ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿಗುರುವಾರ 6 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ದುಬೈನಿಂದ ಮೇ 18 ರಂದು ಬಂದ ಎರಡನೇ ವಿಮಾನದಲ್ಲಿ ಬಂದ ಪ್ರಯಾಣಿಕರಿಗೆ ಜಿಲ್ಲಾಡಳಿತ ಕ್ವಾರಂಟೈನ್ ಮಾಡಿತ್ತು, ಅದರಲ್ಲಿ 6 ಮಂದಿಯಲ್ಲಿ ಕೊರೊನಾ ದೃಢವಾಗಿದೆ. ಪಾಸಿಟಿವ್ ಬಂದ 6 ಮಂದಿ ಪುರುಷರಾಗಿದ್ದು, ಐವರು ದ.ಕ ಜಿಲ್ಲೆಯವರಾಗಿದ್ದು ಓರ್ವ ಮಾತ್ರ ಕಲಬುರ್ಗಿ ಜಿಲ್ಲೆಯ ನಿವಾಸಿಯಾಗಿದ್ದಾರೆ
ಮೇ 18 ರಂದು ದುಬೈನಿಂದ 178 ಮಂದಿ ಪ್ರಯಾಣಿಕರು ಬಂದಿದ್ದರು, ಅದರಲ್ಲಿ 110 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿತ್ತು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಂಕಿತರ ಒಟ್ಟು ಸಂಖ್ಯೆ 61ಕ್ಕೇರಿದೆ. ಆ ಪೈಕಿ ದ.ಕ.ಜಿಲ್ಲೆಯ 49, ಉತ್ತರ ಕನ್ನಡ 2, ಮುಂಬೈ 2, ಕಾರ್ಕಳ 3, ಕಲಬುರಗಿ 1 ಹಾಗೂ ಕಾಸರಗೋಡು ಜಿಲ್ಲೆಯ 4 ಪ್ರಕರಣಗಳು ಸೇರಿವೆ.
Click this button or press Ctrl+G to toggle between Kannada and English