ಪಾಲಘರ್ ಸಂತರ ಹತ್ಯೆ : ಅಪರಾಧಿಗಳ ಉಗ್ರಶಿಕ್ಷೆಗೆ ಆಗ್ರಹಿಸಿ ರಾಷ್ಟ್ರಪತಿಗೆ ಜಿಲ್ಲಾಧಿಕಾರಿಯವರ ಮೂಲಕ ಮನವಿ

11:15 PM, Tuesday, April 28th, 2020
Share
1 Star2 Stars3 Stars4 Stars5 Stars
(No Ratings Yet)
Loading...

palgharಮಂಗಳೂರು  :  ಮಹಾರಾಷ್ಟ್ರದ ಪಾಲಘಾರ್ ಗ್ರಾಮದಲ್ಲಿ ಕಳೆದ ಗುರುವಾರ ಏಪ್ರಿಲ್ 16, 2020 ರಂದು ಇಬ್ಬರು ಸಾಧುಗಳು ಹಾಗು ಅವರ ಸಹಾಯಕ ಸೇರಿದಂತೆ 3 ಜನರ ನಿರ್ದಯವಾದ ಬರ್ಬರ ಹತ್ಯೆ ನಡೆದಿರುವುದು ಸಂಪೂರ್ಣ ಹಿಂದುಸಮಾಜಕ್ಕೆ ತೀವ್ರ ಆಘಾತವನ್ನು ಉಂಟುಮಾಡಿದೆ.

ತಮ್ಮ ಗುರುಗಳ ಅಂತ್ಯಕ್ರಿಯೆಗೆಂದು ಮುಂಬೈನಿಂದ ಗುಜರಾತಿಗೆ ತೆರಳುತ್ತಿದ್ದ ಈ ಪೂಜ್ಯ ಸಂತರನ್ನು ಮಕ್ಕಳನ್ನು ಅಪಹರಿಸುವ ಕಳ್ಳರು ಎಂದು ಸುಳ್ಳು ವದಂತಿ ಹಬ್ಬಿಸಿ ನೂರಾರು ಗ್ರಾಮಸ್ಥರು ಲಾಠಿ ಇತ್ಯಾದಿ ಮಾರಕಾಸ್ತ್ರಗಳಿಂದ ಸಾಮೂಹಿಕ ಆಕ್ರಮಣ ನಡೆಸಿರುವುದರ ಹಿಂದೆ ಒಂದು ಯೋಜಿತ ಸಂಚು ಇದೆ.

ಈ ಸಂತರ ದಯನೀಯ ನಿಧನಕ್ಕೆ ವಿಶ್ವಹಿಂದು ಪರಿಷದ್ ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ.ಈ ಸಾಧುಸಂತರ ಹತ್ಯೆಯನ್ನು ತೀವ್ರವಾಗಿ ಖಂಡಿಸಿತ್ತದೆ ಮಾತ್ರವಲ್ಲದೆ 28 ಏಪ್ರಿಲ್ 2020 ರಂದು ಮಂಗಳವಾರ ಅವರ ದಿವ್ಯಚೇತನಗಳಿಗೆ ವಿಶ್ವಹಿಂದೂ ಪರಿಷದ್ ಕಾರ್ಯಾಲಯ ವಿಶ್ವಶ್ರೀಯಲ್ಲಿ ಶೃದ್ಧಾಂಜಲಿ ಅರ್ಪಿಸಲಾಯಿತು.

ಈ ಘಟನೆ ಕುರಿತು ಉನ್ನತ ಮಟ್ಟದಲ್ಲಿ ತನಿಖೆ ನಡೆಸಿ, ಇದರ ಹಿಂದಿನ ಷಡ್ಯಂತ್ರವನ್ನು ಬಯಲಿಗೆಳೆದು ಅಪರಾಧಿಗಳನ್ನು ಉಗ್ರಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಿಸಿ ರಾಷ್ಟ್ರಪತಿಗೆ ಜಿಲ್ಲಾಧಿಕಾರಿಯವರ ಮೂಲಕ ಮನ ವಿಮಾಡಲಾಯಿತು ಎಂದು ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು

ವಿಶ್ವಹಿಂದೂ ಪರಿಷದ್ ಜಿಲ್ಲಾಧ್ಯಕ್ಷರು ಗೋಪಾಲ್ ಕುತ್ತಾರ್. ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಮೆಂಡನ್,ವಿಭಾಗ ಬಜರಂಗದಳ ಸಂಯೋಜಕ್ ಭುಜಂಗ ಕುಲಾಲ್, ಜಿಲ್ಲಾ ಉಪಾಧ್ಯಕ್ಷರಾದ ಮನೋಹರ್ ಸುವರ್ಣ, ಜಿಲ್ಲಾ ಬಜರಂಗದಳ ಸಂಯೋಜಕ್ ಪುನೀತ್ ಅತ್ತಾವರ್ ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English