ಸ್ವಾವಲಂಬಿ ಭಾರತದ ಸಂಕಲ್ಪದ ಪ್ಯಾಕೇಜ್ : ಸುದರ್ಶನ್ ಮೂಡಬಿದಿರೆ

10:55 PM, Thursday, May 14th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Sudarshan Mಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ಕೆಲ ನಿರ್ಧಾರದಿಂದ ಇಡೀ ವಿಶ್ವವೇ ಭಾರತ ದೇಶವನ್ನು ನೋಡುವಂತೆ ಮಾಡಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ ಹೇಳಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುದರ್ಶನ್, ಕೋವಿಡ್-19 ಮಹಾಮಾರಿ ವಿರುದ್ಧ ಸಮರ್ಪಕವಾಗಿ ಸಮರ ಸಾರುವಲ್ಲಿ ‌ದೇಶದ ಪ್ರಧಾನಿ ನಿರ್ಧಾರ ಅಭೂತಪೂರ್ವ. ದೇಶ ಆರ್ಥಿಕವಾಗಿ ಸಮಸ್ಯೆಯಲ್ಲಿದ್ದರೂ ದೇಶದ ಪ್ರಧಾನಿ ಜನರಿಗಾಗಿ 20 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಇನ್ನೂ ಇದು ಕೇವಲ ಒಂದು ಪ್ಯಾಕೇಜ್ ಮಾತ್ರವಲ್ಲ. ಸ್ವಾವಲಂಬಿ ಭಾರತದ ಸಂಕಲ್ಪದ ಪ್ಯಾಕೇಜ್ ಇದಾಗಿದೆ ಎಂದರು.

ವಿಜ್ಞಾನ ತಂತ್ರಜ್ಞಾನ ವೈದ್ಯಕೀಯವಾಗಿ ಬೆರೆ ದೇಶಗಳು ಅದೆಷ್ಟೋ ಮುಂದುವರಿದಿದೆ. ಆದರೆ ಕೋವಿಡ್-19 ವಿರುದ್ಧ ಸಮರದಲ್ಲಿ ಭಾರತ ಮಾತ್ರ ಹತೋಟಿಯಲ್ಲಿದೆ. ದೇಶದ ಪ್ರಧಾನಿ ಕೈಗೊಂಡ ಜನತಾ ಕರ್ಪ್ಯೂ. ಮೂರನೇ ಹಂತದ ಲಾಕ್ ಡೌನ್ ಗೆ ಜನರು ಸಂಪೂರ್ಣ ಬೆಂಬಲ ನೀಡಿದ್ದಾರೆ. ಇದು ಭಾರತದಲ್ಲಿ ಕೊರೊನಾ ಸೋಂಕು ಹತೋಟಿಗೆ ಕಾರಣ ಎಂದಿದ್ದಾರೆ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English