ಮಂಗಳೂರು : ಸ್ನೇಹ ಕಲಾ ವೃಂದ ಪಾಂಡೇಶ್ವರ ಇದರ ವತಿಯಿಂದ ಸ್ನೇಹ ಕಲಾ ವೃಂದ ದ ಅಧ್ಯಕ್ಷ ರಾದ ಸಿಂಚನ ಎರೆಂಜರ್ಸ್ ಮಾಲಕರಾದ ಸದಾಶಿವ ಕುಲಾಲ್ ಅವರು ಪಾಂಡೇಶ್ವರದ ನೂರು ನಾಗರಿಕರಿಗೆ ಅಕ್ಕಿ, ಸಕ್ಕರೆ, ಚಾಹುಡಿ, ತೊಗರಿಬೇಳೆ, ಸಾಬೂನು ಮೊದಲಾದ ಅಗತ್ಯ ದಿನಸಿ ವಸ್ತುಗಳ ಆಹಾರದ ಕಿಟ್ ಅನ್ನು ಮೇಯರ್ ದಿವಾಕರ್ ಪಾಂಡೇಶ್ವರ ಅವರ ಮುಖಾಂತರ ವಿತರಿಸಿದರು.
ಇದೇ ಸಂದರ್ಭ ಕೊರೊನಾ ಫಂಡಿಗೆ ಸದಾಶಿವ ಕುಲಾಲ್ ಅವರು ಐದು ಸಾವಿರ ರೂಪಾಯಿಯ ಚೆಕ್ ನೀಡಿದರು.
ಕೊರೊನ ಮಹಾ ಮಾರಿಗೆ ಇಡೀ ದೇಶವೇ ತಲ್ಲಣಗೊಂಡಿದೆ. ಸಾವಿರಾರು ಮಂದಿ ಕೂಲಿ ಕಾರ್ಮಿಕರು ಸಂಬಳವಿಲ್ಲದೆ ಬದುಕು ಸಾಗಿಸುವುದೇ ಕಷ್ಟವಾಗಿದೆ. ಒಂದು ಹೊತ್ತು ಊಟಕ್ಕೆ ಕಷ್ಟ ವಾಗಿದೆ ಇಂತಹ ವೇಳೆ ಮಂಗಳೂರು ಉದ್ಯಮಿ ಸದಾಶಿವ ಕುಲಾಲ್ ಅವರು ಅವರು ಸಂಕಷ್ಟದಲ್ಲಿ ಇರುವ ಕಾರ್ಮಿಕರಿಗೆ ಆಹಾರದ ಕಿಟ್ ವಿತರಣೆಗೆ ಮಾಡಿರುವುದು ಸಮಾಜಕ್ಕೆ ಮಾದರಿಯಾಗಿದೆ ಎಂದು ಮಂಗಳೂರು ಮೇಯರ್ ದಿವಾಕರ ಪಾಂಡೇಶ್ವರ ಹೇಳಿದರು.
ಸ್ನೇಹ ಕಲಾ ವೃಂದ ಪಾಂಡೇಶ್ವರ ಸದಾಶಿವ ಕುಲಾಲ್ ಅಧ್ಯಕ್ಷತೆಯಲ್ಲಿ ಹಲವಾರು ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳನ್ನು ಮಾಡುತ್ತ ಬಂದಿದೆ ಎಂದು ಮೇಯರ್ ಹೇಳಿದರು.
ಲಾಕ್ ಡೌನ್ ಮುಗಿಯುವ ವರೆಗೆ ಯಾರಿಗಾದರೂ ಆಹಾರದ ಕಿಟ್ ನ ಅತೀ ಅವಶ್ಯಕತೆ ಇದ್ದರೆ ಸದಾಶಿವ ಕುಲಾಲ್ ಅವರ 99809 96964 ನಂಬರಿಗೆ ಕರೆ ಮಾಡಬಹುದು.
Click this button or press Ctrl+G to toggle between Kannada and English