ಇಂದು ವಿಶ್ವ ತಾಯಂದಿರ ದಿನ : ಪ್ರಾಣಿ ಪಕ್ಷಿಗಳ ಮಾತೃ ವಾತ್ಸಲ್ಯಕ್ಕೆ ನಾವು ತಲೆಬಾಗಲೇ ಬೇಕು!

2:47 PM, Sunday, May 10th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

monkeyಮಂಗಳೂರು : ಮಾತೃ  ಮಾತ್ಸಲ್ಯ ಬರೀ ಮಾನವ ಕುಲಕ್ಕೆ ಸೀಮಿತವಲ್ಲ, ಅದು ಜಗತ್ತಿನ ಪ್ರತಿಯೊಂದು ಜೀವರಾಶಿಗಳಲ್ಲೂ ಇದೆ. ಮೂಕ ಪ್ರಾಣಿಗಳೂ ತನ್ನ ಮಕ್ಕಳಿಗೆ ತಾಯಿಯ ಪ್ರೀತಿ ತೋರಿಸುತ್ತದೆ. ಮೂಕ ಪ್ರಾಣಿಗಳ ತೋರಿಸುವ ಮಾತೃ ಪ್ರೇಮ ಅತ್ಯಂತ ಭಾವನಾತ್ಮಕ ಪರಿಣಾಮ ಬೀರುವಂತದ್ದು ಎಂದು ಜಗತ್ತು ಒಪ್ಪಿಕೊಂಡಿದೆ.

ಇದಕ್ಕೆ ಒಂದು ದೊಡ್ಡ ನಿದರ್ಶನ ಧರಣಿ ಮಂಡಲದ ಗೋವಿನ ಕಥೆ. ಕರುವನ್ನು ಬಿಟ್ಟು ಬಂದ ತಾಯಿ ಹಸು ತನ್ನನ್ನು ತಿನ್ನಲು ಹಾತೊರೆಯುತ್ತಿದ್ದ ಹುಲಿಗೆ ತನ್ನ ಕಂದಮ್ಮನನ್ನು ಕೊಟ್ಟಿಗೆಯಲ್ಲಿ ಬಿಟ್ಟು ಬಂದಿದ್ದೇನೆ. ಕೊನೆಯ ಬಾರಿ ನನಗೆ ಕಂದಮ್ಮನನ್ನು ನೋಡಲು ಅವಕಾಶ ಕೇಳುವಂತಹ ಸನ್ನಿವೇಶ ಮಾತೃ ವಾತ್ಸಲ್ಯವನ್ನು ಎತ್ತಿತೋರಿಸುವಂತಹ ಸನ್ನಿವೇಶ.

ಪಕ್ಷಿಗಳು ಸಹ ತನ್ನ ಮರಿಗಳಿಗೆ ಪ್ಚಿ ಮಾತ್ಸಲ್ಯ ತೋರಿಸುವ ರೀತಿ ಅದ್ಬುತ, ಮನುಷ್ಯರಿಗಾದರೂ ಬುದ್ದಿ ಇರುತ್ತದೆ, ಬುದ್ದಿ ಜೀವಿಗಳಲ್ಲದ ಪಕ್ಷಿಗಳು ತನ್ನ ಮರಿಗಳನ್ನು ಗೂಡಿನಲ್ಲಿರಿಸಿ ಊರೆಲ್ಲಾ ಸುತ್ತಾಡಿ ತನ್ನ ಕೊಕ್ಕೊಳಗೆ ಅಹಾರವನ್ನು ತುಂಬಿಸಿ ತಂದು ಮರಿಗಳಿಗೆ ಉಣಬಡಿಸುವುದು ಒಂದು ದೊಡ್ಡ ಮಾತೃ ಪ್ರೇಮ. ಗಾಳಿ ಮಳೆ, ಬಿಸಿಲಿನಲ್ಲಿ ತನ್ನ ರೆಕ್ಕೆಯೊಳಗೆ ಬೆಚ್ಚಗೆ ಮರಿಗಳನ್ನು ಕಾಪಾಡುದು ಬೆಲೆ ಕಟ್ಟಲಾಗದಂತಹ ಮಾತೃ ಪ್ರೇಮ ಎಂಬುದು ನಾವು ಒಪ್ಪಿಕೊಳ್ಳಲೇಬೇಕಾದ ಸತ್ಯ.

Monkey

ಇಂದು ನಾವು ಮರ ಗಿಡಗಳನ್ನು ಕಡಿದು ಪ್ರಾಣಿ ಪಕ್ಷಿಗಳ ಸಂತತಿಯನ್ನೇ ನಾಶ ಮಾಡುತ್ತಿದ್ದೇವೆ. ಬುದ್ದಿಜೀವಿಗಳಾದ ನಾವು ನಮ್ಮ ತಾಯಂದಿರು ಕಲಿಸಿದ ಒಳ್ಳೆಯ ಪಾಠವನ್ನು ಮರೆತು ಪ್ರಕೃತಿಯನ್ನು ನಾಶ ಮಾಡುತ್ತಿದ್ದೇವೆ. ನಮ್ಮ ಉಳಿವಿಗೋಷ್ಕರ ಪ್ರಾಣಿ ಪಕ್ಷಿಗಳ, ಜೀವ ಜಂತುಗಳನಾಶ ಎಷ್ಟು ಸರಿ. ನಮಗಿಂತ ಮೂಕ ಪ್ರಾಣಿಗಳ ಮಾತೃ ವಾತ್ಸಲ್ಯ ಮೇಲಲ್ಲವೆ?

ಕಾಂರಿಜೆ ಬೆಟ್ಟದಲ್ಲಿ ಕೋತಿಯೊಂದು ತನ್ನ ಮರಿಗೆ ಹಾಲುಣೆಸುವ ದೃಶ್ಯ ನನ್ನ ಕ್ಯಾಮರಾದಲ್ಲಿ ಇತ್ತೀಚೆಗೆ ಸೆರೆ ಹಿಡಿದ ಕ್ಷಣ.
✍  ಶಿವಪ್ರಸಾದ್.ಟಿ

2 ಪ್ರತಿಕ್ರಿಯ - ಶೀರ್ಷಿಕೆ - ಇಂದು ವಿಶ್ವ ತಾಯಂದಿರ ದಿನ : ಪ್ರಾಣಿ ಪಕ್ಷಿಗಳ ಮಾತೃ ವಾತ್ಸಲ್ಯಕ್ಕೆ ನಾವು ತಲೆಬಾಗಲೇ ಬೇಕು!

  1. admin,

    ವಂದನೆಗಳು ಮಂಜುನಾಥ್ ?

  2. ಮಂಜುನಾಥ ಗುತ್ತೇದಾರ., ರಾಯಚೂರು.

    ತಾಯಿ ಮಗುವಿನ ಮೇಲೆ ತೋರಿಸುವ ಪ್ರೀತಿ, ವಾತ್ಸಲ್ಯವನ್ನು ಪ್ರಾಣಿ ಪಕ್ಷಿಗಳ ಮೂಲಕ ನಮ್ಮೆಲ್ಲರಿಗೂ ನೀವು ತೋರಿಸಿದ ಬಗೆ ಮನ ಮೋಹಕವಾಗಿದೆ. ತಮ್ಮ ಈ ಬರಹ ಸುಂದರ ವಾಗಿದೆ.
    “ಧನ್ಯವಾದಗಳು.”
    ಇಂತಿ ನಿಮ್ಮ ಪ್ರೀತಿಯ
    ಮಂಜುನಾಥ ಗುತ್ತೇದಾರ
    ರಾಯಚೂರು.
    ???????

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English