ಪುತ್ತೂರು : ಪಾಸ್ ಇಲ್ಲದೆ ಮುಂಬೈಯಿಂದ ಬಂದ ವ್ಯಕ್ತಿಯನ್ನು ಕಾರಿನಲ್ಲಿ ಕೇರಳಕ್ಕೆ ತಲುಪಿಸಿದ ಕಾಂಗ್ರೆಸ್ ಗ್ರಾಮ ಪಂಚಾಯತು ಸದಸ್ಯನ ವಿರುದ್ದ ಆಧೂರು ಪೊಲೀಸರು ಕೇಸು ದಾಖಲಿಸಿದ್ದಾರೆ. ದೇಲಂಪಾಡಿ ಗ್ರಾಮ ಪಂಚಾಯತು ಸದಸ್ಯ, ಕಾಂಗ್ರೆಸ್ ನೇತಾರ ಕೊರಗಪ್ಪ ರೈ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
ಮುಂಬೈಯಿಂದ ಆಗಮಿಸಿದ ದೇಲಂಪಾಡಿ, ಮಯ್ಯಳ ನಿವಾಸಿ ಜಗನ್ನಾಥ ರೈ ಎಂಬವರನ್ನು ಪುತ್ತೂರಿನಿಂದ ತನ್ನ ಕಾರಿನಲ್ಲಿ ಕೊರಗಪ್ಪ ರೈ ಕರೆ ತಂದಿದ್ದರು. ಪಾಸ್ ಸಹಿತ ಯಾವುದೇ ದಾಖಲೆ ಇಲ್ಲದೆ ಜಗನ್ನಾಥ ರೈ ಅವರನ್ನು ಊರಿಗೆ ಕರೆದುಕೊಂಡು ಬಂದ ಬಗ್ಗೆ ಮಾಹಿತಿ ಬಹಿರಂಗಗೊಂಡು ರಾಜಕೀಯ ವಿವಾದ ಉಂಟಾಗಿತ್ತು. ಕೇಸು ದಾಖಲಿಸಿದ ನಂತರ ಕೊರಗಪ್ಪ ರೈ ಹಾಗೂ ಜಗನ್ನಾಥ ರೈ (ಇಬ್ಬರನ್ನೂ) ಯರನ್ನು ಸರಕಾರದ ಕೋರೆಂಟೈನಿಗೆ ಕಳುಹಿಸಲಾಯಿತು.
ವಾರದ ಹಿಂದೆ ಪೈವಳಿಕೆ ಗ್ರಾಮ ಪಂಚಾಯತಿನಲ್ಲಿ ಸಿಪಿಎಂ ಗ್ರಾಮ ಪಂ.ಸದಸೈ ಹಾಗೂ ಪತಿ ಸೇರಿ ಮುಂಬೈಯಿಂದ ಆಗಮಿಸಿದ ಸಂಬಂಧಿಕನನ್ನು ರಹಸ್ಯವಾಗಿ ಮನೆಗೆ ಕರೆದುಕೊಂಡು ಬಂದ ಪ್ರಕರಣ ನಡೆದಿದ್ದು, ಪೊಲೀಸರು ಕೇಸು ದಾಖಲಿಸಿದ್ದರು.
Click this button or press Ctrl+G to toggle between Kannada and English