ಮಂಗಳೂರು : ಲಾಕ್‌ಡೌನ್‌ನಿಂದ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸಿಕ್ಕಿಹಾಕಿ ಕೊಂಡ ಸುಮಾರು ಇನ್ನೂರಕ್ಕೂ ಹೆಚ್ಚು ಕಾರ್ಮಿಕರು ಮಾಹಿತಿ ಇಲ್ಲದೆ ಮಂಗಳೂರು ಜಿಲ್ಲಾಧಿಕಾರಿ ಕಛೇರಿ ಬಳಿ ಮಂಗಳವಾರ ಪರದಾಡುತ್ತಿದ್ದು ಕಂಡು ಬಂತು.
ಮೇ ನಾಲ್ಕರಿಂದ ಮಧ್ಯಾಹ್ನ 12 ರ ಬದಲಿಗೆ 7 ಗಂಟೆಯ ವರೆಗೆ ಜಿಲ್ಲಾಡಳಿತ ಸಡಿಲಿಕೆ ನೀಡಿದೆ. ಜಿಲ್ಲೆಯಲ್ಲಿರುವ ಕಾರ್ಮಿಕರು ಬೇರೆ ರಾಜ್ಯಗಳಿಗೆ ಹೋಗಲು ವ್ಯವಸ್ಥೆ ಮಾಡಿಕೊಡುತ್ತೇನೆಂದ ಜಿಲ್ಲಾಡಳಿತ ಯಾವುದೇ ವ್ಯವಸ್ಥೆಯನ್ನು ಮಾಡಿಲ್ಲ ಎಂದು ಅಲ್ಲಿದ್ದ ಕಾರ್ಮಿಕರು ದೂರಿದರು. ಜಿಲ್ಲಾಧಿಕಾರಿ ಕಚೇರಿಗೆ ಹೋದ ಸುಮಾರು ನೂರಕ್ಕೂ ಹೆಚ್ಚಿನ ಕಾರ್ಮಿಕರನ್ನು ಅಲ್ಲಿನ ಸಿಬ್ಬಂದಿಗಳು ಎಸಿ ಕಚೇರಿಗೆ ಹೋಗಿ ಎಂದು ಹೊರಕಳುಹಿಸಿದ್ದಾರೆ ಎನ್ನಲಾಗಿದೆ.
ಮೇ 3 ಭಾನುವಾರದಿಂದ ಮೂರು ದಿನಗಳ ಕಾಲ ರಾಜ್ಯ ಸರಕಾರ ಸರಕಾರೀ ಬಸ್ಸುಗಳನ್ನು ರಾಜ್ಯದೊಳಗಡೆ ಕಾರ್ಮಿಕರಿಗಾಗಿ ಉಚಿತವಾಗಿ ಒದಗಿಸಿದೆ.
Click this button or press Ctrl+G to toggle between Kannada and English