ಮಂಗಳೂರು: ಅಕ್ಟೋಬರ್ 8 ರಿಂದ ಮೈಸೂರಿನಲ್ಲಿ ನಡೆಯಲಿರುವ ವಿಶ್ವವಿಖ್ಯಾತ ಐತಿಹಾಸಿಕ ಹಿನ್ನೆಲೆಯುಳ್ಳ ಮೈಸೂರು ದಸರಾದ ಪ್ರಚಾರ ಜಾಥಾವನ್ನು ಮಂಗಳೂರು ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಳಾ ನಾಯ್ಕ ಚೆಂಡೆ ಬಡಿಯುವ ಮೂಲಕ ಉದ್ಘಾಟಿಸಿದರು.
ಮೈಸೂರು ವಾರ್ತಾ ಇಲಾಖೆ ಹಾಗೂ ದಸರಾ ಮಹೋತ್ಸವದ ವಿಶೇಷ ಅಧಿಕಾರಿಗಳು ರಾಜ್ಯದ ಹಲವು ಜಿಲ್ಲೆಗಳಲ್ಲಿ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 1 ರವರೆಗೆ ಪ್ರಚಾರ ಜಾಥಾ ನಡೆಸಲಿದ್ದಾರೆ.
ನಾಲ್ಕು ತಂಡಗಳಾದ ಚೈತನ್ಯ ಕಲಾತಂಡ, ಸ್ಪಂದನ ಮಹಿಳಾ ತಂಡ, ವಿವೇಕ ಕಲಾ ತಂಡ ಹಾಗೂ ಚೇತನಾ ಕಲಾ ತಂಡಗಳು ರಾಜ್ಯದ ಹಲವು ಜಿಲ್ಲೆಗಳ ಪ್ರಮುಖ ಪಟ್ಟಣಗಳಲ್ಲಿ ಸಂಚರಿಸಲಿದ್ದಾರೆ.
ಮಂಗಳೂರಿನ ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಮೈಸೂರಿನ ಕಲಾ ತಂಡಗಳು ಯಕ್ಷಗಾನ ವೇಷ, ಹುಲಿ ವೇಷ, ಮಹಿಳೆಯರ ಚೆಂಡೆಯೊಂದಿಗೆ ನಗರದಲ್ಲಿ ಇಂದು ಸಂಚರಿಸಿ ಮೈಸೂರು ದಸರಾದ ಪ್ರಚಾರ ನಡೆಸಿದರು.
ಮಡಿಕೇರಿ, ಧಾರವಾಡ, ಚಿತ್ರದುರ್ಗ, ಕಾರವಾರ, ಮಂಗಳೂರು, ಬೆಳಗಾಂ, ತುಮುಕೂರು ಜಿಲ್ಲೆಗಳಲ್ಲಿ ಮೈಸೂರು ದಸರಾ ಪ್ರಚಾರ ಜಾಥಾ ನಡೆಸಲಿದೆ.
Click this button or press Ctrl+G to toggle between Kannada and English