ಮುಂಬಯಿ: ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕದ ಮಾಜಿ ಅಧ್ಯಕ್ಷ ಹೆಚ್.ಬಿ. ಎಲ್. ರಾವ್ (87) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಇಂದು ಬೆಳಿಗ್ಗೆ (ಏಪ್ರಿಲ್ 22) ರಂದು ದೈವಾಧೀನರಾದರು.
ಮೂಲತಃ ಮಂಗಳೂರಿನ ಹೆಜ್ಮಾಡಿಯವರಾಗಿದ್ದು ಪತ್ನಿ, ಪುತ್ರಿ, ಅಳಿಯ, ಮೊಮ್ಮಗಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಬದುಕಿನಲ್ಲಿ ಮನಸ್ಸು ಮಾಡಿದರೆ ಏನೆಲ್ಲ ಮಾಡಬಹುದು ಎಂಬುದಕ್ಕೆ ಹೆಚ್.ಬಿ.ಎಲ್ ರಾವ್ ಉದಾಹರಣೆ. ಅವರ ಹೆಸರು ಕೇಳಿದರೆ ನಮಗೆ ನೆನಪಾಗುವುದು ಅವರು ಮುಂಬಯಿಯಲ್ಲಿ ನಡೆಸಿಕೊಂಡು ಬರುತ್ತಿದ್ದ ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕದ ಕನ್ನಡಾಂಬೆಯ ಸೇವಾ ಕೈಂಕರ್ಯಗಳು. ಅಲ್ಲದೆ ಒಂದು ದಶಕಗಳ ಕಾಲ (2004 ರಿಂದ 2014ರ ವರೆಗೆ) ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು.
ಅವರ ಸಂಪಾದಕತ್ವದ “ಅಣಿ ಅರದಲ ಸಿರಿ ಸಿಂಗಾರ” ಅಪೂರ್ವ ಬೃಹದ್ ಗ್ರಂಥಕ್ಕೆ 2017 ರಲ್ಲಿ ಕರ್ನಾಟಕ ಸರಕಾರದ ಪುಸ್ತಕ ಪ್ರಾಧಿಕಾರದ “ಪುಸ್ತಕ ಸೊಗಸು” ಪ್ರಶಸ್ತಿ ದೊರೆತಿದೆ.
ಅಲ್ಲದೆ ಇವರ ನೇತೃತ್ವದ ಪದವೀಧರ ಯಕ್ಷಗಾನ ಮಂಡಳಿಗೆ ಈ ಸಲದ ಶ್ರೀ ವಿಶ್ವೇಶತೀರ್ಥ ಪ್ರಶಸ್ತಿಯನ್ನು 2019 ನವೆಂಬರ್ ನಲ್ಲಿ ಯಕ್ಷಗಾನ ಕಲಾರ೦ಗ ಪ್ರದಾನಮಾಡಿದೆ.
ಯಕ್ಷಗಾನ, ಸಾಹಿತ್ಯ ಸಮ್ಮೇಳನ, ತುಳು ಪರ್ಬ, ಪದವೀಧರ ಯಕ್ಷಗಾನ ಸಮಿತಿ, ಸಾಹಿತ್ಯ ಬಳಗ, ಶಿವಳ್ಳಿ ಪ್ರತಿಷ್ಠಾನ, ಕರ್ನಾಟಕ ಗಮಕ ಕಲಾ ಪರಿಷತ್ತು ಮಹಾರಾಷ್ಟ್ರ ಘಟಕದ ನೇತೃತ್ವ, ಪ್ರವಚನ, ಈ ಪಟ್ಟಿಯನ್ನು ಬೆಳೆಸುತ್ತ ಹೋಗಬಹುದು.
