ಕೇರಳದಲ್ಲಿ ಕೋವಿಡ್ ಸೋಂಕು ತಡೆಯಲು ಕೊಡೆಗಳ ಪ್ರಯೋಗ

11:41 PM, Wednesday, April 29th, 2020
Share
1 Star2 Stars3 Stars4 Stars5 Stars
(No Ratings Yet)
Loading...

kerala-umbrellaಕೇರಳ  : ಇದೇನು ಕೊರೋನಾ ವೈರಸ್ ಗಳು ಆಕಾಶದಿಂದ ಉದುರುತ್ತವೆ ಅಂದು ಕೊಂಡ್ರ. ಕೊರೋನಾ ವೈರಸ್ ಗಳಿಗೆ ಕೊಡೆಗಳನ್ನು ಕಂಡರೆ ಭಯವೇ, ಅಲ್ಲವೇ ಅಲ್ಲ. ಜನರು ಸಾರ್ವಜನಿಕ ಸ್ಥಳಗಳಲ್ಲಿ ಕೊಡೆಗಳನ್ನು ಬಿಡಿಸಿಕೊಂಡು ನಿಲ್ಲುವುದರಿಂದ ಸೂಕ್ತ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು  ಸಾಧ್ಯ ಎಂಬುದನ್ನು ಕೇರಳದ ಅಲಪ್ಪುಝ ಜಿಲ್ಲೆಯ ಥನೀರ್ ಮುಕ್ಕೊಂ ಪಂಚಾಯತ್ ವ್ಯಾಪ್ತಿಯಲ್ಲಿ ಸಾಧಿಸಿ ತೋರಿಸಲಾಗಿದೆ.

ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಅಲಪ್ಪುಝಾದಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚಾಗಿತ್ತು. ಈ ಸಂದರ್ಭದಲ್ಲೇ ಕೇರಳ ಹಣಕಾಸು ಸಚಿವರಾಗಿರುವ ಥೋಮಸ್ ಐಸಾಕ್ ಅವರು ಸಾಮಾಜಿಕ ಅಂತರ ಕಾಪಾಡಲು ಈ ‘ಛತ್ರಿ’ ಐಡಿಯಾ ನೀಡಿದರು.

ಇಬ್ಬರು ವ್ಯಕ್ತಿಗಳು ಎರಡು ಛತ್ರಿಗಳನ್ನು ಬಿಡಿಸಿಕೊಂಡು ನಿಂತರೆ ಅವರ ನಡುವೆ ಕನಿಷ್ಟ ಒಂದು ಮೀಟರ್ ನಷ್ಟು ಅಂತರ ಸೃಷ್ಟಿಯಾಗುತ್ತದೆ. ಇದು ಜನರು ತಾವಾಗಿಯೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಪ್ರೇರೇಪಿಸುವಂತ ವಿಷಯವಾಗಿದೆ ಎಂದು ಇಲ್ಲಿನ ಪಂಚಾಯತ್ ಅಧಿಕಾರಿ ರೀಮಾ ಅವರು ವಿವರಿಸುತ್ತಾರೆ.

ಹೀಗಾಗಿ, ಜನರು ತಮ್ಮ ಮನೆಯಿಂದ ಹೊರಬರುವ ಸಂದರ್ಭದಲ್ಲಿ ಕಡ್ಡಾಯವಾಗಿ ಛತ್ರಿಗಳನ್ನು ಹಿಡಿದುಕೊಂಡೇ ಬರಬೇಕೆಂದು ಇಲ್ಲಿನ ಗ್ರಾಮ ಪಂಚಾಯತ್ ಆದೇಶವನ್ನೇ ಹೊರಡಿಸುತ್ತದೆ. ಪರಸ್ಪರ ಒಂದಕ್ಕೊಂದು ತಾಗದ ಛತ್ರಿಗಳು ಕನಿಷ್ಟ ಒಂದು ಮೀಟರ್ ನಷ್ಟು ಅಂತರವನ್ನು ವ್ಯಕ್ತಿಗಳ ನಡುವೆ ಉಂಟುಮಾಡುವುದರಿಂದ ಕೋವಿಡ್ ವೈರಸ್ ಹರಡುವಿಕೆಗೆ ಅಷ್ಟರಮಟ್ಟಿಗೆ ತಡೆಯಾದಂತಾಗುತ್ತದೆ ಎಂಬುದು ಸಚಿವ ಥೋಮಸ್ ಐಸಾಕ್ ಅವರ ಅಭಿಪ್ರಾಯವಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English