ನವೆಂಬರ್ 24, 25 ರಂದು ಉಳ್ಳಾಲ ಕಡಲ ತೀರದಲ್ಲಿ ಬೀಚ್ ಉತ್ಸವ

2:52 PM, Saturday, November 24th, 2012
Share
1 Star2 Stars3 Stars4 Stars5 Stars
(4 rating, 1 votes)
Loading...

Ullal  Beach Utsavaಮಂಗಳೂರು : ಸುಕುಮಾರ್ ತೊಕ್ಕೋಟ್ಟು ;  ಉಳ್ಳಾಲ ಈ ದೇಶದ ಮೊಟ್ಟಮೊದಲ ಸ್ವಾತಂತ್ಯ್ರ ಸಮರಕ್ಕೆ ಕಹಳೆ ಊದಿದ ತಾಣ. ಉಳ್ಳಾಲದ ರಾಣಿ ಅಬ್ಬಕ್ಕ ಪೋರ್ಚುಗೀಸರ ವಿರುದ್ದ ಹೋರಾಟ ಮಾಡಿದ್ದು ಇಲ್ಲೇ ಎನ್ನುವುದು ಬಹು ಮುಖ್ಯ ಸಂಗತಿ. ಅಬ್ಬಕ್ಕಳ ಆರಾಧ್ಯದೇವರು ಸೋಮನಾಥ. ಪ್ರತೀ ದಿನವೂ ಈ ದೇವಾಲಯಕ್ಕೆ ಅಬ್ಬಕ್ಕ ಬಂದು ಸೋಮನಾಥ ದೇವರಿಗೆ ಪೂಜೆ ಸಲ್ಲಿಸುವ ಪರಿಪಾಠವಿತ್ತು. ಆಕೆ ಬದುಕಿರುವಷ್ಟು ಕಾಲವೂ ಈ ದೇವಾಲಯಕ್ಕೆ ಬಂದು ದೇವರಿಗೆ ಕೈಮುಗಿದ ಮೇಲೆಯೇ ಯಾವುದೇ ಕೆಲಸ ಮಾಡುತ್ತಿದ್ದಳು. ಆಕೆ ಕೊನೆಯುಸಿರೆಳೆದಾಗಲೂ ಜೈ ಸೋಮನಾಥ ಎನ್ನುವ ಉದ್ಘಾರ ತೆಗೆದಳಂತೆ. ಅಂದರೆ ಸೋಮನಾಥನಿಗೂ ಆಕೆಗೂ ಇದ್ದ ನಿಕಟ ಬಾಂಧವ್ಯ ಮನವರಿಕೆ ಆಗುತ್ತದೆ. ಇದರ ಜತೆಯಲ್ಲಿ ಅಬ್ಬಕ್ಕ ತನ್ನ ಆಳ್ವಿಕೆಯನ್ನು ಮಾಡಿದ್ದು ಇದೇ ಉಳ್ಳಾಲದ ಬೀಚ್ನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎನ್ನುವುದು ಕೂಡ ಗಮನಿಸಿಕೊಳ್ಳಬೇಕಾದ ವಿಷ್ಯಾ.

Ullal Bech Utsavಉಳ್ಳಾಲ ಬೀಚ್ ಮರಳಿನಿಂದ ತುಂಬಿ ಹೋದ ಬೀಚ್. ಸದಾ ಕಾಲ ನೀರಿನ ಅಬ್ಬರದ ಅಲೆಗಳಿಂದ ಇಲ್ಲಿಗೆ ಹೋಗುವ ಪ್ರವಾಸಿಗನಿಗೆ ವಿಶಿಷ್ಟ ಅನುಭವ ಪ್ರಾಪ್ತಿಯಾಗುತ್ತದೆ. ಅಲೆಗಳ ನೀರು ಕಾಲು ಸ್ಪರ್ಶಿಸದಂತೆ ಮಕ್ಕಳು ಇಲ್ಲಿ ಆಡುವ ಆಟವನ್ನು ನೋಡಲು ಮೋಜೆನಿಸುತ್ತದೆ. ಮರಳಿನಲ್ಲಿ ಸುಂದರ ಮನೆ ನಿರ್ಮಿಸಿ ಸಂಭ್ರಮಿಸುತ್ತಾರೆ ಮಕ್ಕಳು. ದೊಡ್ಡ ಅಲೆ ಅಪ್ಪಳಿಸಿ ಇಡೀ ಮನೆಯನ್ನು ಒಡಲಿಗೆ ಸೆಳೆದುಕೊಂಡಾಗ ಮಕ್ಕಳು ಪರಿತಪಿಸುವುದನ್ನು ನೀವು ಖುದ್ದು ನೋಡಬೇಕು, ಇಂಥ ಮೋಜಿನ ಆಟಗಳಿಗೆ ಈ ಬೀಚ್ ಹೆಸರುವಾಸಿ. ಉಳ್ಳಾಲ ಬೀಚ್ ನ ಮೋಗವೀರ ಪಟ್ಣದಲ್ಲಿಯೇ ಈ ಉಳ್ಳಾಲ ಬೀಚೋತ್ಸವ ನಡೆಯಲಿದೆ. ಇಲ್ಲಿಂದ ಎರಡು ಕಿ.ಮೀ ದೂರದಲ್ಲಿ ಸೋಮೇಶ್ವರ ಬೀಚ್ ಕಾಣಿಸಿಕೊಳ್ಳುತ್ತದೆ. ಉಳ್ಳಾಲದ ಸಮೀಪದಲ್ಲಿರುವ ಮತ್ತೊಂದು ಉಚ್ಚಿಲ ಬೀಚ್ ಕೂಡ ಇದೇ ರೀತಿಯ ಹೆಸರು ಸಂಪಾದಿಸಿಕೊಂಡಿದೆ.

