ಮಂಗಳೂರು : ಕರ್ನಾಟಕ ರಾಜ್ಯಾದಾದ್ಯಂತ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಲಾಕ್‌ಡೌನ್‌ಆಗಿರುವ ಹಿನ್ನೆಲೆಯಲ್ಲಿ ರಾಜ್ಯದ ಸಹಾಯಕ ಜನತೆ ಹಾಗೂ ಸಂತ್ರಸ್ಥರ ನೆರವಿಗೆ ಸಹಕಾರಿಯಾಗಲು ದಕ್ಷಿಣಕನ್ನಡ ಸಹಕಾರಿ ಹಾಲು ಒಕ್ಕೂಟದ ಉಭಯ ಜಿಲ್ಲೆಗಳ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ದೇಣಿಗೆ ಮೊತ್ತ, ಒಕ್ಕೂಟದ ಸಿಬ್ಬಂದಿಗಳ ಒಂದು ದಿನದ ವೇತನ ಮೊತ್ತ ನ್ನಡ ಸಹಕಾರಿ ಹಾಲು ಒಕ್ಕೂಟವ ಒಟ್ಟಾಗಿ ರೂ.50.00 ಲಕ್ಷ ಸಹಾಯಧನದ ಚೆಕ್‌ನ್ನುದಿನಾಂಕ 28.04.2020 ರಂದು ಮಾನ್ಯ ಸಹಕಾರ ಸಚಿವರ ಮೂಲಕ ಮಾನ್ಯ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದಕ್ಷಿಣಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾದ ಶ್ರೀ ರವಿರಾಜ ಹೆಗ್ಡೆಯವರು ಹಸ್ತಾಂತರಿಸಿದರು.
ಈ ಸಮಯದಲ್ಲಿ ಕಾರ್ಮಿಕ ಸಚಿವರಾದ ಶ್ರೀ.ಶಿವರಾಮ ಹೆಬ್ಬಾರ, ಪುತ್ತೂರು ಶಾಸಕರಾದ ಶ್ರೀ.ಸಂಜೀವ ಮಠಂದೂರು, ಕ್ಯಾಂಪ್ಕೊಅಧ್ಯಕ್ಷರಾದ ಶ್ರೀಸತೀಶ್ಚಂದ್ರ ಮತ್ತುಡಾ:ಜಿ.ವಿ.ಹೆಗ್ಡೆ, ವ್ಯವಸ್ಥಾಪಕ ನಿರ್ದೇಶಕರುಉಪಸ್ಥಿತರಿದ್ದರು.
Click this button or press Ctrl+G to toggle between Kannada and English