ಸೆಂಟ್ರಲ್‌ ಮಾರ್ಕೆಟ್‌ನ ತರಕಾರಿ ಮತ್ತು ಹಣ್ಣು ಹಂಪಲುಗಳ ವ್ಯಾಪಾರ ಬೈಕಂಪಾಡಿ ಯಲ್ಲಿಯೇ ಫಿಕ್ಸ್

4:19 PM, Friday, April 17th, 2020
Share
1 Star2 Stars3 Stars4 Stars5 Stars
(No Ratings Yet)
Loading...

apmcಮಂಗಳೂರು: ಸೆಂಟ್ರಲ್‌ ಮಾರ್ಕೆಟ್‌ನ ತರಕಾರಿ ಮತ್ತು ಹಣ್ಣು ಹಂಪಲುಗಳ ಸಗಟು ವ್ಯಾಪಾರವನ್ನು ಬೈಕಂಪಾಡಿ ಎಪಿಎಂಸಿ ಯಾರ್ಡ್‌ಗೆ ಸ್ಥಳಾಂತರಿಸಲಾಗಿದ್ದು, 3 ತಿಂಗಳ ಕಾಲ ಯಾವುದೇ ಬಾಡಿಗೆ ಅಥವಾ ತೆರಿಗೆಯನ್ನು ವಸೂಲು ಮಾಡುವುದಿಲ್ಲ. ಆದರೆ ಇಲ್ಲಿ ವಹಿವಾಟು ನಡೆಸಲು ಆಸಕ್ತಿ ಇರುವ ಎಲ್ಲರೂ ಲೈಸನ್ಸ್‌ ಪಡೆಯುವ ಬಗ್ಗೆ ಈಗಿಂದೀಗಲೇ ಅರ್ಜಿ ಸಲ್ಲಿಕೆ ಮತ್ತಿತರ ಪ್ರಕ್ರಿಯೆಗಳನ್ನು ಆರಂಭಿಸಬೇಕು. 3 ತಿಂಗಳ ಬಳಿಕ ಅಧಿಕೃತವಾಗಿ ಲೈಸನ್ಸ್‌ ಪಡೆದು ವ್ಯವಹಾರ ನಡೆಸಬಹುದು ಎಂದು ಸ್ಥಳೀಯ ಶಾಸಕ ಡಾ| ವೈ. ಭರತ್‌ ಶೆಟ್ಟಿ ತಿಳಿಸಿದ್ದಾರೆ.

ಆದರೆ  ಇಲ್ಲಿ  ರಿಟೇಲ್‌ ಮಾರಾಟಕ್ಕೆ ಅವಕಾಶವಿಲ್ಲ. ಇಲ್ಲಿ ಚಿಲ್ಲರೆ ವ್ಯಾಪಾರ ನಡೆಸಿದರೆ ಅಂಥವರ ಲೈಸನ್ಸ್‌ ರದ್ದುಪಡಿಸಲಾಗುವುದು ಎಂದು ಶಾಸಕ ಡಾ| ವೈ. ಭರತ್‌ ಶೆಟ್ಟಿ ತಿಳಿಸಿದ್ದಾರೆ.

ಬೈಕಂಪಾಡಿ ಎಪಿಎಂಸಿ ಯಾರ್ಡ್‌ ನಲ್ಲಿ ವ್ಯಾಪಾರಿಗಳು ಚಿಲ್ಲರೆ ವ್ಯವಹಾರ ನಡೆಸುತ್ತಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಗುರುವಾರ ಶಾಸಕ ಡಾ| ಭರತ್‌ ಶೆಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮೇಯರ್‌ ದಿವಾಕರ್‌ ಮತ್ತು ಎಪಿಎಂಸಿ ಕಾರ್ಯದರ್ಶಿ ರವಿಚಂದ್ರ ಅವರು ಬೈಕಂಪಾಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಿಟೇಲ್‌ ವ್ಯವಹಾರ ನಡೆಸಿದರೆ ಲೈಸನ್ಸ್‌ ರದ್ದು ಪಡಿಸುವುದಲ್ಲದೆ ಅವರಿಗೆ ಈ ಹಿಂದೆ ಎಪಿಎಂಸಿ ಒಳಗೆ ಬರಲು ನೀಡಲಾಗಿದ್ದ ಅನುಮತಿಯನ್ನು ಕೂಡ ರದ್ದುಪಡಿಸಲಾಗುವುದು ಎಂದರು.

ಬೈಕಂಪಾಡಿಯಲ್ಲಿ 10 ದಿನಗಳ ಬಳಿಕ ಸಭೆ ಕರೆದು ಇಲ್ಲಿನ ವ್ಯವಸ್ಥೆಯ ಬಗ್ಗೆ ಪರಿಶೀಲಿಸಿ ಸಮಸ್ಯೆಗಳಿದ್ದರೆ ಪರಿಹಾರ ಸೂಚಿಸಲಾಗುವುದು ಎಂದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English