Ullal Beach Utsavaಪ್ರವಾಸೋದ್ಯಮಕ್ಕೆ ವಿಫುಲ ಅವಕಾಶವಿದ್ದರೂ ಬಳಕೆ ಮಾಡಿಕೊಂಡಿಲ್ಲ. ಇಲ್ಲಿಯೇ ಹತ್ತಿರದಲ್ಲಿ ರೆಸಾರ್ಟ್ ಇದೆ ವಾಸ್ತವ್ಯಕ್ಕೆ ತೊಂದರೆಯಿಲ್ಲ. ಆದರೆ ಪ್ರವಾಸೊದ್ಯಮ ಇಲಾಖೆಯಿಂದ ಯಾವುದೇ ಮೂಲಭೂತ ಸೌಕರ್ಯವಿಲ್ಲ. ಆದರೆ ಈ ಬಾರಿ ಮಾರುತಿ ಯುವಕ ಮಂಡಲ ಉಳ್ಳಾಲ ಇದರ ಆಶ್ರಯದಲ್ಲಿ ನವೆಂಬರ್ 24, 25ರಂದು ಉಳ್ಳಾಲ ಕಡಲ ತೀರದಲ್ಲಿ ನಡೆಯಲಿರುವ ಬೀಚ್ ಉತ್ಸವ ಕರಾವಳಿ ಪ್ರವಾಸೋದ್ಯಮಕ್ಕೆ ಒಂದು ಮುನ್ನುಡಿ ಬರೆಯುತ್ತದೆ ಎನ್ನುವ ಮಾತುಗಳು ಕೇಳಲು ಆರಂಭವಾಗಿದೆ. ಬೀಚ್ ಉತ್ಸವದಲ್ಲಿ ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್.ರೆಹಮಾನ್ ತಂಡದಲ್ಲಿದ್ದ ಹಾಡುಗಾರ ವಿಜಯ ಪ್ರಕಾಶ್ ಅವರಿಂದ ಸಂಗೀತ ರಸ ಸಂಜೆ ಖ್ಯಾತ ನಟ ನಟಿಯರ ಉಪಸ್ಥಿತಿ. ಬೀಚೋತ್ಸವಕ್ಕೆ ರಂಗು ಮೂಡಿಸಲು ವಿಶೇಷ ಡ್ಯಾನ್ಸ್ ಸ್ಪರ್ದೆಯನ್ನು ಆಯೋಜಿಸಲಾಗಿದೆ.

Ullal Beach Utsavaಯುವಕ ಹಾಗೂ ಯುವಕ ಮಂಡಲಗಳು ಸರಕಾರದ ಜತೆ ಕೈಜೋಡಿಸಿದರೆ ಯಾವುದೇ ಪ್ರದೇಶದ ಅಭಿವೃದ್ಧಿ ಸಾಧ್ಯ ಎನ್ನುವುದಕ್ಕೆ ಈ ಬೀಚೋತ್ಸವ ಒಂದು ಉದಾಹರಣೆ. “ಮಾರುತಿ ಯುವಕ ಮಂಡಲವು ಸ್ಥಳೀಯ ಮೊಗವೀರ ಪ್ರಾಥಮಿಕ ಶಾಲೆಯನ್ನು ಒಂದು ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಳಿಸಿರುವುದು ಅದನ್ನು ಹಸ್ತಾಂತರ ಮಾಡುವ ಕೆಲಸದ ಜತೆಯಲ್ಲಿ ಮಾರುತಿ ಯುವಕ ಮಂಡಲ 25 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಈ ಬೀಚೋತ್ಸವ ನಡೆಯುತ್ತಿದೆ. ಈಗಾಗಲೇ ಉಳ್ಳಾಲ ಬೀಚ್ ನಲ್ಲಿ ಬೋಟಿಂಗ್ ವ್ಯವಸ್ಥೆಯನ್ನು ಮಾಡಿರುವುದು ಪ್ರವಾಸಿಗರು ಜಾಸ್ತಿ ಸಂಖ್ಯೆಯಲ್ಲಿ ಸೇರುವ ಸೂಚನೆ ಬಂದಿದೆ. ಇದರ ಜತೆಯಲ್ಲಿ ಬೀಚ್ ಉತ್ಸವ ಪ್ರಯುಕ್ತ ನೃತ್ಯೋತ್ಸವ, ತಾರಾ ಸಂಜೆ, ಬೀಚ್ ಕ್ರೀಡೆ, ಆಹಾರೋತ್ಸವ, ಗಾಳಿಪಟ ಉತ್ಸವ, ಮರಳು ಶಿಲ್ಪ ಸಹಿತ ನಾನಾ ಕಾರ್ಯಕ್ರಮ ನಡೆಯಲಿದೆ. ಎನ್ನುತ್ತಾರೆ ಮಾರುತಿ ಯುವಕ ಮಂಡಲ ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಭರತ್ ಕುಮಾರ್. ಟೋಟಲಿ ಕರಾವಳಿಯ ಪ್ರವಾಸೋದ್ಯಮದ ಬೆಳವಣಿಗೆಯಲ್ಲಿ ಇಂತಹ ಉತ್ಸವಗಳು ಒಳ್ಳೆಯ ಬೆಳವಣಿಗೆಯಾಗಿದೆ ಎನ್ನೋದು ಕರಾವಳಿಗರ ಮಾತು.

Ullal Beach Utsava

Ullal Beach Utsava

Ullal Beach Utsava

Ullal Beach Utsava

Ullal Beach Utsava

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English