ಉಡುಪಿ: ಮೂರನೇ ಹಂತದ ಲಾಕ್ ಡೌನ್ ನಲ್ಲಿ ಮದ್ಯದಂಗಡಿ ತೆರೆಯುತ್ತಿದಂತೆ ಮಣಿಪಾಲದ ಹಾಸ್ಟೆಲ್, ಪಿಜಿ ಗಳಲ್ಲಿದ್ದ ವಿದ್ಯಾರ್ಥಿನಿಯರು ಸಾರ್ವಜನಿಕವಾಗಿ ಸರತಿಯಲ್ಲಿ ನಿಂತು ಮದ್ಯ ಖರೀದಿಸಿದ ಘಟನೆ ಸೋಮವಾರ ಮಣಿಪಾಲದಲ್ಲಿ ನಡೆದಿದೆ
ಕೊರೊನಾ ಲಾಕ್ ಡೌನ್ ಮೊದಲು ವೀಕೆಂಡ್ ಮೋಜು ಮಸ್ತಿಗಳಲ್ಲಿ ತೊಡಗುತ್ತಿದ್ದ ಈ ಯುವತಿಯರು ಸೋಮವಾರದಿಂದ ಮದ್ಯ ಮಾರಾಟಕ್ಕೆ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆ ಮದ್ಯ ಖರೀದಿ ಗಾಗಿ ಮಟಮಟ ಬಿಸಿಲಲ್ಲೂ ಸರತಿಯ ಮೊರೆ ಹೋಗಿದ್ದರು,
ಮಣಿಪಾಲದ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲಿ ಇರುವ ವಿದ್ಯಾರ್ಥಿನಿಯರು ಲಾಕ್ ಡೌನ್ ನಿಂದ ಊರಿಗೆ ಹೋಗಲಾಗದೆ ಸಿಕ್ಕಿಬಿದ್ದಿದ್ದರು. ಹೊರ ರಾಜ್ಯದ ಸಾವಿರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಇಷ್ಟು ದಿನ ಮದ್ಯ ಸಿಗದೆ ಕಷ್ಟ ಅನುಭವಿಸಿದ್ದರು.
ಸೋಮವಾರ ಮತ್ತೆ ಮದ್ಯ ಮಾರಾಟ ಆರಂಭವಾಗುವ ಸುದ್ದಿ ತಿಳಿದ ವಿದ್ಯಾರ್ಥಿಗಳು ಬೆಳ್ಳಂಬೆಳಗ್ಗೆ ಸಾರ್ವಜನಿಕವಾಗಿ ಸಾಮಾಜಿಕ ಅಂತರವಿಲ್ಲದೆ ಸಾಲು ನಿಂತು ಮದ್ಯ ಖರೀದಿ ಮಾಡಿದರು. ಈ ನಡುವೆ ಒರ್ವ ವಿದೇಶಿ ಮಹಿಳೆ ಕೂಡ ಸಾಲಿನಲ್ಲಿ ಮದ್ಯ ಖರೀದಿಗೆ ನಿಂತಿದ್ದರು.
Click this button or press Ctrl+G to toggle between Kannada and English