ದೇಶೀಯ ವಿಮಾನ ಸಂಚಾರಕ್ಕೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಿದ್ಧತೆ

6:46 PM, Friday, May 22nd, 2020
Share
1 Star2 Stars3 Stars4 Stars5 Stars
(No Ratings Yet)
Loading...

mangalore-airportಮಂಗಳೂರು : ದೇಶೀಯ ವಿಮಾನ ಸಂಚಾರದ ಬಗ್ಗೆ ಸಿದ್ಧವಾಗಿ ರುವಂತೆ ಸೂಚನೆ ಬಂದಿದೆ. ಆದರೆ ವಿಮಾನಗಳ ಪ್ರಯಾಣದ ವೇಳಾಪಟ್ಟಿ ಬಂದಿಲ್ಲ. ಪೂರ್ವಭಾವಿಯಾಗಿ ನಿಲ್ದಾಣದಲ್ಲಿ ಪ್ರಯಾಣಿಕ ಸ್ನೇಹಿ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ ಎಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕ ವಿ.ವಿ. ರಾವ್ ತಿಳಿಸಿದ್ದಾರೆ.

ದೇಶೀಯ ಪ್ರಯಾಣಿಕ ವಿಮಾನಗಳ ಹಾರಾಟಕ್ಕೆ ಸಿದ್ಧವಾಗಿರುವಂತೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಸೂಚನೆ ನೀಡಿದ್ದರೂ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪೂರ್ಣ ಪ್ರಮಾಣದಲ್ಲಿ ಸಂಚಾರ ಆರಂಭಕ್ಕೆ  ಜೂನ್‌ ಮೊದಲ ವಾರದ ವರೆಗೆ ಕಾಯಬೇಕಾಗ ಬಹುದು ಎಂದು ಅವರು ಹೇಳಿದರು.

ಮೇ 25ರಿಂದ ಯಾನ ಆರಂಭಿಸುವಂತೆ ವಿಮಾನ ನಿಲ್ದಾಣಕ್ಕೆ ಸೂಚನೆ ಯಷ್ಟೇ ಬಂದಿದೆ. ವೇಳಾಪಟ್ಟಿ ಬಂದ ಬಳಿಕವಷ್ಟೇ ಸ್ಪಷ್ಟತೆ ದೊರೆಯಲಿದೆ. ಬಳಿಕ ವಿಮಾನ ಯಾನ ಸಂಸ್ಥೆಗಳ ಆನ್‌ಲೈನ್‌ ಬುಕ್ಕಿಂಗ್‌ ಆರಂಭವಾಗಲು 1 ವಾರ ಬೇಕಾಗಬಹುದು. ಸದ್ಯ ಆನ್‌ಲೈನ್‌ನಲ್ಲಿ ಜೂನ್‌ 1ರ ವರೆಗೆ ಕೆಲವು ನಗರಗಳ ಪ್ರಯಾಣದರ ಪರಿಶೀಲಿಸಿದಾಗ ದುಪ್ಪಟ್ಟಾಗಿರುವುದು ಗೋಚರಿಸುತ್ತಿದೆ.

ಈ ಮಧ್ಯೆ ಹೈದರಾಬಾದ್‌ ಸೇರಿ ದಂತೆ ದೇಶದ ವಿವಿಧ ನಗರಗಳಿಂದ ಮಂಗಳೂರಿಗೆ ಕೆಲವು ಪ್ರಯಾಣಿಕರು ಆಗಮಿಸುವ ನಿರೀಕ್ಷೆ ಇರುವುದರಿಂದ ಬೆರಳೆಣಿಕೆ ವಿಮಾನಗಳು ಮಂಗಳೂರಿ ನಿಂದ ಮುಂದಿನ ವಾರದಲ್ಲಿ ಕಾರ್ಯಾ ಚರಣೆ ನಡೆಸುವ ಸಾಧ್ಯತೆ ಇದೆ. ಮಾರ್ಕಿಂಗ್‌, ಮಾರ್ಗಸೂಚಿ ಯಾನ ಆರಂಭದ ಸುಳಿವು ದೊರೆತಿರುವ ಕಾರಣ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಈಗಾಗಲೇ ಮಾರ್ಕಿಂಗ್‌ ಮಾಡಲಾಗಿದೆ. ಕೋವಿಡ್ ಕಾರಣ ಪ್ರಯಾಣಿ ಕರು ಯಾವ ಮುನ್ನೆಚ್ಚರಿಕೆ ಅನುಸರಿಸಬೇಕು ಎಂಬ ಮಾರ್ಗ ಸೂಚಿಯೂ ತಲುಪಿದೆ.

