ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಎರಡು ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆ

2:38 PM, Sunday, May 17th, 2020
Share
1 Star2 Stars3 Stars4 Stars5 Stars
(No Ratings Yet)
Loading...

mangaluru-coronaಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಮತ್ತೆ ಇಬ್ಬರಿಗೆ ಕೊರೊನಾ ದೃಢಪಟ್ಟಿದೆ. ಶನಿವಾರ ಜಿಲ್ಲೆಯಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 50 ಕ್ಕೆ ಏರಿತ್ತು.

ಇದೀಗ ಮಹಾರಾಷ್ಟ್ರದಿಂದ ಬಂದ 35 ವರ್ಷದ ಓರ್ವ ಮಹಿಳೆಯಲ್ಲಿ ಕೊರೊನಾ ಪಾಸಿಟಿವ್‌ ಆಗಿದ್ದು ಜೊತೆಗೆ ಜಪ್ಪಿನಮೊಗರುವಿನ  31 ವರ್ಷದ ಪುರುಷನಿಗೂ ಕೊರೊನಾ ದೃಢಪಟ್ಟಿದೆ.  ಇದು ಹೊಸ ಪ್ರಕರಣವಾಗಿದ್ದು ಅದರ ಮೂಲ ಪತ್ತೆಹಚ್ಚಲಾಗುತ್ತಿದೆ ಎಂದು ಅರೋಗ್ಯ ಅಧಿಕಾರಿಗಳು ಹೇಳಿದ್ದಾರೆ.

ಜಪ್ಪಿನಮೊಗರು ನಿವಾಸಿ 31 ವರ್ಷದ ಪುರುಷ P1094 ಕೊರೊನಾ ಶಂಕೆಯಿಂದಾಗಿ ಆಸ್ಪತ್ರೆಗೆ ಬಂದು ಸ್ವಯಂ ಆಗಿ ಪರೀಕ್ಷೆ ಮಾಡಿಸಿಕೊಂಡಿದ್ದು ವರದಿಯಲ್ಲಿ ಕೊರೊನಾ ಪಾಸಿಟಿವ್‌ ಆಗಿದೆ.

P1095, 35 ವರ್ಷದ ಮಹಿಳೆ ನಗರದ ಯೆಯ್ಯಾಡಿ ನಿವಾಸಿಯಾಗಿದ್ದು ಮೇ 14 ರಂದು ಮುಂಬೈನಿಂದ ಬಂದಿದ್ದು ಆಕೆಯ ಪತಿ ಮತ್ತು ಮಗು ಕ್ವಾರಂಟೈನ್‌ನಲ್ಲಿ ನಲ್ಲಿಡಲಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English