ಮಂಗಳೂರು : ಕರ್ನಾಟಕದಿಂದ ತಲಪಾಡಿ ಗಡಿ ಮೂಲಕ ಕೇರಳಕ್ಕೆ ತೆರಳಲು ಯತ್ನಿಸಿದ ನಾಲ್ವರನ್ನು ಗುರುವಾರ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದು ಅವರನ್ನು ಕೊರೊನಾ ನಿಗಾ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಕಾಸರಗೋಡಿನಲ್ಲಿ ಹೆಚ್ಚು ಕೊರೊನಾ ಪ್ರಕರಣಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಕರ್ನಾಟಕ-ಕೇರಳ ಗಡಿ ಭಾಗವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಈ ನಡುವೆ ಸಾಕಷ್ಟು ಚರ್ಚೆಗೂ ಕಾರಣವಾಗಿದೆ. ಅಗತ್ಯ ವಸ್ತುಗಳು ಹಾಗೂ ತುರ್ತು ಆಂಬ್ಯುಲೆನ್ಸ್ ಗಳಿಗೆ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ, ನಿಯಮ ಉಲ್ಲಂಘಿಸಿ ಹಲವರು ಸಂಚರಿಸಲು ಯತ್ನಿಸುತ್ತಿದ್ದಾರೆ.
ಇದೀಗ ಲಾಕ್ ಡೌನ್ ಉಲ್ಲಂಘಿಸಿ ಗಡಿ ದಾಟಿ ಬರುವವರನ್ನು ವಶಕ್ಕೆ ತೆಗೆದುಕೊಂಡು 14 ದಿನಗಳ ಕಾಲ ಸರಕಾರದ ನೇತೃತ್ವದ ನಿಗಾ ಕೇಂದ್ರಕ್ಕೆ ಸೇರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಡಿ . ಸಜಿತ್ ಬಾಬು ತಿಳಿಸಿದ್ದಾರೆ.
Click this button or press Ctrl+G to toggle between Kannada and English