ಬಂಟ್ವಾಳದಲ್ಲಿ ಮತ್ತೆ ಮೂವರಿಗೆ ಕೋವಿಡ್ -19 ಸೋಂಕು, ಜಿಲ್ಲೆಯಲ್ಲಿ ಜನರಲ್ಲಿ ಮಡುಗಟ್ಟಿದ ಆತಂಕ

1:54 PM, Saturday, May 9th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Bantwal Covidಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಒಂದೇ ಮನೆಯ ಮೂವರಿಗೆ ಇಂದು ಕೋವಿಡ್ -19 ಸೋಂಕು ದೃಢವಾಗಿದೆ. ಇದರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಜನರ ಆತಂಕ ಮತ್ತಷ್ಟು ಹೆಚ್ಚಿದೆ.

ಈ ಹಿಂದೆ ಸೋಂಕು ದೃಢವಾಗಿದ್ದ ಸೋಂಕಿತ ಸಂಖ್ಯೆ 578ರ ಸಂಪರ್ಕದಿಂದ ಈಗ ಮತ್ತೆ ಮೂವರಿಗೆ ಸೋಂಕು ತಾಗಿದೆ. 30 ವರ್ಷದ ಪುರುಷ, 60 ಮತ್ತು 70 ವರ್ಷದ ಇಬ್ಬರು ಮಹಿಳೆಯರಿಗೆ ಕೋವಿಡ್-19 ಸೋಂಕು ತಾಗಿರುವುದು ದೃಢಪಟ್ಟಿದೆ.

ಇವರು ಮೊದಲು ಮೃತಪಟ್ಟಿದ್ದ ಬಂಟ್ವಾಳದ ಮಹಿಳೆಯ ಮಹಿಳೆಯ ದ್ವಿತೀಯ ಸಂಪರ್ಕದವರಾಗಿದ್ದಾರೆ. ಸದ್ಯ ಇವರ ಮನೆಯ ನಾಲ್ವರು ಸದಸ್ಯರಿಗೆ ಕೋವಿಡ್-19 ಸೋಂಕು ತಾಗಿರುವದು ದೃಢವಾಗಿದೆ.

ರಾಜ್ಯದಲ್ಲಿ ಇಂದು ಹೊಸ 36 ಸೋಂಕು ಪ್ರಕರಣಗಳು ದೃಢವಾಗಿದೆ. ಇದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 789ಕ್ಕೆ ಏರಿಕೆಯಾಗಿದೆ. ಇವರಲ್ಲಿ 30 ಜನರು ಮರಣ ಹೊಂದಿದ್ದರೆ, 379 ಪ್ರಕರಣಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದೆ. ಒಂದು ಪ್ರಕರಣ ಕೋವಿಡ್ ಅಲ್ಲದ ಕಾರಣದಿಂದ ಮರಣ ಹೊಂದಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English