ಮಂಜೇಶ್ವರ : ಕೇವಲ ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿ ಹನ್ನೆರಡು ನಿಮಿಷಗಳ “ಬಾಲ ರತ್ನ” ಎಂಬ ಟೆಲಿ ಫಿಲಂ ಒಂದನ್ನು ಇನ್ ಫ್ಯಾಂಟ್ ಜೀಸಸ್ ಇಂಗ್ಲಿಷ್ ಮಧ್ಯಮ ಶಾಲೆ ಮಂಜೇಶ್ವರದ 8 ನೇ ತರಗತಿ ವಿದ್ಯಾರ್ಥಿ ಅನುಭವ್ ಎಲ್.ಎ ನಿರ್ಮಿಸಿದ್ದಾನೆ.
ಯಕ್ಷ ಗುರು ರಾಮ ಸಾಲ್ಯಾನ್ ಅವರಿಂದ ಯಕ್ಷಗಾನ ತರಬೇತಿ ಪಡೆಯುತ್ತಿರುವ ಅನುಭವ್ ಎಲ್.ಎ. ಈ ಮೊದಲು ಎರಡು ಟೆಲಿ ಫಿಲಂ ನಿರ್ಮಿಸಿದ್ದಾನೆ ಇದು ಅತನದ್ದು ಮೂರನೇ ಪ್ರೊಜೆಕ್ಟ್.
ನಾನು 2 ವರ್ಷಗಳ ಹಿಂದೆ, ಸುಮ್ಮನೆ ತಮಾಷೆಗೆ ಅಂತ ಹತ್ತಿರದ ಮನೆಯ ಮಕ್ಕಳನ್ನೆಲ್ಲಾ ಕರೆದು ‘ಜಂಗಲ್ ಮಂಗಲ್’ ಎಂಬ ಹಿಂದಿ ಟೆಲಿ ಫಿಲ್ಮ್ ಮಾಡಿದ್ದೆ. ಅದನ್ನು ನೋಡಿ ನನ್ನ ಅಪ್ಪ ನನಗೆ ಒಂದು ತುಳು ಫಿಲ್ಮ್ ಮಾಡಲು ಹೇಳಿದರು. ಅವರು ಒಂದು ಸಣ್ಣ ಸ್ಟೋರಿ ಹೇಳಿಕೊಟ್ಟರು. ಅದು ಸಣ್ಣ ಸ್ಟೋರಿ ಆದ ಕಾರಣ ಅದನ್ನು ಸ್ವಲ್ಪ ದೊಡ್ಡ ಸ್ಟೋರಿ ಮಾಡಿ ನಾನು “ಏರೆನ ತಪ್ಪು” ಎಂಬ ಶಾರ್ಟ್ ಫಿಲ್ಮ್ ಮಾಡಿದೆ. ಇದು ಊರಿನವರಿಗೆಲ್ಲರಿಗೂ ಇಷ್ಟವಾಯಿತು. ಯೂಟ್ಯೂಬ್ ನಲ್ಲಿ ತುಂಬಾ ಲೈಕ್ಸ್ ಬಂತು. ತುಂಬಾ ಜನ ನನಗೆ ಪ್ರೋತ್ಸಾಹ ಕೊಟ್ಟರು. ಆಗ ನನಗೆ ಇನ್ನೊಂದು ಫಿಲ್ಮ್ ಮಾಡ ಬೇಕೆಂದು ಅನಿಸಿತು. ಈ ಲಾಕ್ ಡೌನ್ ಒಳ್ಳೆಯ ಅವಕಾಶವೆಂದು ನಾನು ನನ್ನ ಗೆಳೆಯರನ್ನು ಕರೆದು ” ನಾವು ಒಂದು ಫಿಲ್ಮ್ ಮಾಡೋಣ ” ಎಂದೆ. ಎಲ್ಲರು ತಯಾರಾಗಿದ್ದರು. ಅದಕ್ಕೆ ನಾನು ಇಂಡಿಯನ್ ಟ್ರೆಡಿಷನ್ ಮತ್ತು ಕಲ್ಚರ್ ಫಾಲೋ ಮಾಡುವುದರ ಕುರಿತು “ಬಾಲ ರತ್ನ ” ಎಂಬ ಶಾರ್ಟ್ ಫಿಲ್ಮ್ ಮಾಡಿದೆ. ಈ ಫಿಲ್ಮ್ ಮಾಡಲು ನಾನು ಯಾವುದೇ ಕ್ಯಾಮೆರಾ ಉಪಯೋಗ ಮಾಡಲಿಲ್ಲ. ನಾನು ಮೊಬೈಲ್‌ನಲ್ಲೆ ಶೂಟಿಂಗ್ ಮತ್ತು ಎಡಿಟಿಂಗ್ ಮಾಡಿದೆ. ಡಯಾಲಾಗ್ ಕೂಡ ಜಾಸ್ತಿ ಪ್ರಾಕ್ಟೀಸ್ ಇಲ್ಲದೆ ಶೂಟಿಂಗ್ ನಡೆಸಿದೆವು ಎಂದು ಟೆಲಿ ಫಿಲಂ ನಿರ್ದೇಶಕ ಅನುಭವ್ ಎಲ್.ಎ ಹೇಳಿದ್ದಾನೆ.
ಕಾಸರಗೋಡು ಜಿಲ್ಲೆಯ ಮೀಂಜ ಪಂಚಾಯತ್‌ನ ಕುಲೂರ್ ಗ್ರಾಮದ ಎಲಿಯಾನದಲ್ಲಿ ಈ ಹುಡುಗನ ಮನೆ ಇದೆ. ತಂದೆ ಲಾವಣಂದ ಪೂಜರಿ ಎಲಿಯಾನಾ ಗಾಯಕ, ಬರಹಗಾರ, ವರ್ಣಚಿತ್ರಕಾರ, ರೈತ ಮತ್ತು ಸಮಾಜ ಸೇವಕ ಈತನ ಪ್ರೋಜೆಕ್ಟ್ ಗಳಿಗೆ ಪ್ರೊಡ್ಯೂಸರ್, ತಾಯಿ: ಗೀತಾ. ಆರ್ ಸಲಹೆಗಾರರು, ಅಜ್ಜಿ: ಕಲ್ಯಾಣಿ, ಕಿರಿಯ ಸಹೋದರ: ಅಭಿನವ್ ಎಲ್. ಎ ಸಹಕಾರ ನೀಡುತ್ತಾರೆ.
ಈ ಟೆಲಿ ಫಿಲಂನಲ್ಲಿ ಸ್ವರ್ತ ಅಭಿನವ್ ಎಲ್.ಎ. ನಟಿಸಿದ್ದಾನೆ ಜೊತೆಗೆ ಮನೀಶ್ ಎಲಿಯಾನ, ತಶ್ವಿನ್ ಶೆಟ್ಟಿ, ಆಶ್ಲೇಶ್ ಶೆಟ್ಟಿ ಎಲಿಯಾನಾ ಅಭಿನಯಿಸಿದ್ದಾರೆ , ಎಲಿಯಾನ ಗ್ರಾಮದ ಸುತ್ತಲೂ ವಿಡಿಯೋಗ್ರಫಿ ಮಾಡಿದ್ದಾರೆ.
ಈ ಮಕ್ಕಳ ಶ್ರಮಕ್ಕೆ ಮೆಗಾ ಮೀಡಿಯಾ ನ್ಯೂಸ್ ತಂಡದ ಶುಭ ಹಾರೈಕೆಗಳೊಂದಿಗೆ ಒಂದು ಹ್ಯಾಟ್ಸ್ ಅಪ್.
Click this button or press Ctrl+G to toggle between Kannada and English
May 12th, 2020 at 22:24:04
Nyc congratulations
May 12th, 2020 at 22:23:08
Congratulations
May 12th, 2020 at 22:13:00
Super congratulations