಂಕು ತಗುಲಿದ್ದು 61 ಸಾವಿರದ 118 ಮಂದಿ ಮೃತಪಟ್ಟಿದ್ದಾರೆ.
Click this button or press Ctrl+G to toggle between Kannada and English