ಕೂಳೂರು: ನೂತನ ತಂತ್ರಜ್ಞಾನದೊಂದಿಗೆ ಕೂಳೂರು ಹಳೇ ಸೇತುವೆ ದುರಸ್ತಿಯಾಗಿದ್ದು ಬುಧವಾರ ಸಾಂಕೇತಿಕವಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು.
ಮೈಕ್ರೋ ಕೊನ್ಟೆಸ್ಟ್ ತಂತ್ರಜ್ಞಾನದೊಂದಿಗೆ ಇದನ್ನು 38ಲಕ್ಷ ರೂ.ವೆಚ್ಚದಲ್ಲಿ ದುರಸ್ತಿ ಗೊಳಿಸಲಾಗಿದ್ದು ಈ ಸೇತುವೆ ಜೀರ್ಣಾವಸ್ಥೆಯಲ್ಲಿತ್ತು.ಇದನ್ನು ದುರಸ್ತಿ ಮಾಡದೆ ನೂತನ ಸೇತುವೆ ನಿರ್ಮಾಣಕ್ಕಿಳಿದರೆ ವಾಹನ ಓಡಾಟಕ್ಕೆ ಸಮಸ್ಯೆ ಆಗುತ್ತಿದೆ. ಹೀಗಾಗಿ ಇದನ್ನು ದುರಸ್ತಿ ಗೊಳಿಸಲಾಗಿದೆ, ಹೊಸ ಸೇತುವೆ ಶೀಘ್ರ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಗುರುಪುರ ಸೇತುವೆ ಕುರಿತಂತೆ ಉತ್ತರಿಸಿದ ಅವರು ಸೇತುವೆ ಕೆಲಸ ಪೂರ್ಣವಾಗಿದ್ದು ಸಂಪರ್ಕ ರಸ್ತೆ ನಿರ್ಮಾಣವಾಗಬೇಕಿದೆ ಕೋವಿಡ್ ಸಮಸ್ಯೆಯಿಂದ ವಿಳಂಬವಾಗಿದೆ ಜೊತೆಗೆ ಪಂಪ್ ವೆಲ್ ಮೇಲ್ಸೇತುವೆ ಬಗ್ಗೆ ಯಾವುದೇ ಭೀತಿ ಬೇಡ ತಜ್ಞರು ಇದರಿಂದ ಸಮಸ್ಯೆ ಇಲ್ಲ ಎಂದಿದ್ದಾರೆ ಎಂದರು.
ಶಾಸಕ ಡಾ.ಭರತ್ ಶೆಟ್ಟಿ, ನಿತಿನ್ ಕುಮಾರ್,ತಿಲಕ್ ರಾಜ್ ಕೃಷ್ಣಾಪುರ, ವಚನ್ ಮಣೈ, ಹೆದ್ದಾರಿ ಪ್ರಾಧಿಕಾರಿಗಳಾದ ಶಿಶು ಮೋಹನ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English