ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1605ಕ್ಕೆ ಏರಿಕೆ, ಒಂದೇ ದಿನ 143 ಹೊಸ ಪ್ರಕರಣ ಪತ್ತೆ,

11:09 PM, Thursday, May 21st, 2020
Share
1 Star2 Stars3 Stars4 Stars5 Stars
(No Ratings Yet)
Loading...

Corona Bengaluruಬೆಂಗಳೂರು:  ಗುರುವಾರ ಬೆಂಗಳೂರು ನಗರದಲ್ಲಿ 7, ಹಾಸನದಲ್ಲಿ 13, ಮಂಡ್ಯದಲ್ಲಿ 33, ದಕ್ಷಿಣ ಕನ್ನಡದಲ್ಲಿ 5, ಚಿಕ್ಕಬಳ್ಳಾಪುರದಲ್ಲಿ 2, ದಾವಣಗೆರೆಯಲ್ಲಿ 3, ಬೆಳಗಾವಿಯಲ್ಲಿ 9, ವಿಜಯಪುರದಲ್ಲಿ 1, ಬೆಳಗಾವಿಯಲ್ಲಿ 2, ಶಿವಮೊಗ್ಗದಲ್ಲಿ 6, ಧಾರವಾಡದಲ್ಲಿ 5, ಮೈಸೂರಿನಲ್ಲಿ 1, ಉತ್ತರ ಕನ್ನಡದಲ್ಲಿ 7, ಉಡುಪಿಯಲ್ಲಿ 26, ಬಳ್ಳಾರಿಯಲ್ಲಿ 11, ತುಮಕೂರಿನಲ್ಲಿ 1, ಗದಗ 2, ರಾಯಚೂರಿನಲ್ಲಿ 5, ಕೋಲಾರದಲ್ಲಿ 2 ಪ್ರಕರಣಗಳು ವರದಿಯಾಗಿವೆ. ಜೊತೆಗೆ, ಕ್ವಾರಂಟೈನ್ ಗೆ ಒಳಪಟ್ಟಿರುವ ಅನ್ಯ ರಾಜ್ಯ ಮತ್ತು ಅಂತರಾಷ್ಟ್ರೀಯ ಪ್ರಯಾಣಿಕರಲ್ಲಿ ಐವರಲ್ಲಿ ಸೋಂಕು ವರದಿಯಾಗಿದೆ.

ಇವರಲ್ಲಿ ಬಹುತೇಕರು ಮುಂಬೈಗೆ ಪ್ರಯಾಣ ಬೆಳೆಸಿ ಹಿನ್ನೆಲೆ ಹೊಂದಿದ್ದಾರೆ. ದಕ್ಷಿಣ ಕನ್ನಡಕ್ಕೆ ದುಬೈಯಿಂದ ಆಗಮಿಸಿದವರಿಗೆ ಸೋಂಕು ತಗಲಿದೆ. ಉಳಿದಂತೆ ರಾಯಘಡ, ತಮಿಳುನಾಡು, ತೆಲಂಗಾಣ, ರಾಯಘಡ, ಥಾಣೆ, ಜಾರ್ಖಂಡ್, ಅಜ್ಮೀರ್ ನಿಂದ ಆಗಮಿಸಿದ್ದವರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.

ಇಲ್ಲಿಯವರೆಗೆ ಒಟ್ಟು 571 ಜನರು ಗುಣಮುಖರಾಗಿದ್ದು, ಒಟ್ಟು 42 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ.

ಈ ಮಧ್ಯೆ, ಇಂದು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಧಮನ್ ನಿಂದ 115, ಮಸ್ಕಟ್ ನಿಂದ 85 ಮತ್ತು ಮಂಗಳೂರಿಗೆ ಅರಬ್ ಸಂಯುಕ್ತ ರಾಷ್ಟ್ರಗಳಿಂದ 64 ವ್ಯಕ್ತಿಗಳು ಆಗಮಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English