ಮಂಗಳೂರು : ಇಂಡೋ-ಸೌದಿ ಜಂಟಿ ಉದ್ಯಮವಾದ ಎಕ್ಸ್‌ಪರ್ಟೈಸ್ ಕಾಂಟ್ರಾಕ್ಟಿಂಗ್ ಕೋ ಲಿಮಿಟೆಡ್ ಎಂಬ ಕಂಪನಿಯಲ್ಲಿ ಮಂಗಳೂರು ಮೂಲದ 500 ಮಂದಿ ಕಾರ್ಮಿಕರು ಊರಿಗೆ ಮರಳಲಾಗದೆ ಸಿಕ್ಕಿ ಹಾಕಿಕೊಂಡಿದ್ದಾರೆ.
ಸೌದಿ ಅರೇಬಿಯಾದ ತೈಲ, ಅನಿಲ ಮತ್ತು ಪೆಟ್ರೋಕೆಮಿಕಲ್ ಕ್ಷೇತ್ರದಲ್ಲಿ ತೋಟಗಾರಿಕೆ ನಿರ್ವಹಣೆ ಮತ್ತು ಕಂಪೆನಿಯ ಇತರ ವಿಭಾಗಗಳಲ್ಲಿ ಕೆಲಸ ಮಾಡಲು ಅವರನ್ನು ಕಂಪೆನಿ ತಾತ್ಕಾಲಿಕ ವೀಸಾದಲ್ಲಿ ಕರೆಸಿ ಕೊಂಡಿತ್ತು.
ಕಂಪನಿಯು ವಿಶ್ವದ ವಿವಿಧ ಮೂಲೆಗಳಿಂದ 8,000 ಕ್ಕೂ ಹೆಚ್ಚು ಕಾರ್ಮಿಕರನ್ನು ನೇಮಿಸಿಕೊಂಡಿತ್ತು ಮತ್ತು ಅವರಲ್ಲಿ 2,500 ಮಂದಿ ಭಾರತದಿಂದ ಬಂದವರು. ಕಂಪೆನಿ ಅಲ್ಪಾವಧಿಯ ವಿಸಿಟಿಂಗ್ ವೀಸಾಗಳಲ್ಲಿ ಕಾರ್ಮಿಕರನ್ನು ನೇಮಿಸಿಕೊಂಡಿತ್ತು ಮತ್ತು ಕೋವಿಡ್ ಕಾರಣದಿಂದ ಏಪ್ರಿಲ್ ವೇಳೆಗೆ ವ್ಯಾಪಾರವು ಕಡಿಮೆ ಆಗುತ್ತಿದ್ದಂತೆ ಅವರ ಒಪ್ಪಂದವನ್ನು ಮೊಟಕು ಗೊಳಿಸಿತು.
ಜಾಗತಿಕವಾಗಿ ಕೋವಿಡ್ ಲಾಕ್ ಡೌನ್ ಮತ್ತು ವಿಮಾನಗಳ ಯಾನ ಇಲ್ಲದೆ ಇರುವುದರಿಂದ ಸೌದಿ ಅರೇಬಿಯಾ ದಲ್ಲಿರುವ ಭಾರತೀಯರನ್ನು ಮರಳಿ ಕಳಿಸುವುದು ಕಷ್ಟಸಾಧ್ಯವಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ
ಭಾರತೀಯ ಕಾರ್ಮಿರಲ್ಲಿ ಕೆಲವರಿಗೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ದೀರ್ಘಕಾಲದ ಕಾಯಿಲೆಗಳು ಇರುವುದರಿಂದ ವೈದ್ಯಕೀಯ ನೆರವು ಪಡೆಯಲು ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆಯಲ್ಲಿದ್ದಾರೆ ಮತ್ತು ಊರಿನಲ್ಲಿಯೂ ಅನಾರೋಗ್ಯ ಪೀಡಿತ ಪೋಷಕರು ಅವರ ಬರುವಿಕೆಯ ನಿರೀಕ್ಷೆಯಲ್ಲಿದ್ದಾರೆ.
ಭಾರತೀಯ ಕಾರ್ಮಿಕರನ್ನು ಚಾರ್ಟರ್ಡ್ ವಿಮಾನದಲ್ಲಿ ಕಳುಹಿಸಲು ಕಂಪನಿಯು ಸೌದಿ ಸರ್ಕಾರದ ಅನುಮತಿಯನ್ನು ಕೋರಿದೆ, ಇದನ್ನು ಸರ್ಕಾರ ಅನುಮೋದಿಸಿದೆ. ಈ ಕಾರ್ಮಿಕರನ್ನು ಹೊತ್ತ ಚಾರ್ಟರ್ಡ್ ವಿಮಾನವನ್ನು ಇಳಿಸಲು ಭಾರತ ಸರ್ಕಾರದ ಅನುಮತಿ ಪಡೆಯಲು ಕಂಪನಿಯು ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕದ ಮುಖ್ಯಮಂತ್ರಿ ಬಿ ಎಸ್ ಯಡಿಯುರಪ್ಪ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತು ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. ಕಂಪನಿಯು ಪ್ರಸ್ತುತ ಭಾರತ ಸರ್ಕಾರದ ಒಪ್ಪಿಗೆಗಾಗಿ ಕಾಯುತ್ತಿದೆ.
ಸಿಕ್ಕಿಬಿದ್ದ ಭಾರತೀಯ ಕಾರ್ಮಿಕರಿಗೆ ಮರಳಲು ಅನುವು ಮಾಡಿಕೊಡಲು ಅಗತ್ಯವಾದ ಎಲ್ಲಾ ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳಲು ಕಂಪನಿಯು ಸಿದ್ಧವಾಗಿದೆ ಎಂದು ಹೇಳಿದೆ . ಕಂಪನಿಯು ಕಾರ್ಮಿಕರ ಕೋವಿಡ್ -19 ಪರೀಕ್ಷೆಗಳನ್ನು ನಡೆಸುವುದು ಮತ್ತು ವರದಿ ಪ್ರಮಾಣಪತ್ರಗಳನ್ನು ತಯಾರಿಸುವುದನ್ನು ಮಾಡಬೇಕಿದೆ. ಮಾಣಪತ್ರವನ್ನು ಕಾರ್ಮಿಕರ ಪ್ರಯಾಣದ ದಿನಾಂಕಕ್ಕಿಂತ 48 ಗಂಟೆಗಳಿಗಿಂತ ಮುಂಚೆಯೇ ರಚಿಸ ಬೇಕಾಗುತ್ತದೆ.
ಭಾರತ ಸರ್ಕಾರದ ಮಾನದಂಡಗಳ ಪ್ರಕಾರ ಭಾರತದಲ್ಲಿ ಈ ಕಾರ್ಮಿಕರನ್ನು ಕೋವಿಡ್ -19 ಪ್ರತ್ಯೇಕ ಕ್ರಮ ತೆಗೆದುಕೊಳ್ಳಲು ಕಂಪನಿಯು ಒಪ್ಪಿಕೊಂಡಿದೆ. ಅಗತ್ಯ ವೆಚ್ಚಗಳನ್ನು ಭರಿಸಲು ಕಂಪನಿ ಒಪ್ಪಿಕೊಂಡಿದೆ ಎಂದು ತಿಳಿದು ಬಂದಿದೆ.
Click this button or press Ctrl+G to toggle between Kannada and English