ಆಮ್ಮಿ ಕೊಂಕಣಿ ಸಾಂಸ್ಕೃತಿಕ ಮಹೋತ್ಸವಕ್ಕೆ ಚಾಲನೆ

12:56 PM, Friday, November 23rd, 2012
Share
1 Star2 Stars3 Stars4 Stars5 Stars
(5 rating, 1 votes)
Loading...

Aami Konkaniಮಂಗಳೂರು :ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ನಗರದ ಪುರಭವನದಲ್ಲಿ ಆಯೋಜಿಸಿರುವ ಆಮ್ಮಿ ಕೊಂಕಣಿ ನಾಲ್ಕು ದಿನಗಳ ಕೊಂಕಣಿ ಸಾಂಸ್ಕೃತಿಕ ಮಹೋತ್ಸವವನ್ನು ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡ ಗುರುವಾರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಯಾವುದೇ ಒಂದು ದೇಶದ, ಸಮುದಾಯದ ಅಸ್ತಿತ್ವ ಅದರ ಭಾಷೆ, ಸಂಸ್ಕೃತಿ, ಸಂಸ್ಕಾರ, ಆಚಾರ ವಿಚಾರಗಳ ಉಳಿವಿನ ಮೇಲಿದೆ. ಒಂದು ಸಮುದಾಯದ ಸಂಸ್ಕೃತಿಯ ಆಚರಣೆ ಎಂದಿಗೂ ಶಾಶ್ವತವಾಗಿ ಉಳಿಯಬೇಕಾದರೆ ಆ ಸಮುದಾಯದ ಭಾಷೆಯನ್ನು ಉಳಿಸಿ ಬೆಳೆಸಬೇಕು.

Aami Konkaniದೇಶದ ವಿವಿಧ ಜನರನ್ನು ಪರಸ್ಪರ ಬೆಸೆಯುವ ಕೆಲಸವನ್ನು ಭಾಷೆ ಮಾಡುತ್ತದೆ. ಒಂದು ದೇಶ, ಸಮುದಾಯವನ್ನು ನಾಶ ಮಾಡಬೇಕಾದರೆ ಆದರ ಭಾಷೆ, ಸಂಸ್ಕೃತಿ, ಸಂಸ್ಕಾರಗಳನ್ನು ನಿರ್ಮೂಲನೆ ಮಾಡಿದರೆ ಸಾಕು ಎಂಬ ಮಾತಿದೆ. ಇದಕ್ಕೆ ಹಲವಾರು ನಿದರ್ಶನಗಳನ್ನು ಜಗತ್ತಿನಲ್ಲಿ ನಾವು ಕಾಣಬಹುದು. ಮುಂದುವರಿದು ರಾಜ್ಯ ಸರಕಾರ ಭಾಷೆ, ಸಂಸ್ಕೃತಿ, ಸಂಸ್ಕಾರಗಳನ್ನು ರಕ್ಷಿಸಿ ಪೋಷಿಸಿಕೊಂಡು ಬರುವ ನಿಟ್ಟಿನಲ್ಲಿ ವಿವಿಧ ಸಾಹಿತ್ಯ ಅಕಾಡೆಮಿಗಳನ್ನು ಸ್ಥಾಪಿಸಿದೆ. ಭಾಷೆಗಳನ್ನು ಉಳಿಸಿ ಬೆಳೆಸುವ ಮಹತ್ತರ ಹೊಣೆಗಾರಿಕೆ ಈ ಅಕಾಡೆಮಿಗಳ ಮೇಲಿದೆ ಎಂದವರು ಹೇಳಿದರು.

Aami Konkaniನಾಲ್ಕುದಿನಗಳ ಕಾಲ ನಡೆಯಲಿರುವ ಆಮ್ಮಿ ಕೊಂಕಣಿ ಸಾಂಸ್ಕತಿಕ ಉತ್ಸವದಲ್ಲಿ ನವೆಂಬರ್ 23ರಂದು ವಿವಿಧ ಕೊಂಕಣಿ ಸಮುದಾಯದ ಮಹಿಳೆಯರಿಂದ 200ಕ್ಕೂ ಹೆಚ್ಚಿನ ವೈವಿಧ್ಯಮಯ ತಿಂಡಿತಿನಿಸುಗಳ ಪ್ರದರ್ಶನ, ಮಹಿಳಾ ಸಾಂಸ್ಕೃತಿಕ ಉತ್ಸವ, ನ. 24ರಂದು ಬಹುಭಾಷಾ ಕವಿಗೋಷ್ಠಿ, ಯುವಸಂಭ್ರಮ್‌ ಎಂಬ ವಿದ್ಯಾರ್ಥಿ ಸಾಂಸ್ಕೃತಿಕೋತ್ಸವ ಮುಂತಾದ ಕಾರ್ಯಕ್ರಮಗಳು ಜರಗಲಿವೆ. 25ರಂದು ಸಮಾರೋಪ ನಡೆಯಲಿದೆ.

Aami Konkaniಸಮಾರಂಭದ ಉದ್ಘಾಟನೆಗು ಮುನ್ನ ನಗರದ ಜ್ಯೋತಿವೃತ್ತದಿಂದ ಪುರಭವನದವರೆಗೆ ಜನಪದ ಕಲಾತಂಡಗಳ ಭವ್ಯ ಮೆರವಣಿಗೆ ನಡೆಯಿತು. ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ಡಾ| ಪ್ರಭಾಕರ ಭಟ್‌ ಮೆರವಣಿಗೆಗೆ ಚಾಲನೆ ನೀಡಿದರು. ತುಳುಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮಾನಾಥ ಕೋಟ್ಯಾನ್‌, ಎನ್‌. ಯೋಗೀಶ್‌ ಭಟ್‌, ಮೀನುಗಾರಿಕಾ ನಿಗಮ ಅಧ್ಯಕ್ಷ ನಿತಿನ್‌ಕುಮಾರ್‌, ಕಾಸರಗೋಡು ಚಿನ್ನಾ, ಅಶೋಕ್‌ ಶೇಟ್‌, ಶ್ರೀಕರ ಪ್ರಭು ಮತ್ತಿತರರು ಉಪಸ್ಥಿತರಿದ್ದರು.

Aami Konkani

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English