ವಾಷಿಂಗ್ಟನ್ : ಭಾರತ ಮೂಲದ ದಂಪತಿಗಳು ಅಮೆರಿಕದ ನ್ಯೂಜೆರ್ಸಿ ನಗರದಲ್ಲಿ ಸಂಶಯಾಸ್ಪದವಾಗಿ ಕೊಲೆಯಾಗಿದ್ದಾರೆ.
ಮನೆಯಲ್ಲಿ ಗರ್ಭಿಣಿ ಪತ್ನಿ ಕೊಲೆಯಾಗಿದ್ದರೆ ಅದೇ ನಗರದ ಹಡ್ಸನ್ ನದಿಯಲ್ಲಿ ಆಕೆಯ ಗಂಡ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.
ಮೃತರನ್ನು ಭಾರತ ಮೂಲದ ಮೋಹನ್ ಮಾಲ್ (37) ಮತ್ತು ಗರಿಮಾ ಕೊಠಾರಿ (35) ಎಂದು ಗುರುತಿಸಲಾಗಿದೆ.
ಗರಿಮಾ ತನ್ನ ಮನೆಯಲ್ಲಿ ಕೊಲೆಯಾಗಿದ್ದರೆ, ಅದೇ ನಗರದ ಹಡ್ಸನ್ ನದಿಯಲ್ಲಿ ಮೋಹನ್ ಮಾಲ್ ಮೃತ ದೇಹ ಪತ್ತೆಯಾಗಿದೆ.
ಗರಿಮಾ ಕೊಠಾರಿ ಅವರನ್ನು ಹಲವಾರು ಬಾರಿ ಚುಚ್ಚಿ ಕೊಲೆ ಮಾಡಲಾಗಿದೆ. ಆಕೆಯ ಮರಣೋತ್ತರ ಪರೀಕ್ಷೆಯಲ್ಲಿ ಆಕೆ ಕೊಲೆಯದಾಗ 5 ತಿಂಗಳ ಗರ್ಭಿಣಿ ಎಂದು ತಿಳಿದು ಬಂದಿದೆ. ಇದಾದ ನಂತರ ಮೋಹನ್ ಜೆರ್ಸಿ ನಗರದ ಹಡ್ಸನ್ ನದಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದಂಪತಿಯ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಅಮೆರಿಕ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಾಥಮಿಕ ತನಿಖೆಯಲ್ಲಿ ಮೋಹನ್ ಮಾಲ್ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಆದರೆ ಗಾರಿಮಾ ಅವರನ್ನು ಯಾರು ಕೊಲೆ ಮಾಡಿದ್ದಾರೆ ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ಆದರೆ ಕೌಟುಂಬಿಕ ಕಾರಣದಿಂದ ಮೋಹಲ್ ಮಾಲ್ ಅವರೇ ತನ್ನ ಪತ್ನಿಯನ್ನು ಕೊಂದು ನಂತರ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ಸಂಬಂಧ ಜೆರ್ಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಭಾರತ ಮೂಲದವರಾದ ಈ ದಂಪತಿ, ವಿದ್ಯಾಭ್ಯಾಸದ ಸಂಬಂಧ ಅಮೆರಿಕಗೆ ಬಂದಿದ್ದರು. ಮೋಹನ್ ಮಾಲ್ ಇಂಡಿಯಾ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಯ ಹಳೆಯ ವಿದ್ಯಾರ್ಥಿಯಾಗಿದ್ದು, ಅವರು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಯುಎಸ್‍ಗೆ ಬಂದಿದ್ದರು. ಜೊತೆಗೆ ಕೊಠಾರಿ ಅವರು ಅನೋನ್ಯ ವಾಗಿದ್ದು , ಅಮೆರಿಕಾದಲ್ಲಿ ನುಕ್ಕಡ್ ಎಂಬ ರೆಸ್ಟೋರೆಂಟ್ ನಡೆಸುತ್ತಿದ್ದರು.
ಈ ವಿಚಾರವಾಗಿ ಮಾಹಿತಿ ನೀಡಿರುವ ಅವರ ರೆಸ್ಟೋರೆಂಟ್ ಕೆಲಸ ಮಾಡುವವರು, ಅವರು ತುಂಬ ಒಳ್ಳೆಯ ದಂಪತಿಯಾಗಿದ್ದರು ಎಂಬ ಹೇಳಿದ್ದಾರೆ. ಜೊತೆಗೆ ಅವರ ಕುಟುಂಬಸ್ಥರು ಮಾತನಾಡಿ, ಮೋಹನ್ ಬಹಳ ಬುದ್ಧಿವಂತ ಜೊತೆಗೆ ಪತ್ನಿಯ ಮೇಲೆ ಕಾಳಜಿ ಇದ್ದ ವ್ಯಕ್ತಿ. ಕೊಠಾರಿ ಕೂಡ ಸ್ನೇಹಜೀವಿ ಅವಳಿಗೆ ಅಡುಗೆ ಮಾಡುವ ಕೆಲಸ ಎಂದರೆ ಬಹಳ ಇಷ್ಟ ಎಂದು ಮಾಹಿತಿ ನೀಡಿದ್ದಾರೆ.
Click this button or press Ctrl+G to toggle between Kannada and English