ಬೆಂಗಳೂರು : ಉತ್ತರ ಕರ್ನಾಟಕದಿಂದ ಮುಂಬೈಗೆ ಕೆಲಸ ಹರಸಿಕೊಂಡು ಹೋಗಿ ಲಾಕ್‌ಡೌನ್‌ನಿಂದ ಕೆಲಸವಿಲ್ಲದೇ ಸಿಕ್ಕಿ ಖಾಕಿ ಕೊಂಡ ಸುಮಾರು ಐನೂರ ರಷ್ಟು ಕಾರ್ಮಿಕರಿಗೆ ಬಾಲಿವುಡ್ ನಟ ಸೋನುಸೂದ್ ಊರಿಗೆ ಮರಳಲು ನೆರವಾಗಿದ್ದಾರೆ.
ಮಹಾರಾಷ್ಟ್ರದ ಥಾಣೆಯಲ್ಲಿ ಸಿಲುಕಿದ್ದ ಕರ್ನಾಟಕದ ಕಲಬುರಗಿಯ ವಲಸೆ ಕಾರ್ಮಿಕರನ್ನು ಸೋನು ಸೂದ್ ಸುರಕ್ಷಿತವಾಗಿ ವಾಪಸ್ ಕಳಿಸಿಕೊಟ್ಟಿದ್ದಾರೆ. ಕಾರ್ಮಿಕರ ಪ್ರಯಾಣಕ್ಕೆಂದೇ 10 ಬಸ್‌ಗಳನ್ನು ವ್ಯವಸ್ಥೆ ಮಾಡಿದ್ದರು ಅವರು. ಅಲ್ಲದೆ, ದಾರಿ ಮಧ್ಯೆ ಕಾರ್ಮಿಕರಿಗೆ ಹಸಿವು ನೀಗಿಸಲು ಫುಟ್‌ಕಿಟ್‌ಗಳನ್ನೂ ಅವರು ನೀಡಿದ್ದರು. ಈ ಸಂಬಂಧ ಮಹಾರಾಷ್ಟ್ರ ಮತ್ತು ಕರ್ನಾಟಕ ಸರ್ಕಾರಗಳಿಂದ ಅಧಿಕೃತ ಒಪ್ಪಿಗೆ ಸಿಕ್ಕಿದ ಕೂಡಲೇ ಅವರು ಕಾರ್ಮಿಕರನ್ನು ವ್ಯವಸ್ಥಿತವಾಗಿ ಕಳುಹಿಸಿಕೊಟ್ಟಿದ್ದಾರೆ. ರಸ್ತೆಯುದ್ದಕ್ಕೂ ಪುಟ್ಟ ಮಕ್ಕಳೊಂದಿಗೆ ಲಗೇಜು ಹೊತ್ತುಕೊಂಡು ತವರಿಗೆ ಮರಳುತ್ತಿರುವ ಜನರ ಕಷ್ಟ ಕಂಡು ಇಂಥದ್ದೊಂದು ಕೆಲಸಕ್ಕೆ ಅವರು ಕೈ ಹಾಕಿದ್ದಾರೆ ಎನ್ನಲಾಗಿದೆ.
ಈಗ 10 ಬಸ್‌ಗಳ ಮೂಲಕ ಕರ್ನಾಟಕದ ಕಾರ್ಮಿಕರನ್ನು ಕಳುಹಿಸಿಕೊಟ್ಟಿರುವ ಅವರು, ನಂತರದ ದಿನಗಳಲ್ಲಿ ಮಹಾರಾಷ್ಟ್ರದಲ್ಲಿರುವ ಉತ್ತರ ಪ್ರದೇಶ, ಬಿಹಾರ, ಒಡಿಶಾ, ಜಾರ್ಖಂಡ್ ರಾಜ್ಯಗಳ ಕಾರ್ಮಿಕರನ್ನು ವಾಪಸ್ ತವರಿಗೆ ಕಳುಹಿಸುವುದಕ್ಕೆ ಚಿಂತನೆ ನಡೆಸಿದ್ದಾರಂತೆ. ಆಯಾ ರಾಜ್ಯಗಳಿಂದ ಅನುಮತಿ ಸಿಕ್ಕಿದ ಕೂಡಲೇ ಮಹಾರಾಷ್ಟ್ರದಲ್ಲಿರುವ ಅವರನ್ನೆಲ್ಲ ಸೇಫ್ ಆಗಿ ತವರಿಗೆ ಕಳುಹಿಸಲಿದ್ದಾರಂತೆ. ಅಂದಹಾಗೆ, ಈ ಕೊರೊನಾ ಸಮಸ್ಯೆ ಎದುರಾದ ದಿನದಿಂದಲೂ ಸೋನು, ಸಾಕಷ್ಟು ಸಹಾಯ ಮಾಡುತ್ತಲೇ ಇದ್ದಾರೆ. ಕೊರೊನಾ ವಾರಿಯರ್ಸ್‌ಗೆ ಅನುಕೂಲವಾಗುವಂತೆ, ತಮ್ಮ ಹೋಟೆಲ್‌ಗಳನ್ನು ನೀಡಿದ್ದರು. ಜೊತೆಗೆ ಪಂಜಾಬ್‌ನ ವೈದ್ಯರಿಗೆ 1500 ಪಿಪಿಇ ಕಿಟ್‌ಗಳನ್ನು ನೀಡಿದ್ದರು. ಇನ್ನುಳಿದಂತೆ, ಊಟದ ವ್ಯವಸ್ಥೆ ಹಾಗೂ ಬಡವರಿಗೆ ಫುಡ್‌ಕಿಟ್ ನೀಡುವುದನ್ನು ಮಾಡುತ್ತಲೇ ಇದ್ದಾರೆ.
Click this button or press Ctrl+G to toggle between Kannada and English