ಯಕ್ಷಗಾನ ಕಲಾವಿದನಾಗಿ, ಪೋಷಕರಾಗಿ, ಕಲಾವಿದರಾಗಿ, ಸಂಘಟಕರಾಗಿ, ಅರ್ಥಧಾರಿಯಾಗಿ, ವಿಭಿನ್ನ ಕಲೆಗಳಲ್ಲಿ ಕಲಾ ಸೇವೆಗೈದ ಅವರಂತಹ ಇನ್ನೋರ್ವ ಸಂಘಟಕರನ್ನು ಹೆಸರಿಸುವುದು ಕಷ್ಟ.
ಒಂದು ವಿಶ್ವವಿದ್ಯಾನಿಲಯ, ಒಂದು ಅಕಾಡೆಮಿ ಮಾಡಬಹುದಾದಷ್ಟು ಕೆಲಸವನ್ನು ಅವರು ಮುಂಬಯಿ ಯಲ್ಲಿ ಕಳೆದ 9 ದಶಕಗಳಲ್ಲಿ ಮಾಡಿದ್ದಾರೆ.
ಯಕ್ಷಗಾನಕ್ಕಾದ ಅನ್ಯಾಯ, ಅವಹೇಳನವನ್ನು ಪ್ರತಿಭಟಿಸಿ ಅವರು ಅನೇಕ ಬಾರಿ ನ್ಯಾಯಾಲಯದ ಮೊರೆ ಹೋಗಿ ಜಯಶೀಲರಾಗಿದ್ದು ಒಂದು ಕಡೆಯಾದರೆ, ಇನ್ನೊಂದು ಕಡೆ ಈ ಕಲಾಪೋಷಕನನ್ನು ಮುಗಿಸಿಬಿಡಲು ಭೂಗತ ಸಂಚು ಕೂಡ ವಿಫಲವಾಗಿತ್ತು.
ಅಲ್ಲಿ ಅವರು ಬದುಕಿ ಉಳಿದು ಕಲೆಯ ಉಳಿವಿಗಾಗಿ ಶ್ರಮಿಸಿದ್ದು ಈಗ ಇದೆಲ್ಲ ಇತಿಹಾಸದ ಭಾಗ. ಮುಂಬಯಿ ಮಹಾನಗರದಲ್ಲಿ ಓರ್ವ ಅಪೂರ್ವ ಸಂಘಟಕನೆಂಬ ಹೆಸರಿಗೆ ಪಾತ್ರರಾಗಿದ್ದವರು. ಅಷ್ಟ ಮಠಗಳ ಉಡುಪಿಯ ಸ್ವಾಮೀಜಿಯವರೊಂದಿಗೆ ನಿಕಟ ಸಂಪರ್ಕವನ್ನು ಇಟ್ಟುಕೊಂಡವರು. ನಾಡಿನಾದ್ಯಂತವಿರುವ ಸಾಹಿತ್ಯ ವಿದ್ವಾಂಸರನ್ನು, ಹಿರಿಯ ಯಕ್ಷಗಾನ ಕಲಾವಿದರನ್ನು ಮುಂಬಯಿಗೆ ಬರ ಮಾಡಿಸಿ ಅವರಿಂದ ಕಾರ್ಯಕ್ರಮಗಳನ್ನು ಆಯೋಜಿಸಿಕೊಳ್ಳುತ್ತಿದ್ದರು .
ಹೊರನಾಡಿನ ಹಲವಾರು ಕವಿಗಳಿಗೆ, ಸಾಹಿತಿಗಳಿಗೆ ಉತ್ತಮ ವೇದಿಕೆಯನ್ನು ನಿರ್ಮಾಣ ಮಾಡಿಕೊಂಡವರು.
ಮುಂಬಯಿಯ ಬಿ.ಎಸ್.ಕೆ.ಬಿ. ಅಸೋಸಿಯೇಷನ್ ನ ಮುಂಬಯಿಯ ಸಯನ್ ನಲ್ಲಿ ನಿರ್ಮಾಣವಾಗುತ್ತಿರುವ ಗೋಕುಲದ ಕೃಷ್ಣ ಮಂದಿರ ನಿರ್ಮಾಣದ ಕಾರ್ಯಾಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸುತ್ತಾ ಬಂದವರು. ಇವರನ್ನು ದೇಶದ ಪ್ರಮುಖ ನಗರಗಳಲ್ಲಿ ಬಿರುದು ಸನ್ಮಾನವನ್ನು ನೀಡಿ ಸನ್ಮಾನಿಸಲಾಗಿದೆ.
