ಉದ್ಯಮಿ ಅಪಹರಣ ಯತ್ನ ರವಿ ಪೂಜಾರಿ ಸಹಚರನ ಬಂಧನ

4:32 PM, Friday, November 23rd, 2012
Share
1 Star2 Stars3 Stars4 Stars5 Stars
(5 rating, 1 votes)
Loading...

Ravi Poojary Aideಮಂಗಳೂರು :ಕಿನ್ನಿಗೋಳಿಯ ಉದ್ಯಮಿ ಸಿಪ್ರಿಯಾನ್ ಡಿಸೋಜ ಎಂಬವರ ಅಪಹರಣ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಲ್ಕಿ ಪೊಲೀಸರು ಗುರುವಾರ ರವಿ ಪೂಜಾರಿ ಸಹಚರನನ್ನು ಬಂಧಿಸಿದ್ದಾರೆ. ಸೋಮೇಶ್ವರ ಕೋಟೆಕಾರ್ ಪಂಡಿತ್ ಹೌಸ್ ನಿವಾಸಿ ಚಿತ್ತರಂಜನ್ ಶೆಟ್ಟಿ ಬಂಧಿತ ಆರೋಪಿಯಾಗಿದ್ದಾನೆ. ಆರೋಪಿಯನ್ನು ಗುರುವಾರ ತೊಕ್ಕೊಟ್ಟು ಜಂಕ್ಷನ್ ನಲ್ಲಿ ಬಂಧಿಸಿ ಮೂಡುಬಿದಿರೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಅಕ್ಟೋಬರ್ 12ರಂದು ಬೆಳಗ್ಗೆ 9.45ಕ್ಕೆ ಸಿಪ್ರಿಯಾನ್ ಡಿಸೋಜರು ಕಿನ್ನಿಗೋಳಿಯಿಂದ ತನ್ನ ಮನೆಗೆ ಕಾರಿನಲ್ಲಿ ಬರುತ್ತಿದ್ದಾಗ ಮತ್ತೊಂದು ಕಾರಿನಲ್ಲಿ ಬಂದ ನಾಲ್ಕು ಮಂದಿಯ ತಂಡ ಪಿಸ್ತೂಲ್ ತೋರಿಸಿ ಅಪಹರಣಕ್ಕೆ ಯತ್ನಿಸಿತ್ತು. ಮತ್ತು ಘಟನೆ ಮರುದಿನ ರವಿ ಪೂಜಾರಿ ಹೆಸರಿನಲ್ಲಿ 2 ಕೋಟಿ ರೂ. ಹಣಕ್ಕಾಗಿ ಫೋನ್ ಕರೆ ಬಂದಿತ್ತು. 2010 ರಲ್ಲಿ 50 ಲಕ್ಷ ರೂ. ಹಣಕ್ಕಾಗಿ ಬೇಡಿಕೆ ಬಂದಿತ್ತು ಎಂದು ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಗುರುವಾರ ಆರೋಪಿ ಚಿತ್ತರಂಜನ್ ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಿಸಿದಾಗ ರವಿ ಪೂಜಾರಿಯ ಸೂಚನೆ ಮೇರೆಗೆ ಸಿಪ್ರಿಯನ್ ಡಿಸೋಜರನ್ನು ಅಪಹರಿಸಲು ಯತ್ನಿಸಿದ್ದನ್ನು ಒಪ್ಪಿದನಲ್ಲದೆ ಇದರಲ್ಲಿ ಸುರತ್ಕಲ್‌ನ ಸುಬ್ರಹ್ಮಣ್ಯ ಯಾನೆ ಸುಬ್ಬು ಮತ್ತು ಬೆಂಗ್ರೆಯ ಭರತೇಶ್ ಯಾನೆ ಭರತ್ ಪಾಲ್ಗೊಂಡಿರುವ ಬಗ್ಗೆ ಮಾಹಿತಿ ನೀಡಿದ್ದಾನೆ. ಪ್ರಕರಣಕ್ಕೆ ಸಂಬಧಿಸಿದಂತೆ ಸುಬ್ಬು ಈಗಾಗಲೆ ಜೈಲಿನಲ್ಲಿದ್ದಾನೆ. ತಲೆಮರೆಸಿರುವಕೊಂಡಿರುವ ಆರೋಪಿ ಭರತ್ ಮೇಲೆ ಬರ್ಕೆ, ಉರ್ವ, ಪಣಂಬೂರಿನಲ್ಲಿ ಪ್ರಕರಣ ದಾಖಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English