ಮಂಗಳೂರು : ನಗರ ಉತ್ತರ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರು ಕೊಡುಗೆಯಾಗಿ ನೀಡಿದ ಗಂಟಲದ್ರವ ಸಂಗ್ರಹ ಮೊಬೈಲ್ ನೂತನ ವಾಹನವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿಯವರು ಸಂಸದರೂ, ಭಾಜಪಾ ರಾಜ್ಯಾಧ್ಯಕ್ಷರೂ ಆಗಿರುವ ಶ್ರೀ ನಳಿನ್ ಕುಮಾರ್ ಕಟೀಲ್ ಅವರ ಉಪಸ್ಥಿತಿಯಲ್ಲಿ ಜಿಲ್ಲಾಡಳಿತಕ್ಕೆ ಭಾನುವಾರ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಡಾ.ವೈ ಭರತ್ ಶೆಟ್ಟಿಯವರು ಮುಂದಿನ ದಿನಗಳಲ್ಲಿ ಈ ಸ್ಯಾಂಪಲ್ ಕಲೆಕ್ಷನ್ ಯೂನಿಟ್ ಜಿಲ್ಲೆಯ ವಿವಿಧ ಭಾಗಗಳಿಗೆ ತೆರಳಿ ಗಂಟಲದ್ರವ ಸಂಗ್ರಹ ಮಾಡಲಿದೆ. ಈಗ ಬಳಸಲಾಗುತ್ತಿರುವ ಪಿಪಿಇ ಕಿಟ್ ದುಬಾರಿಯಾಗಿರುವುದರಿಂದ ಹೆಚ್ಚೆಚ್ಚು ಜನರ ಗಂಟಲದ್ರವದ ಸ್ಯಾಂಪಲ್ ಸಂಗ್ರಹಿಸುವ ನಿಟ್ಟಿನಲ್ಲಿ ಇಂತಹ ವ್ಯವಸ್ಥೆ ಅತ್ಯಗತ್ಯವಾಗಿತ್ತು. ತಾವು ಮತ್ತು ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತ ಬಂಧುಗಳ ನೆರವಿನಿಂದ ಈ ವಾಹನವನ್ನು ವಿಶೇಷವಾಗಿ ತಯಾರಿಸಲಾಗಿದೆ. ಈ ವಾಹನದಲ್ಲಿ ಉತ್ತಮ ವ್ಯವಸ್ಥೆ ಇದ್ದು ಗಂಟಲದ್ರವ ಸಂಗ್ರಹಕ್ಕೆ ಅನುಕೂಲವಾಗು ವಂತೆ ವಾಹನವನ್ನು ಸಿದ್ಧಗೊಳಿಸಲಾಗಿದೆ. ಇದರಲ್ಲಿ ಸಂಪೂರ್ಣ ಉಚಿತವಾಗಿ ಸಂಪೂರ್ಣ ಸುರಕ್ಷತೆಯೊಂದಿಗೆ ಗಂಟಲದ್ರವ ಸಂಗ್ರಹ ನಡೆಸಲಾಗುವುದು ಎಂದರು.
ಶಾಸಕ ಡಿ ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್, ಅಪರ ಜಿಲ್ಲಾಧಿಕಾರಿ ರೂಪಾ, ನಿರ್ಮಿತಿ ಕೇಂದ್ರದ ಹಿರಿಯ ನಿರ್ದೇಶಕ ರಾಜೇಂದ್ರ ಕಲ್ಬಾವಿ, ಮಂಗಳೂರು ಉತ್ತರ ಭಾಜಪಾ ಅಧ್ಯಕ್ಷ ತಿಲಕರಾಜ್ ಕೃಷ್ಣಾಪುರ, ಬಿಜೆಪಿ ಪ್ರಮುಖರಾದ ಸಂದೀಪ್ ಪಚ್ಚನಾಡಿ, ರಾಜೇಶ್ ಕೊಟ್ಟಾರಿ, ಜಗದೀಶ್ ಶೇಣವ ಮತ್ತಿತ್ತರರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English