ಮುಂಬೈ : ಪಾಲಘರದಲ್ಲಿ ‘ಶ್ರೀ ಪಂಚ ದಶನಾಮ ಜುನಾ ಆಖಾಡಾ’ದ ಸಂತ ಕಲ್ಪವೃಕ್ಷಗಿರಿ ಮಹಾರಾಜ ಹಾಗೂ ಸುಶೀಲಗಿರಿ ಮಹಾರಾಜ, ಅದೇರೀತಿ ಅವರ ವಾಹನ ಚಾಲಕನನ್ನು ಹಿಂಸಾತ್ಮಕ ಜನಸಮೂಹವು ಪೊಲೀಸರ ಎದುರೇ ತೀವ್ರವಾಗಿ ಥಳಿಸಿ ಬರ್ಬರವಾಗಿ ಹತ್ಯೆ ಮಾಡಲಾಯಿತು. ಈ ಸಂದರ್ಭದ ಬಹಿರಂಗಗೊಂಡಿದ್ದ ಒಂದು ವಿಡಿಯೋದಲ್ಲಿ ಪೊಲೀಸರೇ ಆ ವೃದ್ಧ ಸಂತರನ್ನು ಹಿಂಸಾತ್ಮಕ ಸಮೂಹದವರಿಗೆ ಒಪ್ಪಿಸುತ್ತಿರುವ ಹಾಗೂ ಪೊಲೀಸರ ಎದುರೇ ಅವರ ಬರ್ಬರವಾಗಿ ಹತ್ಯೆಯಾಗುತ್ತಿರುವ ಭಯಾನಕ ಸತ್ಯವು ಬಹಿರಂಗವಾಗಿದೆ. ಒಂದು ವೇಳೆ ಜನರ ರಕ್ಷಣೆಯ ಜವಾಬ್ದಾರಿಯನ್ನು ಹೊಂದಿರುವ ಪೊಲೀಸರೇ ಹತ್ಯೆ ಮಾಡುವವರಿಗೆ ಸಹಾಯ ಮಾಡುತ್ತಿದ್ದಲ್ಲಿ, ಜನರು ಯಾರ ಮೇಲೆ ನಂಬಿಕೆ ಇಡಬೇಕು ? ಈ ಹಿಂದೆಯೂ ಮಹಾರಾಷ್ಟ್ರದ ಠಾಣೆ ಎಂಬಲ್ಲಿ ಪೊಲೀಸರು ಓರ್ವ ಹಿಂದುತ್ವವಾದಿಯನ್ನು ಆತನ ಮನೆಯಿಂದ ಕರೆದೊಯ್ದು ಮಂತ್ರಿಯ ಬಂಗಲೆಯಲ್ಲಿ ಅಮಾನುಷವಾಗಿ ಥಳಿಸಿದ ಬಗ್ಗೆ ಬಹಿರಂಗವಾಗಿತ್ತು. ತುಕಾರಾಮ ಓಂಬಳೆ ಇವರ ಬಲಿದಾನದಿಂದಾಗಿ ಹೆಚ್ಚಾಗಿದ್ದ ಪೊಲೀಸರ ಗೌರವ ಈ ರೀತಿಯ ಘಟನೆಗಳಿಂದಾಗಿ ಗೌರವ ಕುಂದುತ್ತಿದೆ. ಈ ಘಟನೆಯು ಸಂತರ ಭೂಮಿ ಎಂದೇ ಹೇಳಲಾಗುವ ಮಹಾರಾಷ್ಟ್ರಕ್ಕೆ ಕಪ್ಪುಚುಕ್ಕೆಯಾಗಿದೆ. ಪದೇ ಪದೇ ಹಿಂದೂಗಳನ್ನು ಗುರಿಯಾಗಿಸುವ ಹಿಂಸಾತ್ಮಕ ಘಟನೆಯನ್ನು ತಡೆಗಟ್ಟಲು ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯವಿದೆ. ಪಾಲಘರ ಪ್ರಕರಣದಲ್ಲಿ ಉನ್ನತ ಮಟ್ಟದ ತನಿಖೆಯನ್ನು ಮಾಡಿ ಆರೋಪಿಯಾಗಿರುವ ಹಿಂಸಾತ್ಮಕ ಸಮೂಹ ಸಹಿತ ಸಂಬಂಧಪಟ್ಟ ಪೊಲೀಸರ ಮೇಲೆಯೂ ೩೦೨ ರ ಅಪರಾಧವನ್ನು ದಾಖಲಿಸಬೇಕು, ಅದೇರೀತಿ ದೋಷಿ ಪೊಲೀಸರನ್ನು ಸೇವೆಯಿಂದ ವಜಾಗೊಳಿಸಬೇಕು, ಎಂಬುದು ನಮ್ಮ ಬೇಡಿಕೆಯಾಗಿದೆ.
ಸರಕಾರವು ಇದರ ಬಗ್ಗೆ ನಿಖರವಾದ ಮಾಹಿತಿಯನ್ನು ಜನರಿಗೆ ನೀಡಬೇಕು. ‘ಲಾಕ್‌ಡೌನ್’ನ ಸಂಚಾರನಿಷೇಧದ ಕಾಲದಲ್ಲಿ ಪಾಲಘರನಲ್ಲಿ ನೂರಾರು ಜನರ ಸಮೂಹವು ರಾತ್ರಿಯ ಸಮಯದಲ್ಲಿ ಒಟ್ಟಾಗಿ ಸೇರಿ ಕೋಲುಗಳೊಂದಿಗೆ ಹೊರಬರುತ್ತದೆ ಮತ್ತು ಸಂತರು ಪೊಲೀಸರಲ್ಲಿ ರಕ್ಷಣೆಯನ್ನು ಕೇಳುತ್ತಿರುವಾಗ ಅವರನ್ನು ಬರ್ಬರವಾಗಿ ಹತ್ಯೆ ಮಾಡುತ್ತದೆ, ಇದು ಮೈ ನಡುಗಿಸುವ ದೃಶ್ಯವಾಗಿದೆ. ‘ಶ್ರೀ ಪಂಚ ದಶನಾಮ ಜುನಾ ಆಖಾಡಾ’ ಇದು ದೇಶದ ೧೩ ಆಖಾಡಾಗಳಲ್ಲಿಯ ಎಲ್ಲಕ್ಕಿಂತ ದೊಡ್ಡ ಆಖಾಡಾವಾಗಿದೆ. ಆದ್ದರಿಂದ ದೇಶದಾದ್ಯಂತ ಆಕ್ರೋಶದ ಅಲೆ ಎದ್ದಿದೆ. ಆದ್ದರಿಂದ ಸರಕಾರವು ಈ ಪ್ರಕರಣದಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕು, ಎಂಬುದು ನಮ್ಮ ಬೇಡಿಕೆಯಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ರಾಷ್ಟ್ರೀಯ ವಕ್ತಾರರಾದ ರಮೇಶ ಶಿಂದೆ ಹೇಳಿದ್ದಾರೆ.
Click this button or press Ctrl+G to toggle between Kannada and English