ದನದ ಎರಡೂ ಕಾಲುಗಳನ್ನು ಅಮಾನುಷವಾಗಿ ಕಡಿದು ಕ್ರೂರತೆ ಮೆರೆದ ದೂರ್ತರು

9:03 PM, Saturday, April 18th, 2020
Share
1 Star2 Stars3 Stars4 Stars5 Stars
(No Ratings Yet)
Loading...

Thirthahalli ತೀರ್ಥಹಳ್ಳಿ : ಬಾಳೇಬೈಲು ಶಾಲೆಯ ಎದುರು ದನದ ಹಿಂದಿನ ಎರಡೂ ಕಾಲುಗಳನ್ನು ಕಡಿದು ಕಸಾಯಿಖಾನೆಗೆ ಸಾಗಿಸುವ ಪ್ರಯತ್ನದಲ್ಲಿ ಅಲ್ಲಿಯೇ ಇದ್ದ ಮನೆಯವರು ಹೊರಬಂದರೆಂದು ಬಿಟ್ಟು ಪರಾರಿಯಾದ  ಘಟನೆ  ಶುಕ್ರವಾರ ರಾತ್ರಿ ನಡೆದಿದೆ.

ಹೆದರಿದ ಆ ದನವು ಅಲ್ಲಿಂದ ಸುಮಾರು ದೂರ ಮನುಷ್ಯರೇ ನಡೆಯಲು ಕಷ್ಟವಾಗುವ ಜಾಗದಲ್ಲಿ ಮುಂದಿನ ಎರಡು ಕಾಲಗಳಲ್ಲೇ ಓಡಿ ಹೋಗಿ ಒಂದು ಪೊದೆಯಲ್ಲಿ ಮಲಗಿದೆ. ಇಷ್ಟು ಗಂಭೀರವಾದ ಕತ್ತಿಯೇಟು ಬಿದ್ದು ಎರಡು ಕಾಲುಗಳು ತುಂಡಾಗಿದ್ದರೂ ಆ ದನ ಅಲ್ಲಿ ತನಕ ಹೋಗಿದ್ದೆ ಆಶ್ಚರ್ಯ. ವೈದ್ಯರಾದ ಯುವರಾಜ್ ಮತ್ತು ಫಾವ್ಲು ಅವರು ಬಂದು ನೋಡಿ ಎರಡೂ ಕಾಲುಗಳ ವೇಯ್ನ್ಸೆ ಕಟ್ಟಾಗಿದೆ. ಕಾಲುಗಳು ಸರಿಯಾಗುವ ಚಾನ್ಸೆ ಇಲ್ಲ ಎಂದಾಗ ಅಲ್ಲಿ ಸೇರಿದ್ದವರಲ್ಲಿ ದುಃಖದ ಜೊತೆ ಸಿಟ್ಟು ಸೇರಿಕೊಂಡು ಈ ಕ್ರೂರ ಕೃತ್ಯ ಎಸಗಿದವರಿಗೆ ಹಿಡಿಶಾಪ ಹಾಕುತ್ತಿದ್ದರು.

ವೈದ್ಯರು ಸ್ಥಳೀಯರ ನೆರವಿನೊಂದಿಗೆ ಇಂಜೆಕ್ಷನ್ ಕೊಟ್ಟು ಬ್ಯಾಂಡೆಜ್ ಮಾಡಿ ದನವನ್ನು ಅದರ ಮಾಲೀಕರ ಮನೆಗೆ ಸಾಗಿಸುವ ಏರ್ಪಾಟು ಮಾಡಿದರು. ಆದರೆ ಆ ದನ ಹೆಚ್ಚು ದಿನ ಬದುಕುಳಿಯಲಾರದು.

ತೀರ್ಥಹಳ್ಳಿ ಪೋಲಿಸ್ ಸರ್ಕಲ್ ಇನ್ಸ್ಪೆಕ್ಟರ್ ಗಣೇಶಪ್ಪ, ಸಬ್ ಇನ್ಸ್‌ಪೆಕ್ಟರ್ ಯಲ್ಲಣ್ಣನವರ್ ಹಾಗೂ ಪೋಲಿಸರು ಸ್ಥಳಕ್ಕಾಗಮಿಸಿ ದನದ ಪರಿಸ್ಥಿತಿಯನ್ನು ನೋಡಿ ದುಃಖಿಸಿದರಲ್ಲದೆ , ಈ ಕೃತ್ಯವೆಸಗಿದ ದುಷ್ಟರನ್ನು ಹಿಡಿದು ಕಾನೂನು ಕ್ರಮ ಕೈಗೊಳ್ಳುವುದಾಗಿ ಅಲ್ಲಿ ನೋವಿನಿಂದ ಇದ್ದವರಿಗೆ ಭರವಸೆ ನೀಡಿದರು.
ಇಡೀ ಪ್ರಪಂಚವೇ ಮಾರಾಣಾಂತಿಕ ಕೊರೊನಾ ವೈರಸ್ ಗೆ ತುತ್ತಾಗಿ ತತ್ತರಿಸಿದ್ದರೆ , ಇಂತಹ ಆತಂಕದ ಹೊತ್ತಲ್ಲಿಯೇ ಈ ದುರಳರು ರಾತ್ರಿ ಬಂದು ದನದ ಕಾಲುಗಳನ್ನು ನಿರ್ದಯವಾಗಿ ಕಡಿದು ಅದನ್ನು ಕಸಾಯಿಖಾನೆಗೆ ಒಯ್ಯುವ ಕ್ರೂರತನ ಮೆರೆಯುತ್ತಾರೆಂದರೆ ಅವರು ಖಂಡಿತಾ ಮನುಷ್ಯರಲ್ಲ.

