ನೇತ್ರಾವತಿ ಸೇತುವೆ ಸುಸೈಡ್ ಪಾಯಿಂಟ್ ಆಗದಂತೆ ತಡೆಯಲು ಸಿಸಿ ಕ್ಯಾಮರಾ, ತಂತಿ ಬೇಲಿ : ಶಾಸಕ ವೇದವ್ಯಾಸ್ ಕಾಮತ್

10:10 PM, Thursday, April 16th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Vedavyas-Kamathಮಂಗಳೂರು : ನೇತ್ರಾವತಿ ಸೇತುವೆ ಸುಸೈಡ್ ಪಾಯಿಂಟ್ ಆಗುತ್ತಿದ್ದು ಅದನ್ನು ತಪ್ಪಿಸಲು ಸೇತುವೆಯ  ಎರಡೂ ಭಾಗಗಳಲ್ಲಿ ತಂತಿ ಬೇಲಿ ಹಾಗೂ ಸಿಸಿ ಟಿವಿ ಅಳವಡಿಕೆ ಕಾಮಗಾರಿಗೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವು ಈ ವಾರದಲ್ಲೇ ಟೆಂಡರ್ ಕರೆಯಲಾಗುವುದು ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.

ಇದೇ ಮಾತನ್ನು ವರ್ಷದ ಹಿಂದೆ ಉದ್ಯಮಿ ಸಿದ್ಧಾರ್ಥ ಆತ್ಮಹತ್ಯೆ ಮಾಡಿಕೊಂಡಾಗ 2019 ರ ಸೆಪ್ಟೆಂಬರ್ ತಿಂಗಳಲ್ಲಿಯೂ ಹೇಳಿದ್ದರು. ಬಳಿಕ 2020 ರ ಜನವರಿ ತಿಂಗಳಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಸಭೆಯಲ್ಲಿಯು ಪುನರಾವರ್ತಿಸಿದ್ದರು.

ಇಂದು ಮಾಧ್ಯಮಕ್ಕೆ ಮಾಹಿತಿ ನೀಡಿದಂತೆ ನೇತ್ರಾವತಿ ಸೇತುವೆಯ ಮೇಲೆ ಸಿಸಿ ಟಿವಿ ಅಳವಡಿಸಲು 5 ಲಕ್ಷ ಹಾಗೂ ಸೇತುವೆಗೆ ರಕ್ಷಣಾ ಬೇಲಿ ನಿರ್ಮಾಣ ಕಾಮಗಾರಿಗೆ 58 ಲಕ್ಷ ರೂಪಾಯಿಯನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವು ಕೈಗೆತ್ತಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.

ಸಿಸಿಟಿವಿ ಹಾಗೂ ತಂತಿ ಬೇಲಿ ನಿರ್ಮಾಣಕ್ಕೆ ನಗರಾಭಿವೃದ್ಧಿ ಕೋಶದಿಂದ ಅನುಮೋದನೆ ದೊರಕಲಿದೆ. ಒಂದು ವಾರದೊಳಗಡೆ ಟೆಂಡರ್ ಪ್ರಕ್ರಿಯೆಗಳು ಪ್ರಾರಂಭವಾಗಲಿದೆ ಎಂದಿದ್ದಾರೆ.

ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ ಈ ಕಾಮಗಾರಿಗಳು ಪ್ರಾರಂಭವಾಗಲಿದೆ. ನಗರ ಪ್ರದೇಶಕ್ಕೆ ತಾಗಿಕೊಂಡಿರುವ ನೇತ್ರಾವತಿ ನದಿಯ ಮೇಲೆ ನಡೆಯುವ ಅನಾಹುತಗಳನ್ನು ತಪ್ಪಿಸುವ ಸದುದ್ಧೇಶದಿಂದ ಈ ಯೋಜನೆ ರೂಪಿಸಲಾಗಿದೆ ಎಂದು ಹೇಳಿದ್ದಾರೆ.

