ಮುಂಬೈ : ರಾಜು ಮೊಗವೀರ ಹಾಗೂ ಸತೀಶ ಮೊಗವೀರ ಇವರ ಅಂದೇರಿಯ ಅಂಬಿಕಾ ಫುಡ್ & ಹಾಸ್ಪಿಟಾಲಿಟಿ ಸರ್ವಿಸಸ್ ಇದರ ಪ್ರಾಯೋಜಕತ್ವದಲ್ಲಿ ಕೊರೊನ ಸಂತ್ರಸ್ತರಿಗೆ ಮುಂಬೈ ಮಹಾನಗರ ಪಾಲಿಕೆ ವತಿಯಿಂದ ಪ್ರತಿ ದಿನ ಹದಿನೈದು ಸಾವಿರ ದಿಂದ ಇಪತ್ತು ಸಾವಿರ ಊಟದ ಪ್ಯಾಕೆಟ್ ಗಳನ್ನು ವಿತರಿಸಲಾಗುತ್ತಿದೆ. ದಿನಾಲೂ ಬೇರೆ ಬೇರೆ ರೀತಿಯ ಪುಲಾವ್, ಬಿರಿಯಾನಿ, ಕಿಚಡಿ, ಮಸಾಲಾ ಬಾತ್, ಹಾಗೂ ಪಾವ್ ಬಾಜಿ ಯನ್ನು ವಿತರಿಸುತ್ತಿದ್ದಾರೆ. ಹಾಗೂ ಅಲ್ಲಿನ ಹತ್ತಿರದ ನಿವಾಸಿಗಳಿಗೂ, ಕಾರ್ಮಿಕರಿಗೂ, ಊಟವಿಲ್ಲದೆ ಪರದಾಡುತ್ತಿದ್ದವರಿಗೆ ಉಚಿತ ಊಟದ ವೆವಸ್ಥೆಗಳನ್ನು ಮಾಡುತ್ತಿದ್ದಾರೆ. ಹಾಗೂ ಅನಾಥ ಆಶ್ರಮಕ್ಕೂ ಬೇಟಿ ನೀಡಿ ಅಲ್ಲಿನ ಮಕ್ಕಳಿಗೂ ಊಟದ ವೆವಸ್ಥೆಯನ್ನು ಮಾಡುತ್ತಿದ್ದಾರೆ. ಇವರ ಅಂಬಿಕಾ ಫುಡ್ & ಹಾಸ್ಪಿಟಾಲಿಟಿ ಸರ್ವಿಸಸ್ ಇದು ಅಂದೇರಿಯ ಎಮ್ ಐ ಡಿ ಸಿ ಯ ಕೊಂಡಿವಿಟಾ ರೋಡ್ ಇಲ್ಲಿ ಇದೆ. ಜನ ಸೇವೆಯೇ ಜನಾರ್ದನ ಸೇವೆ ಎಂದು ತಮ್ಮ ಕೈಲಾದಷ್ಟು ಸಹಾಯವನ್ನು ಮಾಡುತ್ತಿದ್ದಾರೆ. ಇವರ ಮೆನೇಜ್ಮೆಂಟ್ ಪಾಲುದಾರರಾದ ಶಿವರಾಮ ನಾಯ್ಕ್, ಹಾಗೂ ಸುರೇಶ ವೀರಮಲ್ಲ ಇವರು ಸಹಕರಿಸುತ್ತಿದ್ದಾರೆ.
1950 ರಲ್ಲಿ ಮುಂಬೈಗೆ ಆಗಮಿಸಿದ ರಾಜು ಮೊಗವೀರ ಮತ್ತು ಸತೀಶ ಮೊಗವೀರ ಇವರ ಹುಟ್ಟೂರು ಕುಂದಾಪುರದ ತಗ್ಗರ್ಸೆಯ ಉದ್ದಬೆಟ್ಟು ಗ್ರಾಮ. ಸಹೋದರರು ಹೋಟೆಲ್ ನಲ್ಲಿ ಸಣ್ಣ ಕೆಲಸದಿಂದ ಹಿಡಿದು ಡೆಲಿವರಿ ಬಾಯ್ ಆಗಿ , ವೈಟರ್ ಆಗಿ ಒಂದೊಂದೇ ಮೆಟ್ಟಿಲನ್ನು ಏರುತ್ತ 1995 ರಲ್ಲಿ ಸ್ವಂಥ ಉದ್ಯಮವನ್ನು ಸ್ತಾಪಿಸಿದರು ಕೊಲ್ಲೂರು ಮೂಕಾಂಬಿಕೆಯ ಆಪಾರ ಭಕ್ತರಾಗಿರುವ ಇವರು ತಮ್ಮ ಉದ್ಯಮಕ್ಕೆ ಅಂಬಿಕಾ ಫುಡ್ & ಹಾಸ್ಪಿಟಾಲಿಟಿ ಸರ್ವಿಸಸ್ ಎನ್ನುವ ಹೆಸರಿಟ್ಟು ಅಲ್ಲಿಂದ ಕಾರ್ಪೊರೇಟ್ ಆಫೀಸ್, ಬ್ಯಾಂಕ್, ನ್ಯೂಸ್ ಚಾನಲ್, ಹಾಗೂ ಸರಕಾರಿ ಆಫೀಸುಗಳಿಗೆ ಮಧ್ಯಾಹ್ನ ದ ಊಟ ಸಪ್ಲಯ್ ಮಾಡತೊಡಗಿದರು. ಕೆಲವೊಮ್ಮೆ ವ್ಯಾಪಾರ ದಲ್ಲಿ ಏರಿಳಿತ ವನ್ನು ಕಂಡರೂ ಎದೆಗುಂದದೆ ಮಾಡು ಇಲ್ಲವೇ ಮಡಿ ಎನ್ನುವ ಗಾದೆಯೆಂತೆ ತನ್ನ ವ್ಯಾಪಾರ ವನ್ನು ಮುನ್ನೆಡೆಸುತ್ತ ಇದ್ದಾರೆ. ಈಗ ಮತ್ತೆಲ್ಲ ವ್ಯಾಪಾರವು ಬಂದ್ ಸ್ಥಿತಿಯಲಿದ್ದರು ಕೊಡುವ ದೇವರು ಯಾವುದರಲ್ಲಿಯಾದರು ಕೊಟ್ಟು ಕಾಪಾಡುತ್ತಾರೆ ಎನ್ನುತ್ತಾರೆ.
ಇವರು ಮುಂಬೈ ಸಮೀಪ ಕಲ್ಯಾಣ ದಲ್ಲಿ ಗುರುದಾಮ್ ಲಂಚ್ ಹೋಮ್ ಮತ್ತು ಅಂದೇರಿಯಲಿ ಅಂಬಿಕಾ ಲಂಚ್ ಹೋಮ್ ಗಳನ್ನು ನಡೆಸುತ್ತಿದ್ದಾರೆ. ಮುಂದೆಯು ಸಹ ಇವರಿಗೆ ಇನ್ನಷ್ಟು ಸೇವೆಗಳನ್ನು ಮಾಡುವ ಶಕ್ತಿಯು ದೇವರು ಕರುಣಿಸಲಿ. ಇವರ ಸಮಾಜ ಸೇವೆಯನ್ನು ಮುಂಬಯಿಯ ಅನೇಕ ಗಣ್ಯರು ಮೆಚ್ಚಿ ಶುಭ ಹಾರೈಸಿದ್ದಾರೆ.
Click this button or press Ctrl+G to toggle between Kannada and English