ಯಾರೋ ಕೆಲವರು ಇಂತಹ ದುಷ್ಟ ಕೃತ್ಯವನ್ನು ನಡೆಸಿ ಮೊದಲೇ ಪರಸ್ಪರ ಅನುಮಾನಗಳು, ಅಪನಂಬಿಕೆ, ಅಪಪ್ರಚಾರ, ಪರಸ್ಪರ ಧ್ವೇಷ ಭಾವನೆಯು ಸಮಾಜಗಳಲ್ಲಿ ಹರಡಿ ನಲುಗಿರುವಾಗ ಅದಕ್ಕೆ ತುಪ್ಪ ಸುರಿಯುವ ಇಂತಹ ದುಷ್ಟ, ಅಮಾನವೀಯ ದುಷ್ಕೃತ್ಯಗಳು ಬೇಕೆ ?? ಅದು ಯಾವುದೇ ಸಮಾಜದವರಿರಲಿ , ಅವರಿಗೆ ಸಂಬಂಧಿಸಿದವರು, ಸಮಾಜದ ಹಿರಿಯರು, ಮುಖಂಡರು ಬುದ್ದಿ ಹೇಳಬೇಕು. ಹಾಗೆಯೇ ಪೋಲಿಸರು ಇಂತವರನ್ನು ಹಿಡಿದು ನಿರ್ದಾಕ್ಷಿಣ್ಯವಾಗಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು.

Thirthahalliರಾತ್ರಿ ವೇಳೆ ಉತ್ತಮ ಗಸ್ತು ತಿರುಗುವ ಮೂಲಕ ಇಂತಹ ಅಮಾನುಷ ಕೃತ್ಯಗಳಿಗೆ ಪೋಲಿಸ್ ಇಲಾಖೆಯವರು ಅವಕಾಶವನ್ನೇ ನೀಡಬಾರದು. ಚೆಕ್ ಪೋಸ್ಟ್ಗಳಲ್ಲಿಯೂ ಹಣದಾಸೆಗೆ ಇಂತಹ ದುಷ್ಟರಿಗೆ ಯಾರೂ ಸಾಥ್ ನೀಡಬಾರದು. ಒಂದು ದನ/ ಕರುವಿಗೆ ಹೀಗಾದರೆ ಅದೆಷ್ಟು ನೋವಾಗುತ್ತದೆ ಎಂದು ಜಾನುವಾರುಗಳನ್ನು ಸಾಕಿದವರಿಗೆ ಮಾತ್ರ ಗೊತ್ತಿರಲು ಸಾಧ್ಯ.

ಸುಮಾರು ಅರ್ಧ ಶತಮಾನಕ್ಕೂ ಹೆಚ್ಚು ಕಾಲದಿಂದ ಜಾನುವಾರಗಳ ಸಹವಾಸದಲ್ಲೆ ಬೆಳೆದವನು ನಾನು. ಸಗಣಿ ಗೋರುವುದು, ಕೊಟ್ಟಿಗೆ ತೊಳೆಯುವುದು ಸೇರಿದಂತೆ ಎಲ್ಲ ಕೆಲಸಗಳನ್ನು ಖುಷಿಯಿಂದ ಮಾಡುತ್ತಿದ್ದರಿಂದ ಜಾನುವಾರುಗಳಿಗೆ ಯಾರಾದರೂ ಹೀಗೆ ಹಿಂಸಿಸಿದಾಗ ತುಂಬಾ ನೋವಾಗುತ್ತದೆ. ಇವತ್ತು ಕೂಡ ನನಗೆ ಈ ದನದ ಪರಿಸ್ಥಿತಿಯನ್ನು ನೋಡಿ ದುಃಖವಾಯಿತು.

ಬರಹ – ಟಿ.ಕೆ.ರಮೇಶ್ ಶೆಟ್ಟಿ

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English