ಅಡಿಕೆ ಹಾಗೂ ಬಾಳೆ ಗಿಡಗಳನ್ನು ಕಡಿದು ನಾಶ ಮಾಡಿದ ಸಹೋದರ

11:07 PM, Thursday, April 30th, 2020
Share
1 Star2 Stars3 Stars4 Stars5 Stars
(No Ratings Yet)
Loading...

Vitla Farmವಿಟ್ಲ : ಕೋಪಗೊಂಡ ಅಣ್ಣನೊರ್ವ ತಮ್ಮನ ತೋಟಕ್ಕೆ ಪ್ರವೇಶ ಮಾಡಿ ಅಡಿಕೆ ಹಾಗೂ ಬಾಳೆ ಗಿಡಗಳನ್ನು ಕಡಿದು ನಾಶ ಮಾಡಿದ ಘಟನೆ ವಿಟ್ಲ ಹೋಬಳಿಯ ಕೆದಿಲ ಗ್ರಾಮದ ಗಾಣದಕೊಟ್ಯದಲ್ಲಿ ನಡೆದದಿದೆ.

ಚಂದು ಮೂಲ್ಯ ಎಂಬವರ  ಸುಮಾರು 1.20 ಎಕರೆ ರಾಷ್ಟ್ರೀಯ ಹೆದ್ದಾರಿಯ ವಿಚಾರಕ್ಕಾಗಿ ಸರ್ಕಾರ ಸ್ವಾಧೀನಕ್ಕೆ ತೆಗೆದುಕೊಂಡಿತ್ತು. ಈ ಬಳಿಕ ಉಳಿದ ಜಾಗ ದಲ್ಲಿ ಬಾಳೆ ಗಿಡ ಮತ್ತು ಅಡಿಕೆ ಗಿಡ ಬೆಳೆದಿದ್ದರು.

ಡೊಂಬಯ್ಯ ಎನ್ನುವ ವ್ಯಕ್ತಿ ಸಹೋದರನ ತೋಟದ 15 ಅಡಿಕೆ ಮರ ಮತ್ತು 7 ಬಾಳೆ ಸಸಿಗಳನ್ನು ಕಡಿದುಹಾಕಿದ್ದಾರೆ ಎನ್ನಲಾಗಿದೆ. ಉಳಿದ ಹಲವು ಗಿಡಗಳಿಗೆ ಆಯುಧದಿಂದ ಬಲವಾಗಿ ಕಡಿಯಲಾಗಿದೆ. ದಾಳಿಗೊಳಗಾದ ಅಷ್ಟೂ ಸಸಿಗಳು ಯಾವುದೇ ಕ್ಷಣದಲ್ಲಿಯೂ ಧರೆಗೆ ಉರುಳಬಹುದು ಅಥವಾ ಸತ್ತು ಹೋಗಬಹುದಾದ ರೀತಿಯಲ್ಲಿ ಉಳಿದುಕೊಂಡಿದೆ.

ಚಂದು ಮೂಲ್ಯ ಮತ್ತು ಅವರ ಸಹೋದರ ಡೊಂಬಯ್ಯ ಮೂಲ್ಯ ಅವರ ನಡುವೆ ಇರುವ ಜಾಗದ ತಕರಾರು ಉಚ್ಛ ನ್ಯಾಯಾಲಯದಲ್ಲಿ ಇತ್ಯರ್ಥಗೊಂಡಿದ್ದು, ಚಂದು ಮೂಲ್ಯ ಅವರ ಪರ ತೀರ್ಪು ಲಭ್ಯವಾಗಿತ್ತು. ಇದನ್ನೇ ದ್ವೇಷವಾಗಿಟ್ಟುಕೊಂಡು ಡೊಂಬಯ್ಯ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

ಚಂದು ಮೂಲ್ಯ ಮತ್ತು ಅವರ ಪುತ್ರ ನಿವೃತ್ತ ಸೈನಿಕ ಜನಾರ್ದನ ಕುಲಾಲ್ ನೀಡಿದ ದೂರಿನಂತೆ  ತನಿಖೆ ನಡೆಸಿ ಪುತ್ತೂರು ನಗರ ಠಾಣೆಯ ಸಿಬ್ಬಂದಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English