ಮದುವೆಯಿಲ್ಲದೆ ಫೋಟೋಗ್ರಾಫರ್ಸ್ ಗೆ ಆದಾಯವಿಲ್ಲಅವರಿಗೂ ಪರಿಹಾರ ಘೋಷಣೆ ಮಾಡಿ : ಯು.ಟಿ.ಖಾದರ್

11:52 PM, Thursday, May 7th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

utKhader ಮಂಗಳೂರು: ಸಿಎಂ ನಿನ್ನೆ ಕೆಲವು ವರ್ಗದ ಜನರಿಗೆ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಆದರೆ ಇದರಲ್ಲಿ ಕೆಲವೊಂದು ವರ್ಗವನ್ನು ಕೈಬಿಟ್ಟಿರೋದು ಸರಿಯಲ್ಲ. ಎಲ್ಲಾ ವರ್ಗದವರಿಗೂ ಪ್ಯಾಕೇಜ್ ಘೋಷಣೆಯಾಗಲಿ ಎಂದು ಶಾಸಕ ಯು.ಟಿ.ಖಾದರ್ ಆಗ್ರಹಿಸಿದ್ದಾರೆ.

ಟೈಲರ್, ಬೀಡಿ ಕಾರ್ಮಿಕರು, ಫೋಟೋಗ್ರಾಫರ್ಸ್, ಮೀನುಗಾರರು ಯಾವುದೇ ಆದಾಯವಿಲ್ಲದೆ 45 ದಿವಸಗಳ ಕಾಲ ಮನೆಯಲ್ಲಿದ್ದಾರೆ. ಇವರನ್ನು ಕಡೆಗಣಿಸಿರೋದು ಸರಿಯಲ್ಲ. ಆದಷ್ಟು ಬೇಗ ಸಿಎಂ ಇವರಿಗೂ ಪ್ಯಾಕೇಜ್ನಲ್ಲಿ ಪರಿಹಾರ ಘೋಷಣೆ ಮಾಡಲಿ ಎಂದು ಖಾದರ್ ಒತ್ತಾಯಿಸಿದರು.

ಇದೀಗ ಸರಕಾರ ಮದ್ಯದಂಗಡಿಗಳನ್ನು ತೆರೆದಿದೆ‌. ಯಾರೋ ಮನವಿ ಕೊಟ್ಟರೆಂದು ಬಟ್ಟೆ ಅಂಗಡಿಗಳನ್ನು ತೆರೆಯಬಹುದು ಎಂದು ಆದೇಶ ನೀಡಿದೆ. ಮುಂದಕ್ಕೆ ಬಸ್ಗಳ ಸಂಚಾರವನ್ನು ಪ್ರಾರಂಭಿಸಿದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರೋದು ಹೇಗೆ? ಯಾರಲ್ಲಿ ಚರ್ಚೆ ನಡೆಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದರು.ವಿದೇಶದಲ್ಲಿರುವವರನ್ನು ಭಾರತಕ್ಕೆ ಮರಳಿ ಕರೆತರುವ ಬಗ್ಗೆ ಸರಕಾರ ಯಾವುದೇ ಮಾಹಿತಿಯನ್ನು ಬಹಿರಂಗಗೊಳಿಸಿಲ್ಲ. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರಕಾರ ಜನರಿಗೆ ಸ್ಪಷ್ಟ ಮಾಹಿತಿ ನೀಡಲಿ. ಜೊತೆಗೆ ವಲಸೆ ಕಾರ್ಮಿಕರನ್ನು ಅವರವರ ತವರಿಗೆ ಕಳಿಸೋದು ಮಾತ್ರವಲ್ಲ, ಅವರನ್ನು ಸ್ವಾಭಿಮಾನದಿಂದ ಬದುಕುವಂತೆ ರಾಜ್ಯ ಸರಕಾರ ಯೋಜನೆ ರೂಪಿಸಲಿ ಎಂದು ಆಗ್ರಹಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English