ಹಸಿದವರಿಗೆ ಅನ್ನ ನೀಡುವುದು ಪುಣ್ಯದ ಕಾರ್ಯ: ರಿಯಾಜ್ ಬಾವ

3:40 PM, Sunday, April 19th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

sashihitluಸಸಿಹಿತ್ಲು : ಹಸಿದಾಗ ನೀಡುವ ಅನ್ನ, ಬಾಯಾರಿದಾಗ ನೀಡುವ ನೀರು, ದಾರಿ ತಪ್ಪಿದಾಗ ನೀಡುವ ಮಾರ್ಗದರ್ಶನ ನಿಜವಾದ ಪುಣ್ಯದ ಕೆಲಸ ಅದರ ಪ್ರತಿಫಲವನ್ನು ದೇವರು ಬಾಕಿ ಉಳಿಸದಂತೆ ಮರುಕಳಿಸಿ ನೀಡುತ್ತಾನೆ ಎಂದು ಬಾವ ಫಿಶ್ ಮಿಲ್ ಮಾಲಕ ರಿಯಾಜ್ ಬಾವ ತಿಳಿಸಿದರು.
ಅವರು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಂಘ ಅಗ್ಗಿದಕಳಿಯ ಸಸಿಹಿತ್ಲು ಮತ್ತು ಬಿಲ್ಲವರ ಹಿತವರ್ಧಕ ಸಂಘ ಸಸಿಹಿತ್ಲು ಇದರ ಜ೦ಟಿ ಆಶ್ರಯದಲ್ಲಿ ಸಸಿಹಿತ್ಲು ಗ್ರಾಮದ ಬಡ ಕುಟುಂಬ ಗಳಿಗೆ 25 ಕಿ.ಜಿ ಅಕ್ಕಿ ಮತ್ತು 2 ಸಕ್ಕರೆ ವಿತರಣಾ ಸಮಾರಂಭದಲ್ಲಿ ಅಕ್ಕಿ ವಿತರಿಸಿ ಮಾತನಾಡಿದರು.

ಎರಡೂ ಸಂಸ್ಥೆಗಳು ಜೊತೆಯಾಗಿ ಜಾತಿ ಮತ ನೋಡದೆ ನಾರಾಯಣ ಗುರುಗಳ ತತ್ವದಂತೆ ಎಲ್ಲಾ ಜಾತಿಯವರುಗೂ ಅಕ್ಕಿ ನೀಡುವ ಕೆಲಸಕ್ಕೆ ಮುಂದಾಗಿರುವುದು ಮಾನವ ಧರ್ಮದ ನಿಜವಾದ ಸೇವೆ ಎಂದರು.

ಕೆಲವೇ ಕುಟುಂಬಗಳಿಗೆ ಸಾಂಕೇತಿಕವಾಗಿ ಅಕ್ಕಿ ವಿತರಿಸಿ ದ ರಿಯಾಜ್ ಬಾವ ಅವರು ಈ ಪುಣ್ಯ ಕಾರ್ಯ ಕ್ಕೆ ತನ್ನ ವತಿಯಿಂದ ದೊಡ್ಡ ಮಟ್ಟದ ದೇಣಿಗೆ ಯನ್ನು ಹಸ್ತಾಂತರಿಸಿದರು.

sashihitluಮುಖ್ಯ ಅತಿಥಿ ಯಾಗಿದ್ದ ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಇದರ ಆನುವಂಶಿಕ ಆಡ ಳಿತ ಮೋಕ್ತೇಸರಾದ ಕಾಂತು ಲಕ್ಕಣ್ಣ ಗುರಿಕಾರರು ಯಾನೆ ಪಟೇಲ್ ಯಾದವ ಜಿ ಬಂಗೇರ ಅವರು, ಇದು ಗ್ರಾಮ ಜನರ ಹಸಿವು ನೀಗುವ ಮಹಾಕಾರ್ಯ, ಇದು ನಿಜವಾದ ಸೇವೆ ಎಂದರು.

ಇದೇ ಸಂದರ್ಭ ದಲ್ಲಿ ಮಾತನಾಡಿದ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ರಾದ ಪ್ರಕಾಶ್ ಕುಮಾರ್ ಬಿ. ಎನ್ ಅವರು, ಕೊರೊನಾ ಅರಿವು ನಮ್ಮಲ್ಲಿ ಇನ್ನೂ ಆಳವಾಗಿ ಮೂಡಬೇಕಿದೆ, ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಪದೇ ಪದೇ ಸ್ಯಾನಿಟ್ರೈಸರ್ ನಿಂದ ಕೈ ತೊಳೆಯುವುದು ಇವೆ ಮೊದಲಾದ ಮುಂಜಾಗ್ರತೆ ಯೆ ಕೊರೊನಾ ಬರದಂತೆ ತಡೆಯಬಹುದು, ಜಾಗ್ರತೆ ಮತ್ತು ಜಾಗೃತಿ ಇಂದಿನ ಅವಶ್ಯಕತೆಯಾಗಿದೆ ಎಂದರು.

ಜ೦ಟಿ ಸಂಸ್ಥೆ ಯವತಿಯಿಂದ ಅಕ್ಕಿ ಪಡೆಯಲು ಬಂದ ಕುಟುಂಬಗಳಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ನೀಡಲಾಯಿತು.

ವೇದಿಕೆಯಲ್ಲಿ ಬಿಲ್ಲವರ ಹಿತವರ್ಧಕ ಸಂಘದ ಅಧ್ಯಕ್ಷ ರಾದ ಜಗನ್ನಾಥ ಕೋಟ್ಯಾನ್, ಪುರುಷೋತ್ತಮ ದೇವಾಡಿಗ, ರಮೇಶ್ ಪೂಜಾರಿ ಚೇಳ್ಯಾರು, ಧನ್ ರಾಜ್ ಕೋಟ್ಯಾನ್, ಪದ್ಮನಾಭ ಕುಕ್ಯಾನ್, ವಸಂತ ಪೂಜಾರಿ ಮತ್ತು ನರೇಶ್ ಕುಮಾರ್ ಸಸಿಹಿತ್ಲು, ಶುಭ ಪ್ರೇಮನಾಥ್ ಉಪಸ್ಥಿತರಿದ್ದರು, ಗ್ರಾಮ 164 ಬಿಲ್ಲವ ಕುಟುಂಬಗಳಿಗೆ, 23 ಮುಸ್ಲಿಮ್.ಕುಟುಂಬಗಳಿಗೆ, ಆಯ್ದ ಮೊಗವೀರ ಕುಟುಂಬಕ್ಕೆ ಮತ್ತು ಇತರ ಎಲ್ಲಾ ಸಮುದಾಯದ ಕುಟುಂಬ ಸೇರಿ ಒಟ್ಟು 247 ಕುಟುಂಬ ಗಳಿಗೆ ತಲಾ 25 ಕೆಜಿ ಅಕ್ಕಿ ಮತ್ತು 2 ಸಕ್ಕರೆ ವಿತರಿಸಲಾಯಿತು.

sashihitlu

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English