ಮಂಗಳೂರು : ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮುಖ್ಯಮಂತ್ರಿ ಗಳ ಕೋವಿಡ್-19 ಪರಿಹಾರ ನಿಧಿಗೆ 30ಲಕ್ಷ ರೂ. ದೇಣಿಗೆ ನೀಡಿದೆ.
30ಲಕ್ಷ ರೂಪಾಯಿ ಚೆಕ್ಕನ್ನು ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆಯವರು ಗುರುವಾರ , ಏಪ್ರಿಲ್ 16 ರಂದು ದ.ಕ. ಜಿಲ್ಲಾಧಿಕಾರಿ ಸಿಂಧು ರೂಪೇಶ ರವರಿಗೆ ಹಸ್ತಾಂತರಿಸಿದರು.
ಈ ಸಂಧರ್ಭ ಶಾಸಕ ಡಿ.ವೇದವ್ಯಾಸ ಕಾಮತ್, ಪ್ರದೀಪ್ ಡಿಸೋಜ,ಕಾರ್ಯದರ್ಶಿ,ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ರಾಘವೇಂದ್ರ ಎಂ, ವಲಯಾಧಿಕಾರಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ಸುದರ್ಶನ್ .ಎಂ, ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷರು, ರಾಮದಾಸ್ ಪ್ರದಾನ ಕಾರ್ಯದರ್ಶಿ ಬಿ. ಜೆ. ಪಿ , ಸುಧೀರ ಕುಮಾರ ಶೆಟ್ಟಿ, ಮ.ನ.ಪಾ ಸದಸ್ಯರು ಉಪ್ಥಿತರಿದ್ದರು.
Click this button or press Ctrl+G to toggle between Kannada and English