ಉಡುಪಿ : ಸೆಕ್ಯುರಿಟಿ ಗಾರ್ಡ್ ಮಹಿಳೆಯೊಬ್ಬರನ್ನು ಸಹಾಯ ನೀಡುವ ನೆಪದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಮೇ 2 ರ ಶನಿವಾರ ಉಡುಪಿ ಸಂತೆಕಟ್ಟೆ ಯಲ್ಲಿ ನಡೆದಿದೆ.
ಬ್ರಹ್ಮಾವರದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆ, ಸಂತೆಕಟ್ಟೆ ಯಲ್ಲಿರುವ ತನ್ನ ಮನೆಯ ಕಡೆಗೆ ಹೋಗುತ್ತಿದ್ದಾಗ ಮೋಟಾರ್ ಬೈಕಿನಲ್ಲಿ ಬಂದ ವ್ಯಕ್ತಿ ನನಗೆ ಸಹಾಯ ಮಾಡಲು ಮುಂದಾದರು, ನಾನು ಅದ್ಕಕೆ ಒಪ್ಪಿ ಅವರ ಬೈಕಿನಲ್ಲಿ ಹಿಂಬದಿ ಸವಾರಳಾಗಿ ಹೋದೆ ಆದರೆ ಆ ವ್ಯಕ್ತಿ ಬೇರೆ ಮಾರ್ಗದಲ್ಲಿ ಕರೆದೊಯ್ದ ಅತ್ಯಾಚಾರಕ್ಕೆ ಯತ್ನಿಸಿದರು ಎಂದು ದೂರು ನೀಡಿದ್ದಾರೆ.
ಆಕೆ ಸಲ್ಲಿಸಿದ ದೂರಿನ ಪ್ರಕಾರ, ಅವರು ಕಾಲ್ನಡಿಗೆಯಲ್ಲಿ ಸಂತೆಕಟ್ಟೆ ಕಡೆಗೆ ಹೋಗುತ್ತಿದ್ದರು, ಮೋಟಾರ್ ಬೈಕಿನಲ್ಲಿದ್ದ ವ್ಯಕ್ತಿ ಅವಳನ್ನು ಮನೆಗೆ ಬಿಡಲು ಮುಂದಾದ, ಆದರೆ ಆಕೆ ಬೈಕಿನಲ್ಲಿ ಕುಳಿತ ಬಳಿಕ ಮನೆಗೆ ಬಿಡುವ ಬದಲು ಅವಳನ್ನು ಬೈಕಾಡಿ-ಕುಂಜಾಲ್ ರಸ್ತೆಯ ಕಡೆಗೆ ಹತ್ತಿರದ ಅರಣ್ಯ ಪ್ರದೇಶಕ್ಕೆ ಕರೆದೊಯ್ದ. ಅವನ ಈ ನಡೆಯ ಬಗ್ಗೆ ಎಚ್ಛೆತ್ತು ಕೊಂಡ ಮಹಿಳೆ ಅನುಮಾನಗೊಂಡು ಅವನಿಂದ ತಪ್ಪಿಸಿ ಕೊಂಡು, ಬ್ರಹ್ಮಾವರ ಪೊಲೀಸ್ ಠಾಣೆಯನ್ನು ತಲುಪಿ ಪ್ರಕರಣದ ಬಗ್ಗೆ ಪೊಲೀಸರಲ್ಲಿ ವಿವರಿಸಿದರು.
ಮಹಿಳೆಯ ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಯ ಮೇಲೆ ಪೊಲೀಸರು ದೂರು ದಾಖಲಿಸಿದ್ದು, ಆತನನ್ನು ಪತ್ತೆ ಹಚ್ಚಲು ಪತ್ತೆ ಹಚ್ಚಲು ತಂಡ ರಚಿಸಿದ್ದಾರೆ.
Click this button or press Ctrl+G to toggle between Kannada and English