ಕೋರೋನ ವೈರಸ್ – ಮುಖ್ಯಮಂತ್ರಿ ಪರಿಹಾರ ನಿಧಿಗೆ 1,25,000 ರೂಪಾಯಿ ದೇಣಿಗೆ

6:50 PM, Wednesday, April 22nd, 2020
Share
1 Star2 Stars3 Stars4 Stars5 Stars
(No Ratings Yet)
Loading...

UdupiCorona ಉಡುಪಿ : ಕೋರೋನ ವೈರಸ್ ಎಂಬ ಈ ಮಹಾಮಾರಿ ದೇಶಾದ್ಯಂತ ವ್ಯಾಪಕವಾಗಿ ಹರಡಿದ್ದು ಮನುಕುಲಕ್ಕೆ ಸಂಕಷ್ಟವನ್ನು ಉಂಟುಮಾಡಿದೆ
ಈ ನಿಟ್ಟಿನಲ್ಲಿ ಪರಿಹಾರ ಹಾಗೂ ಮುಂಜಾಗೃತ ಕ್ರಮಗಳು ಸಮರೋಪಾದಿಯಲ್ಲಿ ಸಾಗುತ್ತಿವೆ. ಉಡುಪಿಯ ಉದ್ಯಮಿಗಳಿಬ್ಬರು  ಕೋರೋನ ವೈರಸ್ ನಿಧಿಗೆ ದಾನ ಮಾಡುವ ಮೂಲಕ ಸಹಕಾರ ನೀಡಿದ್ದಾರೆ.

ಕೋರೋನ ವೈರಸ್ ಮುಖ್ಯಮಂತ್ರಿ ಪರಿಹಾರ ನಿಧಿಗೆ 1,25,000 ರೂಪಾಯಿ ಚೆಕ್ಕನ್ನು ದೇಣಿಗೆ ಯಾಗಿ ಅಮೃತ್ ಪಾಟೇಲ್ ಪುರುಷೋತ್ತಮ್ ಪಾಟೀಲ್ ಹಾಗೂ ಮನ್ಸುಕ್ ಪಾಟೀಲರವರು ಶಾಸಕರಾದ ಕೆ. ರಘುಪತಿ ಭಟ್ ಇವರ ಸಮ್ಮುಖದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳಾದ ಜಿ. ಜಗದೀಶ್ ರವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಪಾಟಿದಾರ್ ಸಮಾಜ ಉಡುಪಿ ಇದರ ಅಧ್ಯಕ್ಷರಾದ ಸೋಮ್ಜಿ ಎಂ ಪಾಟೀಲ್ ಉಪಾಧ್ಯಕ್ಷರಾದ ವಸಂತ ಪಾಟೀಲ್ ಹಾಗೂ ಕಾರ್ಯದರ್ಶಿಯಾದ ರತಿ ಲಾಲ್ ಪಾಟೀಲ್ ಉಪಸ್ಥಿತರಿದ್ದರು.

ಈ ಮಹತ್ತರ ಕೊಡುಗೆಗೆ ಶಾಸಕರಾದ ಕೆ ರಘುಪತಿ ಭಟ್ ಇವರು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿ ವಿಶೇಷವಾದ ಅಭಿನಂದನೆಯನ್ನು ಸಲ್ಲಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English