ಸದ್ಯ ಲಾಕ್ ಡೌನ್ ಹಿನ್ನೆಲೆಯಲ್ಲಿ ಈ ಹಿಂದೆ ರೂಪುಗೊಂಡಿದ್ದ ಈ ಯೋಜನೆ ವಿಳಂಬವಾಗಿತ್ತು. ಹಾಗಾಗಿ ಟೆಂಡರ್ ಕರೆದ ತಕ್ಷಣವೇ ಈ ಕಾಮಗಾರಿಗಳಿಗೆ

ಜನವರಿ 2020
ಮಂಗಳೂರು : ಉಳ್ಳಾಲದ ನೇತ್ರಾವತಿ ನದಿ ಸೇತುವೆಯ ಎರಡೂ ಕಡೆಗಳಲ್ಲಿ ಸುರಕ್ಷತಾ ತಡೆಗೋಡೆ ಅಳವಡಿಕೆಗೆ ಕ್ರಿಯಾ ಯೋಜನೆ ಹಾಗೂ ಸೇತುವೆಯ ಎರಡೂ ಬದಿಗಳಲ್ಲಿ ತಕ್ಷಣವೇ ಸಿಸಿ ಕ್ಯಾಮರಾ ಅಳವಡಿಕೆಗೆ ಶನಿವಾರ ನಡೆದ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಸಭೆಯಲ್ಲಿ ಸೂಚನೆ ನೀಡಲಾಗಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.

ಸಭೆಯಲ್ಲಿ ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ,ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಶ್ರೀಕಾಂತ್ ರಾವ್, ಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
—–

ಸೆಪ್ಟೆಂಬರ್ 2019
ಮಂಗಳೂರು : ಉದ್ಯಮಿ ಸಿದ್ಧಾರ್ಥ ಆತ್ಮಹತ್ಯೆಯ ನಂತರ ನಾಲ್ಕು ಜನ ಅಲ್ಲಿ ಆತ್ಮಹತ್ಯೆಗೆ ಮುಂದಾಗಿದ್ದಾರೆ. ಅದರಲ್ಲಿ ಇಬ್ಬರು ಬದುಕಿ ಉಳಿದಿದ್ದಾರೆ. ಭವಿಷ್ಯದಲ್ಲಿ ನೇತ್ರಾವತಿ ಸೇತುವೆಗೆ ಸೂಸೈಡ್‌ ಪಾಯಿಂಚ್‌ ಎನ್ನುವ ಹಣೆಪಟ್ಟಿ ಬಾರದ ರೀತಿಯಲ್ಲಿಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಶಾಸಕ ಕಾಮತ್‌ ಜಿಲ್ಲಾಧಿಕಾರಿಯವರೊಂದಿಗೆ ಮಾತುಕತೆ ನಡೆಸಿದ್ದಾರೆ.

ಅಲ್ಲಿಎರಡು ಸೇತುವೆಗಳಿದ್ದು ಎರಡಕ್ಕೂ ಸೂಕ್ತ ವ್ಯವಸ್ಥೆ ಮಾಡಬೇಕಿದೆ. ಎರಡೂ ಸೇತುವೆಗಳ ನಾಲ್ಕು ಬದಿಗಳಲ್ಲಿಯೂ ಕನಿಷ್ಟ 5 ರಿಂದ 6 ಅಡಿಗಳಷ್ಟು ಎತ್ತರದ ಗ್ರೀಲ್… ಹಾಕಿ ಫೈಬರ್‌ ತಡೆಗೋಡೆಯ ತರಹ ವ್ಯವಸ್ಥೆ ಮಾಡಿದರೆ ಅದು ಆತ್ಮಹತ್ಯೆಗೆ ಮುಂದಾಗುವವರಿಗೆ ತೊಡಕಾಗಲಿದೆ. ಇನ್ನು ಪಾರದರ್ಶಕ ಗೋಡೆ ತರಹದ ವ್ಯವಸ್ಥೆಯಿಂದ ನದಿಯ ಸೌಂದರ್ಯಕ್ಕೂ ದಕ್ಕೆ ಆಗುವುದಿಲ್ಲ ಎಂದು ಶಾಸಕರು ಸಲಹೆ ನೀಡಿದ್ದಾರೆ. ಹಾಗೆ ಎರಡೂ ಸೇತುವೆಗಳ ಆಯಕಟ್ಟಿನ ಜಾಗಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವುದರಿಂದ ಅಹಿತಕರ ಘಟನೆ ನಡೆಯುವುದನ್ನು ತಡೆಯಲು ಸಹಕಾರಿಯಾಗಬಹುದು ಎಂದು ಶಾಸಕ ಕಾಮತ್‌ ತಿಳಿಸಿದ್ದಾರೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English