ಕೃಷ್ಣಾಪುರ ನಿವಾಸಿ ಶೋಭಾ ಕುಲಾಲ್ ಓಲ್ಡ್ ಪನ್ವೆಲ್ ನಲ್ಲಿಅನಾರೋಗ್ಯದಿಂದ ನಿಧನ

8:14 PM, Tuesday, April 21st, 2020
Share
1 Star2 Stars3 Stars4 Stars5 Stars
(5 rating, 1 votes)
Loading...

shobha Kulalಮುಂಬಯಿ : ಓಲ್ಡ್ ಪನ್ವೆಲ್ ನ ಕರಂಜಡೆ ಗ್ರಾಮದಲ್ಲಿ ವಾಸ್ತವ್ಯವಿರುವ ಶೋಭಾ ಕುಲಾಲ್ (38) ಅಲ್ಪಕಾಲದ ಅನಾರೋಗ್ಯದಿಂದ ಏಪ್ರಿಲ್ 20ರಂದು ಬೆಳಿಗ್ಗೆ ನಿಧನರಾದರು. ಶೋಭಾ ಅವರು ಮೂಲತಃ ಕೃಷ್ಣಾಪುರ ಕಾಟಿಪಳ್ಳ ದಿವಂಗತ ಲಕ್ಷ್ಮಣ್ ಕುಲಾಲ್ ಮತ್ತು ಜಾನಕಿ ಕುಲಾಲರ ಆರು ಜನ ಮಕ್ಕಳಲ್ಲಿ ಮೂರನೆಯವರಾಗಿರುವರು. ಸತೀಶ್ ಸಿಂಧೆಯವರನ್ನು ವಿವಾಹವಾಗಿರುವ ಇವರು ಕೆಲವೇ ತಿಂಗಳುಗಳ ಹಿಂದೆ ಓಲ್ಡ್ ಪನ್ವೆಲ್ ನಲ್ಲಿ ವಾಸ್ತವ್ಯಕ್ಕೆ ಬಂದಿದ್ದರು. ಏಪ್ರಿಲ್ 20ರಂದು ಧಿಡೀರನೆ ಅನಾರೋಗ್ಯ ಎದುರಾಗಿರುವುದರಿಂದ ಅವರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿಕೊಂಡರು.

ಈ ಸಂದಿಗ್ಧ ಸಂದರ್ಭದಲ್ಲಿ ಇವರಿಗೆ ಇವರ ಪರಿವಾರಕ್ಕೆ ಬೆಂಬಲವಾಗಿ ನಿಂತವರು ಪನ್ವೆಲ್ ಪರಿಸರದ ಜನಪ್ರಿಯ ನಗರ ಸೇವಕ ಸಂತೋಷ್ ಶೆಟ್ಟಿ. ಆಸ್ಪತ್ರೆಯಿಂದ ಸ್ಮಶಾನ ಭೂಮಿವರೆಗೆ ಎಲ್ಲಾ ಕೆಲಸ ಕಾರ್ಯಗಳನ್ನು ತಾನೇ ಮುಂದೆ ನಿಂತು ನಡೆಸಿದರು.

ಸರಕಾರಿ ಆಸ್ಪತ್ರೆಯಲ್ಲಿ34 ಜನ ಕೊರೊನಾ ರೋಗಿಗಳಿದ್ದರೂ ಅದನ್ನು ಕೂಡ ಲೆಕ್ಕಿಸದೆ ಸಂತೋಷ್ ಶೆಟ್ಟಿ ಮಾನವೀಯ ಮೌಲ್ಯಗಳನ್ನು ಅರಿತು ಕರ್ತವ್ಯದ ಸೇವೆಯನ್ನು ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕುಲಾಲ ಸಂಘದ ನವಿಮುಂಬಯಿ ಸ್ಥಳೀಯ ಸಮಿತಿಯ ಕಾರ್ಯದರ್ಶಿ ಎಲ್ ಆರ್ ಮೂಲ್ಯ ಮತ್ತು ಪನ್ವೆಲ್ ಕರ್ನಾಟಕ ಸಂಘದ ಯುವ ವಿಭಾಗದ ಅಧ್ಯಕ್ಷ ಗುರು ಶೆಟ್ಟಿ ಕಾಪು ಕೂಡ ಜೀವದ ಹಂಗು ತೊರೆದು ಉಪಸ್ಥಿತರಿದ್ದರು.

