ಕಾಸರಗೋಡು : ಕಾಸರಗೋಡು ಕೊರೊನಾ ಮುಕ್ತ ಜಿಲ್ಲೆ ಎಂದು ಘೋಷಣೆಗೆ ತಯಾರಿ ನಡೆಸುತ್ತಿರುವ ಬೆನ್ನಿಗೆ ಮತ್ತೆ ನಾಲ್ವರಿಗೆ ಸೋಮವಾರ ಕೊರೊನಾ ಸೋಂಕು ಪತ್ತೆಯಾಗಿದೆ.
ಕೊರೊನಾ ಸೋಂಕು ಕಾಣಿಸಿಕೊಂಡವರಲ್ಲಿ ಕುಂಬಳೆ ಮೂಲದ 41, 49 ವರ್ಷ ವಯಸ್ಸಿನ ಇಬ್ಬರು ಪುರುಷರು ಹಾಗೂ 61, 51 ವರ್ಷ ವಯಸ್ಸಿನ ಇಬ್ಬರು ವೃದ್ದರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಇಬ್ಬರು ವೃದ್ದರು ಪೈವಳಿಕೆ ಹಾಗೂ ಮಂಗಲ್ಪಾಡಿಯವರೆಂದು ತಿಳಿದುಬಂದಿದೆ. ಕೆಲವು ದಿನಗಳ ಹಿಂದೆ ಈ ನಾಲ್ವರೂ ಕಾಸರಗೋಡಿಗೆ ಮುಂಬೈಯಿಂದ ವಾಪಾಸ್ಸಾಗಿದ್ದರು ಎನ್ನಲಾಗಿದೆ.
ಶನಿವಾರ ದುಬೈ ಮತ್ತು ಅಬು ದುಬಾಯಿಯಿಂದ ಬಂದ ಐವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಕೇರಳದಲ್ಲಿ ಒಟ್ಟು 27 ಪ್ರಕರಣಗಳು ಸಕ್ರಿಯವಾಗಿದೆ ರಾಜ್ಯ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಹೇಳಿದ್ದಾರೆ.
ಕಾಸರಗೋಡನ್ನ ಕೊರೊನಾ ಮುಕ್ತ ಜಿಲ್ಲೆ ಎಂದು ಹೇಳಲಾಗುತ್ತಿತ್ತು. ಆದರೆ, ಮತ್ತೆ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಕಾರಣ ಕಾಸರಗೋಡು ಜನರಲ್ಲಿ ಆತಂಕ ಮೂಡಿದೆ.
Click this button or press Ctrl+G to toggle between Kannada and English