ದುಃಖಕರ ವಿಚಾರವೆಂದರೆ ಕರ್ನಾಟಕ ಸರಕಾರ ಮಾತ್ರ ಇವರನ್ನು ಕೊನೆ ತನಕ ಗುರುತಿಸಲೇ ಇಲ್ಲ.
ಇವರ ನಿಧನ ಸಾಹಿತ್ಯ ಲೋಕಕ್ಕೆ, ಮರಾಠಿ ಮಣ್ಣಿಗೆ ತುಂಬಲಾರದ ನಷ್ಟವಾಗಿದೆ.
ಹೆಚ್.ಬಿ.ಎಲ್. ರಾವ್ ನಿಧನಕ್ಕೆ ಸಂಸದ ಗೋಪಾಲ್ ಶೆಟ್ಟಿ ಬಿ.ಎಸ್. ಕೆ.ಬಿ. ಅಸೋಸಿಯೇಷನ್ ನ ಅಧ್ಯಕ್ಷ ಡಾಕ್ಟರ್ ಸುರೇಶ್ ರಾವ್, ಮುಂಬಯಿ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್. ಉಪಾಧ್ಯ, ಕನ್ನಡ ಸಾಹಿತ್ಯ ಪರಿಷತ್ ಮಹಾರಾಷ್ಟ್ರ ಘಟಕದ ಪದಾಧಿಕಾರಿಗಳು, ಬಂಟರ ಸಂಘದ ಅಧ್ಯಕ್ಷ ಪದ್ಮನಾಭ್ ಪಯ್ಯಡೆ, ಜಾಗತಿಕ ಬಂಟರ ಸಂಘಗಳ ಒಕ್ಕೂಟಗಳ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಕರ್ನಾಟಕ ಮಲ್ಲ ಪತ್ರಿಕೆಯ ಸಂಪಾದಕ ಚಂದ್ರಶೇಖರ್ ಪಾಲೆತ್ತಾಡಿ, ಚಿಣ್ಣರ ಬಿಂಬದ ರೂವಾರಿ ಪ್ರಕಾಶ್ ಭಂಡಾರಿ, ಕಲಾ ಜಗತ್ತಿನ ತೋನ್ಸೆ ವಿಜಯ್ ಕುಮಾರ್ ಶೆಟ್ಟಿ, ಕನ್ನಡ ಕಲಾ ಕೇಂದ್ರದ ಅಧ್ಯಕ್ಷ ಬಾಲಚಂದ್ರ ರಾವ್, ಕರ್ನಾಟಕ ಸಂಘ ಮುಂಬಯಿಯ ಅಧ್ಯಕ್ಷ ಎಂ.ಎಂ. ಕೋರಿ, ಭಾರತ್ ಬ್ಯಾಂಕ್ ನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ, ಬಿಲ್ಲವರ ಅಸೋಸಿಯೇಷನ್ ನ ಅಧ್ಯಕ್ಷ ಚಂದ್ರಶೇಖರ್ ಪೂಜಾರಿ, ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಕೆ.ಎಲ್. ಬಂಗೇರ, ದೇವಾಡಿಗ ಸಂಘದ ಅಧ್ಯಕ್ಷ ರವಿ ದೇವಾಡಿಗ, ಕುಲಾಲ ಸಂಘದ ಅಧ್ಯಕ್ಷ ಪಿ. ದೇವದಾಸ್ ಎಲ್. ಕುಲಾಲ್, ಬಾಂಬೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಕೆ. ಮುರಳಿ ಶೆಟ್ಟಿ, ಕರ್ನಾಟಕ ವಿಶ್ವಕರ್ಮ ಎಸೋಸಿಯೇಷನ್ ನ ಅಧ್ಯಕ್ಷ ಸದಾನಂದ ಆಚಾರ್ಯ, ತೀಯ ಸಮಾಜದ ಅಧ್ಯಕ್ಷ ರವಿ ಮಂಜೇಶ್ವರ, ಮಾಜಿ ಅಧ್ಯಕ್ಷ ಚಂದ್ರಶೇಖರ್ ಬೆಲ್ಚಡ, ರಜಕ ಸಂಘದ ಅಧ್ಯಕ್ಷ ಪಾಂಡು ಮಡಿವಾಳ, ಮುಂಬಯಿಯ ತುಳು ಕನ್ನಡ ಅಭಿಮಾನಿಗಳ ಬಳಗದ ಸಂಚಾಲಕ ಎರ್ಮಾಳ್ ಹರೀಶ್ ಶೆಟ್ಟಿ, ತುಳು ಸಾಹಿತಿ ಜಯಕರ ಡಿ. ಪೂಜಾರಿ, ಅಖಿಲ ಕರ್ನಾಟಕ ಜೈನ ಸಂಘದ ಅಧ್ಯಕ್ಷ ಮುನಿರಾಜ್ ಜೈನ್ , ಸಾಫಲ್ಯ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ್ ಸಾಫಲ್ಯ, ಜಯ ಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷ ತೋನ್ಸೆ ಜಯಕೃಷ್ಣ ಎ. ಶೆಟ್ಟಿ, ಗಾಣಿಗ ಸಮಾಜದ ಅಧ್ಯಕ್ಷ ಬ್ರಹ್ಮಾವರ ವಾಸುದೇವ ರಾವ್, ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನದ ಸಂಸ್ಥಾಪಕ ಕೈರಬೆಟ್ಟು ವಿಶ್ವಾನಾಥ್ ಭಟ್, ಅಧಮಾರು ಮಠದ ಪ್ರಬಂಧಕ ರಾಜೇಶ್ ರಾವ್, ಪೇಜಾವರ ಮಠದ ಪ್ರಬಂಧಕ ರಾಮದಾಸ್ ಉಪಾಧ್ಯಾಯ, ಪ್ರಕಾಶ್ ಆಚಾರ್ಯ, ನಿರಂಜನ್ ಭಟ್, ಪದ್ಮಶಾಲಿ ಸಮಾಜ ಸೇವಾ ಸಂಘದ ಅಧ್ಯಕ್ಷ ಉತ್ತಮ ಶೆಟ್ಟಿಗಾರ್, ರಾಮ ರಾಜ ಕ್ಷತ್ರಿಯ ಸೇವಾ ಸಂಘದ ಅಧ್ಯಕ್ಷ ರಾಜ್ ಕುಮಾರ್ ಕಾರ್ನಾಡ್, ಭಂಡಾರಿ ಸೇವಾ ಸಮಿತಿ ಇದರ ಅಧ್ಯಕ್ಷ ಆರ್. ಎಂ. ಭಂಡಾರಿ, ಸಾಂತಾಕ್ರೂಜ್ ಕನ್ನಡ ಸಂಘದ ಅಧ್ಯಕ್ಷ ಎಲ್. ವಿ. ಅಮೀನ್, ಹವ್ಯಕ ವೆಲ್ಫೇರ್ ಟ್ರಸ್ಟ್ ನ ಅಧ್ಯಕ್ಷ ಭಾಗವತ್, ಗೋರೆಗಾವ್ ಕರ್ನಾಟಕದ ಸಂಘದ ಅಧ್ಯಕ್ಷ ನಾರಾಯಣ್ ಮೆಂಡನ್, ಟ್ರಸ್ಟಿಗಳಾದ ಜಿ ಟಿ ಆಚಾರ್ಯ ರಮೇಶ್ ಶೆಟ್ಟಿ ಪಯ್ಯಾರ್, ಸುರೇಂದ್ರ ಸಾಲಿಯಾನ್ ಮುಂಡ್ಕೂರು, ಮಾಜಿ ಅಧ್ಯಕ್ಷ ಭಾಸ್ಕರ್ ಶೆಟ್ಟಿ ದೇವಲಕುಂದ, ಬಿಲ್ಲವ ಚೇಂಬರ್ಸ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ ನ ಅಧ್ಯಕ್ಷ ಎನ್. ಟಿ. ಪೂಜಾರಿ, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ್ ದೇವಾಡಿಗ, ಭಂಡಾರಿ ಮಹಾಮಂಡಲದ ಮಾಜಿ ಅಧ್ಯಕ್ಷ ಕಡಂದಲೆ ಸುರೇಶ್ ಭಂಡಾರಿ, ವಿದ್ಯಾದಾಯಿನಿ ಸಭಾದ ಅಧ್ಯಕ್ಷ ಪುರುಷೋತ್ತಮ್ ಎಸ್. ಕೋಟ್ಯಾನ್, ಕಾರ್ಯದರ್ಶಿ ಚಿತ್ರಾಪು ಕೆ.ಎಂ. ಕೋಟ್ಯಾನ್, ಕನ್ನಡದ ಸೇನಾನಿ ಎಸ್. ಕೆ. ಸುಂದರ್, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿಯ ಅಧ್ಯಕ್ಷ ರಮೇಶ್ ಬಂಗೇರ, ಮಾಜಿ ಅಧ್ಯಕ್ಷರುಗಳಾದ ಸುರೇಶ್ ಕಾಂಚನ್, ಗೋಪಾಲ್ ಪುತ್ರನ್, ಮೊಗವೀರ ಬ್ಯಾಂಕಿನ ಕಾರ್ಯಾಧ್ಯಕ್ಷ ಸದಾನಂದ ಕೋಟ್ಯಾನ್, ಆರ್ಥಿಕ ತಜ್ಞ ಡಾ. ಆರ್. ಕೆ. ಶೆಟ್ಟಿ, ಶಫಿ ವೆಲ್ಫೇರ್ ಅಸೋಸಿಯೇಷನ್ ನ ಅಧ್ಯಕ್ಷ ಅಡ್ವೋಕೇಟ್ ಮೊಯಿದೀನ್ ಮುಂಡ್ಕೂರು, ಅಂಧೇರಿ ಕರ್ನಾಟಕ ಸಂಘದ ಅಧ್ಯಕ್ಷ ಹ್ಯಾರಿ ಸಿಕ್ವೆರಾ, ಕನ್ನಡಿಗ ಕಲಾವಿದರ ಪರಿಷತ್ತಿನ ಅಧ್ಯಕ್ಷ ಡಾ. ಸುರೇಂದ್ರ ಕುಮಾರ್ ಹೆಗ್ಡೆ, ವಾಶಿ ಕನ್ನಡ ಸಂಘದ ಅಧ್ಯಕ್ಷ ಗೋಪಾಲ್ ವೈ. ಶೆಟ್ಟಿ, ಮೈಸೂರು ಅಸೋಸಿಯೇಷನ್ ನ ಅಧ್ಯಕ್ಷ ಶ್ರೀಮತಿ ಕಮಲ, ವಿಶ್ವ ಹಿಂದೂ ಪರಿಷತ್ತಿನ ಥಾಣೆ ಪ್ರಾಂತ್ಯದ ಅಧ್ಯಕ್ಷ ಪೊಲ್ಯ ಉಮೇಶ್ ಶೆಟ್ಟಿ, ಕರ್ನಿರೆ ಫೌಂಡೇಶನ್ ನ ಅಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ, ವಿರಾರ್- ನಾಲಾಸೋಪಾರಾ ಕರ್ನಾಟಕ ಸಂಘದ ಗೌರವ ಅಧ್ಯಕ್ಷ ವಿರಾರ್ ಶಂಕರ್ ಶೆಟ್ಟಿ, ಹಿರಿಯ ಸಾಹಿತಿಗಳಾದ ಡಾ. ವಿಶ್ವನಾಥ್ ಕಾರ್ನಾಡ್, ಡಾ. ವ್ಯಾಸರಾವ್ ನಿಂಜೂರು, ಡಾ. ಜೀವಿ ಕುಲಕರ್ಣಿ, ಡಾ. ಜಿ. ಡಿ. ಜೋಶಿ, ಡಾ. ಸುನೀತಾ ಎಂ. ಶೆಟ್ಟಿ, ಡಾ. ಕರುಣಾಕರ್ ಎಂ. ಶೆಟ್ಟಿ, ಡಾ. ಭರತ್ ಕುಮಾರ್ ಪೊಲಿಪು, ಶಿಮಂತೂರು ಚಂದ್ರಹಾಸ್ ಸುವರ್ಣ, ವಿಶ್ವನಾಥ್ ಶೆಟ್ಟಿ ಪೇತ್ರಿ , ಡಾ. ಈಶ್ವರ ಅಲೆವೂರು, ಓಂದಾಸ್ ಕಣ್ಣಂಗಾರ್, ಹರೀಶ್ ಹೆಜ್ಮಾಡಿ, ಸಂಬಂಧದ ಸಂಪಾದಕ ಶೀನಿವಾಸ್ ಜೋಕಟ್ಟೆ, ಮೊಗವೀರ ಮಾಸಿಕದ ಸಂಪಾದಕ ಅಶೋಕ್ ಸುವರ್ಣ, ಸಾಫಲ್ಯದ ಸಂಪಾದಕಿ ಡಾ. ಜಿ.ಪಿ. ಕುಸುಮ, ಹವ್ಯಕದ ಸಂಪಾದಕಿ ಅಮಿತ ಭಾಗವತ್, ಅಮೂಲ್ಯದ ಸಂಪಾದಕ ಶಂಕರ್ ವೈ. ಮೂಲ್ಯ, ಮುಂಬಯಿ ನ್ಯೂಸ್ ಸಂಪಾದಕ ಹೇಮ್ ರಾಜ್ ಕರ್ಕೇರ, ತೀಯಾ ಬೆಳಕು ಸಂಪಾದಕ ಶ್ರೀಧರ್, ಬಂಟರವಾಣಿಯ ಸಂಪಾದಕ ಪ್ರೇಮನಾಥ್ ಮುಂಡ್ಕೂರು, ಪತ್ರಪುಷ್ಪದ ಸಂಪಾದಕ ರಾಮ್ ಮೋಹನ್ ಶೆಟ್ಟಿ ಬಳ್ಕುಂಜೆ, ಅಕ್ಷಯದ ಗೌರವ ಸಂಪಾದಕ ಎಂ. ಬಿ. ಕುಕ್ಯಾನ್, ಪತ್ರಕರ್ತ ಈಶ್ವರ್ ಎಂ. ಐಲ್, ಲಕ್ಷ್ಮಿ ನಾರಾಯಣ ಆಸ್ರಣ್ಣ, ಪ್ರಸಾದ್ ಆಸ್ರಣ್ಣ, ಹರಿನಾರಾಯಣ ಆಸ್ರಣ್ಣ, ಪ್ರದೀಪ್ ಕುಮಾರ್ ಕಲ್ಕೂರ, ಹರಿಕೃಷ್ಣ ಪುನರೂರು, ಕೆ. ಎಲ್. ಕುಂಡಂತಾಯ, ಅಶೋಕ್ ಭಟ್ ಉಜಿರೆ,ಎಂ ಎಲ್. ಸಾಮಗ, ಡಾ. ಪ್ರಭಾಕರ್ ಜೋಶಿ, ನಾಗೇಶ್ ಕಲ್ಲೂರು, ಅಂಬಾತಾಯ ಮುದ್ರಾಡಿ ಹಾಗೂ ನಾಡಿನ ವಿದ್ವಾಂಸರು , ಸಂಘಟಕರು, ಸಾಹಿತಿಗಳು ದುಃಖ ಸಂತಾಪ ಸೂಚಿಸಿರುವರು.
ವರದಿ : ದಿನೇಶ್ ಕುಲಾಲ್
Click this button or press Ctrl+G to toggle between Kannada and English