ಉಡುಪಿ : ಮಹಾರಾಷ್ಟ್ರದ ಪಾಲ್ಗರ್ನಲ್ಲಿ ನಡೆದ ಸಾಧು ಸಂತರ ಹತ್ಯೆ ಸರ್ವಥಾ ಖಂಡನೀಯವಾಗಿದ್ದು,ಇದರಿಂದ ಸಾಧು ಸಂತರಿಗೆ ತುಂಬಾ ನೋವಾಗಿದೆ, ಈ ಹತ್ಯೆಯ ವೀಡಿಯೊ ದಾಖಲಾತಿಯನ್ನು ಗಮನಿಸಿದಾಗ ಇದು ಅತ್ಯಂತ ಪೂರ್ವ ನಿಯೋಜಿತ ವಾಗಿದ್ದು, ಅತ್ಯಂತ ಕೆಟ್ಟ ದುರುದ್ದೇಶವನ್ನು ಒಳಗೊಂಡಂತೆ ಭಾಸವಾಗುತ್ತಿದೆ. ಎಂದು ಉಡುಪಿಯ ಅಷ್ಟ ಮಠಗಳಲ್ಲಿ ಒಂದಾಗಿರುವ ಪುತ್ತಿಗೆ ಮಠದ ಶ್ರೀ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ತಿಳಿಸಿರುವರು
ಕೊರೋನಾ ವೈರಸ್ಸಿನ ಮಹಾ ಸಮಸ್ಯೆಯಿಂದ ದೇಶವು ತಲ್ಲಣಗೊಂಡು ತತ್ತರಿಸುತ್ತಿರುವಾಗ, ಈ ಒಂದು ಸಂದರ್ಭದಲ್ಲಿ ದೇಶದಲ್ಲಿ ಮತೀಯ ಸಾಮರಸ್ಯವನ್ನು ಕೆದಕುವ ಕುತಂತ್ರವು ಇದರ ಹಿಂದೆ ಸಕ್ರಿಯವಾಗಿರುವಂತೆ ಕಂಡುಬರುತ್ತದೆ. ದೇಶದಲ್ಲಿ ಉಧ್ಭವಗೊಳ್ಳುತ್ತಿರುವ ಇತ್ತೀಚಿನ ಅನೇಕ ಬೆಳವಣಿಗೆಗಳಿಂದ ತಿಳಿದು ಬರುತ್ತದೆ,
ಪ್ರಪಂಚವು ಸರ್ವನಾಶದ ಅಂಚಿನಲ್ಲಿ ಸಾಗುತ್ತಿರುವಾಗ ಇದೇ ಸಂದರ್ಭದಲ್ಲಿ ಭಾರತ ವಿರೋಧಿಗಳು ದೇಶದಲ್ಲಿ ಮತೀಯ ಸಾಮರಸ್ಯವನ್ನು ಕಲುಷಿತಗೊಳಿಸಿ ದೇಶವನ್ನು ಅಲ್ಲೋಲಕಲ್ಲೋಲ ಮಾಡುವ ಈ ಮಹಾ ಕುತಂತ್ರಕ್ಕೆ ಯಾರೂ ಬಲಿಯಾಗಬಾರದೆಂದು ಈ ಸಂದರ್ಭದಲ್ಲಿ ನಾವು ಜನತೆಯನ್ನು ಕೇಳಿಕೊಳ್ಳುತ್ತೇವೆ.
ನಮ್ಮ ದೇಶವು ಸಾವಿರಾರು ವರ್ಷಗಳಿಂದ ಸಂಯಮದಿಂದ ವರ್ತಿಸಿಕೊಂಡು ದೇಶದ ಅಸ್ತಿತ್ವವನ್ನು ಉಳಿಸಿಕೊಂಡದ್ದಾಗಿದ್ದು ಅದೇ ಸಂಯಮದಿಂದ ಪ್ರಸಕ್ತ ಮಹಾಸಮಸ್ಯೆಯನ್ನು ಜಯಿಸುವಂತಾಗಬೇಕಾಗಿದ್ದು ಈ ನಿಟ್ಟಿನಲ್ಲಿ ರಾಜ್ಯ ಕೇಂದ್ರಸರ್ಕಾರಗಳು ಅತ್ಯಂತ ಜಾಗರೂಕತೆಯಿಂದ ಹೆಜ್ಜೆ ಇಡಬೇಕಾಗಿದ್ದು ಪ್ರಸಕ್ತ ಸಾಧು ಸಂತರ ಹತ್ಯೆಯಂತಹ ದುಷ್ಕೃತ್ಯಗಳು ಮರುಕಳಿಸದಂತೆ ದಿಟ್ಟ ಕ್ರಮವನ್ನು ಕೈಗೊಳ್ಳಬೇಕೆಂದು ನಾವು ಆಗ್ರಹಿಸುತ್ತೇವೆ
ಜಗತ್ತೇ ಮಹಾ ಆತಂಕದಲ್ಲಿರುವಾಗ ಭಾರತವು ಅದರ ಜೊತೆಗೆ ಮತೀಯ ಸಮಸ್ಯೆಯಿಂದ ಇನ್ನಷ್ಟು ಆತಂಕಗೊಳ್ಳಲಿ ಎಂಬ ಈ ದುಷ್ಟರ ಪಿತೂರಿಯನ್ನು ನಾವೆಲ್ಲರೂ ಅತ್ಯಂತ ಸಂಯಮದಿಂದ ವಿಫಲ ಗೊಳಿಸಬೇಕೆಂದು ಈ ಸಂದರ್ಭದಲ್ಲಿ ನಾವು ಜನತೆಯನ್ನು ಕೇಳಿಕೊಳ್ಳುತ್ತೇವೆ.
ಈ ವಿಷಯದಲ್ಲಿ ಎಲ್ಲಾ ಸಾಧುಸಂತ ಯತಿಗಳು ಒಗ್ಗಟ್ಟಾಗಿ ನಿಲ್ಲಬೇಕೆಂದು ನಾವು ಹಾರೈಸುತ್ತೇವೆ.ದೇಶದ ನಾಯಕರಿಗೆ ಸಂಪೂರ್ಣ ಬೆಂಬಲ ನೀಡುವ ಮೂಲಕ ಈ ಸಂಕಷ್ಟದಿಂದ ಪಾರಾಗಲು ಎಲ್ಲರೂ ಸಹಕರಿಸಬೇಕೆಂದು ಪುತ್ತಿಗೆ ಶ್ರೀಗಳು ತಿಳಿಸಿರುವರು.
ದಿನೇಶ್ ಕುಲಾಲ್ ಮುಂಬೈ
Click this button or press Ctrl+G to toggle between Kannada and English