ಅಂತ್ಯಕ್ರಿಯೆ ಸಂದರ್ಭದಲ್ಲಿ ಶೋಭಾ ಅವರ ಪತಿ ಸತೀಶ್ ಮತ್ತು ಈ ಮೂವರು ಸೇರಿಕೊಂಡಿದ್ದರು. ಲಾಕ್ ಡೌನ್ ನ ಈ ಸಂದಿಗ್ಧ ಸಂದರ್ಭದಲ್ಲಿ ಶೋಭಾ ಅವರ ಅಂತ್ಯಕ್ರಿಯೆ ಮಾಡುವುದು ಕಷ್ಟಕರವಾಗಿತ್ತು. ಆದರೆ ಸಂತೋಷ್ ಶೆಟ್ಟಿ ಅವರು ಎಲ್ಲಾ ಸಮಸ್ಯೆಗಳಿಗೂ ಎದುರು ನಿಂತು ಅಂತ್ಯಕ್ರಿಯೆಯನ್ನು ನೆರವೇರಿಸಿದರು.

ಏಪ್ರಿಲ್ 20ರಂದು ನಿಧನರಾದ ಸುದ್ಧಿ ಕೃಷ್ಣಾಪುರದ ಪ ಅವರ ಮನೆಯವರು ಪನ್ವೆಲ್ ನಗರ ಸೇವಕ ಸಂತೋಷ್ ಶೆಟ್ಟಿ ಅವರಿಗೆ ತಿಳಿಸಿದರು. ಅವರು ಕೂಡಲೇ ಪತ್ರಕರ್ತ ದಿನೇಶ್ ಕುಲಾಲ್ ಗೆ ಮಾಹಿತಿ ನೀಡಿದರು. ತಕ್ಷಣ ಕಾರ್ಯ ಪ್ರವೃತ್ತರಾದ ದಿನೇಶ್ ಕುಲಾಲ್ ರವರು ನಿಧನದ ಸುದ್ದಿಯನ್ನು ಸಂಘದ ಅಧ್ಯಕ್ಷರು ದೇವದಾಸ್ ಕುಲಾಲ್ ಮತ್ತು ಉಪಾಧ್ಯಕ್ಷರಾಗಿರುವ ರಘು ಮೂಲ್ಯ ಅವರಿಗೆ ಸಂದೇಶ ಕಳುಹಿಸಿ ಸಂತೋಷ್ ಶೆಟ್ಟಿ ಅವರು ನಡೆಸುವ ಸೇವಾ ಕಾರ್ಯದಲ್ಲಿ ನವಿ ಮುಂಬೈ ಸಮಿತಿಯು ಬೆಂಬಲವಾಗಿ ನಿಲ್ಲಲು ವಿನಂತಿಸಿದರು

ಕೂಡಲೇ ಕುಲಾಲ ಸಂಘದ ನವಿ ಮುಂಬೈ ಸಮಿತಿಯ ಕಾರ್ಯದರ್ಶಿ ಎಲ್ ಆರ್ ಮೂಲ್ಯ ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಂತ್ಯಕ್ರಿಯೆ ಆಗುವವರೆಗೂ ಅಲ್ಲಿದ್ದರು. ಕ್ರಿಯಾ ಕರ್ಮಗಳೆಲ್ಲವೂ ವಿದ್ಯುಕ್ತವಾಗಿ ನಡೆದಿದೆ.

ಮೃತರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಮುಂಬಯಿ ಕುಲಾಲ ಸಂಘದ ಆಡಳಿತ ಮಂಡಳಿಯ ಪದಾಧಿಕಾರಿಗಳು ಮತ್ತು ನವಿ ಮುಂಬೈ ಸ್ಥಳೀಯ ಸಮಿತಿಯ ಸದಸ್ಯರು ಪ್ರಾರ್ಥಿಸಿಕೊಂಡಿದ್ದಾರೆ.

