ಬಂಟ್ವಾಳ ಕಸಬಾದ ನಾಲ್ಕನೇ ಮಹಿಳೆಗೆ ಕೋವಿಡ್-19 ಸೋಂಕು ದೃಢ, ಈಕೆ ಮೃತ ಮಹಿಳೆಯ ಮಗಳು

2:56 PM, Saturday, April 25th, 2020
Share
1 Star2 Stars3 Stars4 Stars5 Stars
(No Ratings Yet)
Loading...

Bantwal ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಮತ್ತೋರ್ವ ಮಹಿಳೆಗೆ ಕೋವಿಡ್-19 ಸೋಂಕು ದೃಢವಾಗಿದೆ. ಈಕೆ ಸದ್ಯ ಕೋವಿಡ್-19 ಸೋಂಕಿನ ಕಾರಣದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯ ಮಗಳಾಗಿದ್ದು, ಒಂದೇ ಕುಟುಂಬದ ಇಬ್ಬರು ಸೋಂಕಿತರಾದಂತಾಗಿದೆ.

ಏಪ್ರಿಲ್ 21ರಂದು ಪಾಸಿಟಿವ್ ವರದಿ ಬಂದಿದ್ದ ಸೋಂಕಿತ ಸಂಖ್ಯೆ409 ವೃದ್ದೆಯ ಸಂಪರ್ಕದಿಂದ ಆಕೆಯ 39 ವರ್ಷದ ಮಗಳಿಗೆ ಸೋಂಕು ಹರಡಿದೆ. ಇವರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಕೆಯನ್ನೂ ಎಪ್ರಿಲ್ 19ರಂದೇ ಮಂಗಳೂರಿನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.

ಇದರಿಂದಾಗಿ ದಕ್ಷಿಣ ಕನ್ನಡದ ಬಂಟ್ವಾಳದ ಕಸಬಾ ಬಳಿಯ ನಾಲ್ಕು ಮಂದಿಗೆ ಕೋವಿಡ್-19 ಸೋಂಕು ದೃಢವಾದಂತಾಗಿದೆ. ಇವರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

ಏ.19ರಂದು ಬಂಟ್ವಾಳದಲ್ಲಿ ಸೋಂಕಿನ ಕಾರಣದಿಂದ ಬಲಿಯಾಗಿದ್ದ ಮೊದಲ ಮಹಿಳೆ ಬಲಿಯಾಗಿದ್ದರು. ಏ.23 ರಂದು ಮಹಿಳೆಯ ಅತ್ತೆಯೂ ಸೋಂಕಿನ ಕಾರಣದಿಂದ ಸಾವನ್ನಪ್ಪಿದ್ದರು. ಇವರ ನೆರೆಮನೆಯ 67 ವರ್ಷದ ಮಹಿಳೆಗೂ ಸೋಂಕು ತಾಗಿತ್ತು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ ಅವರ ಮಗಳಿಗೂ ಸೋಂಕು ತಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English