ಮಂಜೇಶ್ವರ-ಕನ್ನಡ ಭಾಷಾ ಪ್ರದೇಶ ಸ್ಥಾನಮಾನ ಸ್ವಾಗತಾರ್ಹ – ಎಸ್. ಪ್ರದೀಪಕುಮಾರ ಕಲ್ಕೂರ

12:12 PM, Saturday, May 16th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Pradeep Kalkura ಮಂಗಳೂರು  : ಕನ್ನಡ ಭಾಷಿಕರ ಪ್ರದೇಶವಾದ ಗಡಿನಾಡು ಕಾಸರಗೋಡು, ಭಾಷಾ ಅಲ್ಪಸಂಖ್ಯಾತ ನೆಲೆಯಲ್ಲಿ ಕನ್ನಡ ಭಾಷಾ ಪ್ರದೇಶವೆಂದೇ ಕೇರಳ ರಾಜ್ಯ ಸರಕಾರದ ಆಡಳಿತಾತ್ಮಕ ನೆಲೆಯಲ್ಲಿ ಪರಿಗಣಿಸಲಾಗಿತ್ತು. ಭಾಷಾ ಅಲ್ಪಸಂಖ್ಯಾತ ನೆಲೆಯಲ್ಲಿ ಕೇರಳ ರಾಜ್ಯ ಸರಕಾರವು ಒದಗಿಸಿರುವ ವಿಶೇಷ ಸ್ಥಾನಮಾನವು ಸ್ವಾಗತಾರ್ಹವಾಗಿದೆ ಎಂದು ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಪ್ರದೀಪಕುಮಾರಕಲ್ಕೂರ ತಿಳಿಸಿದ್ದಾರೆ.

ಕನ್ನಡ ಪರ ಹೋರಾಟಗಾರರ ಹೋರಾಟದ ಫಲಶ್ರುತಿಯಾಗಿ ಆ ಪ್ರದೇಶದ ಎಲ್ಲಾ ಕನ್ನಡಿಗರಿಗೆ ಆಡಳಿತಾತ್ಮಕವಾಗಿ ಕನ್ನಡ ಭಾಷಾ ಅನುಷ್ಠಾನ ಕನ್ನಡ ಭಾಷಾ ನೆಲೆಯಲ್ಲಿ ಶೈಕ್ಷಣಿಕ ಸವಲತ್ತುಗಳು, ಸಾಂಸ್ಕೃತಿ ಕಚಟುವಟಿಕೆಗಳು, ಯಕ್ಷಗಾನ, ಇನ್ನಿತರಕಲೆಗಳಿಗೆ ವಿಶೇಷ ಸೌಲಭ್ಯ ನೀಡಲಾಗಿತ್ತು.

ಇತ್ತಿಚಿ ವರ್ಷಗಳಲ್ಲಿ ಕರ್ನಾಟಕ ಘನ ಸರಕಾರವು ಕಾಸರಗೋಡು ಕನ್ನಡಿಗರಿಗೆ, ಕರ್ನಾಟಕದಲ್ಲಿ ಕನ್ನಡಿಗರಿಗೆ ಸಿಗುವಯಾವತ್ತೂ ಶೈಕ್ಷಣಿಕ/ ಸಾಂಸ್ಕೃತಿಕ/ ಔದ್ಯೋಗಿಕ ಸವಲತ್ತುಗಳನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಶಿಫಾರಸ್ಸಿನ ಮೇರೆಗೆ ಈ ಪ್ರದೇಶದ ಕನ್ನಡಿಗರಿಗೆ ಒದಗಿಸಿತ್ತು.

ಕೇರಳ ಸರಕಾರ ಕಾಸರಗೋಡನ್ನು ಆಡಳಿತಾತ್ಮಕವಾಗಿ ವಿಭಜಿಸುವ ಸಂದರ್ಭಮಂಜೇಶ್ವರವನ್ನು ಪ್ರತ್ಯೇಕ ತಾಲೂಕಾಗಿ ಮಾಡಲಗಿತ್ತಾದರೂ. ಮಂಜೇಶ್ವರ ತಾಲೂಕಿಗೆ ಕನ್ನಡ ಭಾಷಾ ಪ್ರದೇಶ ಸ್ಥಾನಮಾನದ ಸವಲತ್ತು ಲಭಿಸಿರಲಿಲ್ಲ. ಸಹಜವಾಗಿ ಅಲ್ಲಿನ ಕನ್ನಡಿಗರು ತಾಂತ್ರಿಕ ನೆಲೆಯಲ್ಲಿ ಸೌಲಭ್ಯಗಳಿಂದ ವಂಚಿತರಗಿದರು.

ಪ್ರಸ್ತುತ ಕೇರಳ ರಾಜ್ಯ ಸರಕಾರವು ಮಂಜೇಶ್ವರ ತಾಲೂಕನ್ನು ಕನ್ನಡ ಭಾಷಾ ಅಲ್ಪಸಂಖ್ಯಾತ ನೆಲೆಯಲ್ಲಿ ವಿಶೇಷ ಸ್ಥಾನಮಾನ ಕಲ್ಪಿಸಿ ಆದೇಶ ಹೋರಡಿಸಿರುವುದು ಸಮಸ್ತ ಕನ್ನಡಿಗರೂ ಸಂಭ್ರಮ ಪಡುವ ಸ್ವಾಗತಾರ್ಹ ನಿಲುವು ಎಂದುಕಲ್ಕೂರ ಹೇಳಿದ್ದಾರೆ.

ಮಂಜೇಶ್ವರ ಗೋವಿಂದ ಪೈ, ಕಯ್ಯಾರ ಕಿಂಞಣ್ಣರೈ, ಕನ್ನಡ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಬಿ.ಎಂ. ಇದಿನಬ್ಬ, ಕರ್ನಾಟಕ ಗಡಿರಕ್ಷಣಾ ಸಮಿತಿ ಸಹಿತ ಅನೇಕರ ಹೋರಾಟಕ್ಕೆ ಲಭಿಸಿರುವ ಪ್ರತಿಫಲವಿದಾಗಿದ್ದು. ರಾಷ್ಟ್ರಕವಿ ಗೋವಿಂದ ಪೈಗಳ ತವರೂರಿನಜನತೆಗೆ ಹಾಗೂ ಗಡಿನಾಡಿನ ಕನ್ನಡಿಗರೆಲ್ಲರಿಗೂ ಸಂದ ಗೌರವಇದಾಗಿದೆ ಎಂದು ಕಲ್ಕೂರ ತಮ್ಮ ಹರ್ಷ ವ್ಯಕ್ತಪಡಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English