ಸಂತೋಷ್ ಶೆಟ್ಟಿ, ನಗರ ಸೇವಕರು ಪನ್ವೆಲ್

ಮಾನವೀಯತೆಯ ಸೇವೆ ಮಾಡಿದ ಸಂತೋಷ್ ಶೆಟ್ಟಿ ಅವರು ಪನ್ವೆಲ್ ಮಹಾನಗರಪಾಲಿಕೆಯ ನಗರಸೇವಕರು. ಬಂಟ್ವಾಳ ಗ್ರಾಮದವರಾಗಿದ್ದು ಇವರು ಹುಟ್ಟಿ ಬೆಳೆದಿರುವಂತಹ ಗ್ರಾಮದ ಸುತ್ತಲೂ ಕುಲಾಲ ಸಮಾಜಬಾಂಧವರು ವಾಸ್ತವ್ಯದಲ್ಲಿ ಇದ್ದಾರೆ.

shanthosh shetty ಬಾಲ್ಯದಲ್ಲೇ ಕುಲಾಲ ಸಮಾಜದ ಬಂಧುಗಳ ಮೇಲೆ ಅಪಾರ ಅಭಿಮಾನ ಮತ್ತು ಗೌರವವನ್ನು ಇಟ್ಟುಕೊಂಡಿರುವ ಸಂತೋಷ್ ಶೆಟ್ಟಿ ಅವರು ಪತ್ರಕರ್ತ ದಿನೇಶ್ ಕುಲಾಲ್ ರವರೊಂದಿಗೆ ಬಹಳ ಆತ್ಮೀಯತೆಯನ್ನು ಬೆಳೆಸಿಕೊಂಡವರು. ಇವರು 3 ಬಾರಿ ನಗರ ಸೇವಕರಾಗಿ ಸೇವೆ ಸಲ್ಲಿಸುವ ಭಾಗ್ಯವಂತ ರಾಗಿದ್ದಾರೆ. ಪ್ರಥಮ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿಕೊಂಡಾಗ ದಿನೇಶ್ ಕುಲಾಲ್ ಅವರೊಟ್ಟಿಗೆ ಸೇರಿಕೊಂಡಿದ್ದರು. ಕುಲಾಲ ಸಮಾಜದ ಮೇಲಿನ ಅಪಾರ ಗೌರವವನ್ನು ಇರಿಸಿಕೊಂಡಿರುವ ಸಂತೋಷ್ ಶೆಟ್ಟಿ ಅವರು ಕುಲಾಲ ಸಂಘ ಮುಂಬಯಿಯ ಮಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ಕುಲಾಲ ಭವನಕ್ಕೆ ದೇಣಿಗೆಯನ್ನು ಕೇಳದೆ ಒಂದುಲಕ್ಷ ರೂಪಾಯಿಯನ್ನು ನೀಡಿರುವ ಮಹಾದಾನಿ ಇವರು.

ಇವರ ಮಾನವೀಯತೆಯ ಸೇವಾಕಾರ್ಯಗಳಿಗೆ ಮುಂಬಯಿ ಕುಲಾಲ ಸಂಘದ ಅಧ್ಯಕ್ಷರು ದೇವದಾಸ್ ಕುಲಾಲ್, ಉಪಾಧ್ಯಕ್ಷ ರಘು ಮೂಲ್ಯ, ಕಾರ್ಯದರ್ಶಿ ಕರುಣಾಕರ ಸಾಲ್ಯಾನ್, ಕೋಶಾಧಿಕಾರಿ ಜಯ ಅಂಚನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷ ಮಮತಾ ಗುಜರನ್ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ನವಿ ಮುಂಬಯಿ ಸಮಿತಿಯ ಕಾರ್ಯಾಧ್ಯಕ್ಷ ವಾಸು ಬಂಗೇರ ಹಾಗೂ ಕಾರ್ಯಕಾರಿ ಸಮಿತಿ ಕೃತಜ್ಞತೆ ಸಲ್ಲಿಸಿದೆ ಮತ್ತು ಶೋಭಾ ಅವರ ಕಾಟಿಪಳ್ಳದ ಮನೆಯವರೆಲ್ಲರೂ ಕೃತಜ್ಞತೆಯನ್ನು ಸಲ್ಲಿಸಿರುವರು.

ಈಶ್ವರ ಎಂ. ಐಲ್

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English