ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್‌ನ ಖ್ಯಾತ ನಟ ರಿಷಿ ಕಪೂರ್ ನಿಧನ

2:40 PM, Thursday, April 30th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Rishi Kapoor ಮುಂಬೈ : ಅಮೆರಿಕದಲ್ಲಿ ಕಳೆದ ವರ್ಷ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿದ್ದ ರಿಷಿ ಕಪೂರ್ ಆಗಾಗ್ಗೆ ಅನಾರೋಗ್ಯದ ಸಮಸ್ಯೆಗೆ ಒಳಗಾಗುತ್ತಿದ್ದರು. ಬುಧವಾರ ಬೆಳಿಗ್ಗೆ ಅವರನ್ನು ಮುಂಬೈನ ಎಚ್ ಎನ್ ರಿಲಯನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ.

ರಿಷಿ ಕಪೂರ್ ಅವರು ಕ್ಯಾನ್ಸರ್‌ಗೆ ತುತ್ತಾಗಿರುವುದು 2018ರಲ್ಲಿ ಪತ್ತೆಯಾಗಿತ್ತು. ಬಳಿಕ ಅಮೆರಿಕಕ್ಕೆ ತೆರಳಿ ಸುಮಾರು ಒಂದು ವರ್ಷ ಚಿಕಿತ್ಸೆ ಪಡೆದುಕೊಂಡ ನಂತರ ಕಳೆದ ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಮರಳಿದ್ದರು. ಫೆಬ್ರವರಿಯಲ್ಲಿ ಅನಾರೋಗ್ಯದಿಂದ ಎರಡು ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು.

ಇತ್ತೀಚೆಗೆ ಕೌಟುಂಬಿಕ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರಿಂದ ದೆಹಲಿಯ ಆಸ್ಪತ್ರೆಯೊಂದಕ್ಕೆ ದಾಖಲು ಮಾಡಲಾಗಿತ್ತು. ಅವರು ಸೋಂಕೊಂದರಿಂದ ಸಮಸ್ಯೆಗೆ ಒಳಗಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿದ್ದವು. ಮುಂಬೈಗೆ ಮರಳಿದ ಕೂಡಲೇ ಮತ್ತೆ ಜ್ವರದ ಕಾರಣ ಆಸ್ಪತ್ರೆ ಸೇರಿದ್ದರು. ಆದರೆ ಬೇಗನೆ ಬಿಡುಗಡೆಯಾಗಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದ ಅವರು ಏಪ್ರಿಲ್ 2ರಂದು ಕೊನೆಯ ಬಾರಿ ಟ್ವೀಟ್ ಮಾಡಿದ್ದರು. 1952ರ ಸೆ. 4ರಂದು ಖ್ಯಾತ ನಟ, ನಿರ್ದೇಶಕ ರಾಜ್ ಕಪೂರ್ ಹಾಗೂ ಕೃಷ್ಣಾ ರಾಜ್ ಕಪೂರ್ ಅವರ ಎರಡನೆಯ ಮಗನಾಗಿ ಜನಿಸಿದ ಅವರು ಶ್ರೀ 420 ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು.

ತಮ್ಮ ಸಹನಟಿಯಾಗಿದ್ದ ನೀತು ಸಿಂಗ್ ಅವರೊಂದಿಗೆ 1980ರ ಜನವರಿ 22ರಂದು ವೈವಾಹಿಕ ಬದುಕಿಗೆ ಕಾಲಿರಿಸಿದ ಅವರು ರಿಧಿಮಾ ಕಪೂರ್ ಮತ್ತು ಪ್ರಸಿದ್ಧ ನಟ ರಣಬೀರ್ ಕಪೂರ್ ಅವರನ್ನು ಅಗಲಿದ್ದಾರೆ. ಬಾಲಿವುಡ್‌ನ ಹಿರಿಯ ಮತ್ತು ಕಿರಿಯ ತಲೆಮಾರಿನ ಕಲಾವಿದರಿಗೆ ಆತ್ಮೀಯರಾಗಿದ್ದ ಅವರ ಅಗಲುವಿಕೆ ಚಿತ್ರರಂಗದ ದುಃಖವನ್ನು ಇಮ್ಮಡಿಗೊಳಿಸಿದೆ.

ರಿಷಿ ಕಪೂರ್ ಅವರಿಗೆ ಪತ್ನಿ ಮತ್ತು ನಟ ನೀತು ಕಪೂರ್, ಮಗ ರಣಬೀರ್ ಕಪೂರ್ ಮತ್ತು ಮಗಳು ರೋಧಿಮಾ ಕಪೂರ್ ಸಾಹ್ನಿ ಅವರನ್ನು ಅಗಲಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English