ಉಡುಪಿ : ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಬಳಿ ನೂತನವಾಗಿ ನಿರ್ಮಿಸಲಾದ ಸುಸಜ್ಜಿತ ಆರ್‌ಟಿಒ ಕಚೇರಿ ಕಟ್ಟಡ ಪೂರ್ಣಗೊಂಡಿದ್ದು ಉಪಮುಖ್ಯಮಂತ್ರಿ, ಸಾರಿಗೆ ಸಚಿವರಾದ ಆರ್. ಅಶೋಕ್ ಇಂದು ಮಧ್ಯಾಹ್ನ 12 30 ಕ್ಕೆ ಈ ನೂತನ ಕಚೇರಿಯನ್ನು ಉದ್ಘಾಟಿಸಲಿದ್ದಾರೆ.
ಒಟ್ಟು 2.32 ಎಕ್ರೆ ಪ್ರದೇಶದಲ್ಲಿ ಸುಮಾರು 5.94 ಕೋ.ರೂ. ವೆಚ್ಚದಲ್ಲಿ ಕಟ್ಟಡವನ್ನು ನಿರ್ಮಿಸಲಾಗಿದ್ದು, ಕಟ್ಟಡವು ತಳಅಂತಸ್ತು, ನೆಲ ಅಂತಸ್ತು, ಮತ್ತು ಮೊದಲ ಮಹಡಿಗಳನ್ನೊಳಗೊಂಡಿದೆ . ರಾಜ್ಯದ ವಿವಿಧ ಆರ್‌ಟಿಒ ಕಚೇರಿಗಳಲ್ಲಿ ವಿಶಾಲ, ವಿಸ್ತಾರವಾದ ಕಚೇರಿ ಎಂಬ ಹೆಗ್ಗಳಿಕೆ ಮಣಿಪಾಲದ ಕಚೇರಿಗೆ ಪ್ರಾಪ್ತವಾಗಲಿದೆ. ಈ ಹಿಂದಿನ ಕಚೇರಿಯಲ್ಲಿ ಸ್ಥಳಾಭಾವದಿಂದ ಕಡತಗಳ ಸುತ್ತಮುತ್ತ ಸಿಬಂದಿಗಳು ಕುಳಿತುಕೊಳ್ಳಬೇಕಾಗಿತ್ತು ಹಾಗು ಬಂದವರಿಗೆ ನಿಲ್ಲಲು ಜಾಗವಿರಲಿಲ್ಲ ಆದರೆ ಇನ್ನು ಮುಂದೆ ಇಂತಹ ಸಮಸ್ಯೆಗಳು ತಲೆದೋರದಂತೆ ಹೊಸ ಕಚೇರಿ ಕಟ್ಟಡವನ್ನು ನಿರ್ಮಿಸಲಾಗಿದೆ.
ನೂತನ ಆರ್ ಟಿ ಒ ಕಚೇರಿಯಲ್ಲಿ ಬರುವ ವಾಹನಗಳಿಗೆ ನಿಲುಗಡೆ ಅವಕಾಶ, ಬಂದ ಗ್ರಾಹಕರಿಗೆ ಕುಳಿತುಕೊಳ್ಳಲು ಪ್ರತ್ಯೇಕ ಕೊಠಡಿ, ನೋಂದಣಿ-ನಿಯಮಾವಳಿಯಂತಹ ಮಾಹಿತಿಗಳನ್ನು ಡಿವಿಡಿ ಮೂಲಕ ಪ್ರದರ್ಶಿಸುವ ರಸ್ತೆ ಸುರಕ್ಷತಾ ಮಾಹಿತಿ ಕೇಂದ್ರ, ಪ್ರತ್ಯೇಕ ವ್ಯವಸ್ಥಿತ ದಾಖಲೆ-ಕಡತಗಳ ಕೊಠಡಿ ಮೊದಲಾದ ಸುವ್ಯವಸ್ಥೆಗಳನ್ನೂಳಗೊಂಡಿದೆ.
Click this button or press Ctrl+G to toggle between Kannada and English