ಮಂಗಳೂರು: ದ.ಕ.ಜಿಲ್ಲೆಯಲ್ಲಿ ಬುಧವಾರಂದು ಮತ್ತೊಂದು ಕೋವಿಡ್ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, ಮಂಗಳೂರಿನ ಸೋಮೇಶ್ವರ ಗ್ರಾಮದ ದರಂದಾಬಾಗಿಲುವಿನ 38 ವರ್ಷದ ಮಹಿಳೆಗೆ ಕೋವಿಡ್ ದೃಢಪಟ್ಟಿದೆ.
ದ.ಕ.ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 34 ಕ್ಕೇ ಏರಿಕೆಯಾಗಿದೆ. ಈ ಮಹಿಳೆಗೆ ಫಸ್ಟ್ನ್ಯೂರೋ ಆಸ್ಪತ್ರೆಯ ರೋಗಿ ಸಂಖ್ಯೆ ಪಿ-507 ಸಂಪರ್ಕದಿಂದ ಸೋಂಕು ತಗುಲಿದ್ದು ಕೋವಿಡ್ ದೃಢಪಟ್ಟ ಹಿನ್ನಲೆಯಲ್ಲಿ ರೋಗಿಯನ್ನು ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ.
ನಿನ್ನೆಯಷ್ಟೇ ಮಂಗಳೂರಲ್ಲಿ ದಾಖಲಾಗಿದ್ದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಸಾಣೂರಿನ ಇಬ್ಬರಿಗೆ ಸೋಂಕು ದೃಢ ಪಟ್ಟಿತ್ತು.
ಕೋವಿಡ್ ಸೋಂಕು ದೃಢ ಪಟ್ಟ ಹಿನ್ನೆಲೆಯಲ್ಲಿ ಸೋಮೇಶ್ವರ ಗ್ರಾಮದ ದರಂದಾಬಾಗಿಲು ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ.
ಸೋಮೇಶ್ವರ ಪುರಸಭಾ ವ್ಯಾಪ್ತಿಯ ಮಹಿಳೆಗೆ ಕೊರೊನ ಪಾಸಿಟಿವ್ ಹಿನ್ನೆಲೆಯಲ್ಲಿ ಶಾಸಕ ಯು.ಟಿ ಖಾದರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸೋಂಕಿತ ಮಹಿಳೆಯ ಮಕ್ಕಳು ಸೇರಿ ಕುಟುಂಬದ ಐವರ ಗಂಟಲು ದ್ರವ ಪರಿಶೀಲನೆಗೆ ಕಳುಹಿಸಲಾಗಿದೆ.
Click this button or press Ctrl+G to toggle between Kannada and English