ಮಂಗಳೂರಿನಿಂದ ಅಂತಾರಾ ಷ್ಟ್ರೀಯ ವಿಮಾನ ಯಾನ ಮಾ. 22ರಂದು, ದೇಶೀಯ ಯಾನ ಮಾ. 25ರಂದು ಸ್ಥಗಿತಗೊಂಡಿತ್ತು. ಮುಂಬಯಿಯಿಂದ ಬಂದಿಳಿದ ವಿಮಾನವೇ ದೇಶದೊಳಗಿನ ಕೊನೆಯ ಸಂಚಾರವಾಗಿತ್ತು. ಲಾಕ್‌ಡೌನ್‌ ಮಧ್ಯೆಯೂ ಏರ್‌ ಆ್ಯಂಬುಲೆನ್ಸ್‌ ಬಂದಿತ್ತು. ಏರ್‌ ಇಂಡಿಯಾ ಎಕ್ಸ್‌ ಪ್ರಸ್‌ನ 3 ವಿಮಾನಗಳು ಲಾಕ್‌ಡೌನ್‌ ಕಾರಣ ಮಂಗಳೂರಿನಲ್ಲಿ ಬಾಕಿಯಾ ಗಿದ್ದವು. ಅದೇ ವಿಮಾನಗಳ ಮೂಲಕ ಕೆಲವು ದಿನದ ಹಿಂದೆ “ವಂದೇ ಭಾರತ’ ಯೋಜನೆಯಡಿ ದುಬಾೖ, ಮಸ್ಕತ್‌ನಿಂದ ಅನಿವಾಸಿ ಕನ್ನಡಿಗರನ್ನು ಏರ್‌ಲಿಫ್ಟ್ ಮಾಡಲಾಗಿದೆ.

ಮಂಗಳೂರಿನಿಂದ 7 ವಿಮಾನ ಗಳನ್ನು ಆರಂಭಿಸುವ ಬಗ್ಗೆ ಸಚಿವಾಲಯ ಗ್ರೀನ್‌ ಸಿಗ್ನಲ್‌ ನೀಡಿದ್ದು, ದಿನಾಂಕ ಶುಕ್ರವಾರ ನಿಗದಿಯಾಗಲಿದೆ ಎಂದು ಮೂಲಗಳು ತಿಳಿಸಿವೆ. ಮುಂಬಯಿ, ಬೆಂಗಳೂರಿಗೆ ತಲಾ ಎರಡರಂತೆ ಒಟ್ಟು 4 ಸ್ಪೈಸ್‌ ಜೆಟ್‌ ಮತ್ತು ಬೆಂಗಳೂರು, ಮುಂಬಯಿ, ಚೆನ್ನೈಗೆ ತಲಾ ಒಂದರಂತೆ ಇಂಡಿಗೋ ವಿಮಾನ ಸಂಚಾರಕ್ಕೆ ಗುರುವಾರ ಸಂಜೆ ಒಪ್ಪಿಗೆ ಲಭಿಸಿದೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸ್ಪೈಸ್‌ ಜೆಟ್‌, ಇಂಡಿಗೋ, ಏರ್‌ ಇಂಡಿಯಾ ವಿಮಾನಯಾನ ಸೇವೆಗಳಿವೆ. ಲಾಕ್‌ಡೌನ್‌ಗೂ ಮೊದಲು ದೇಶೀಯವಾಗಿ ಬೆಂಗಳೂರಿಗೆ 10, ಹೈದರಾಬಾದ್‌ಗೆ 2, ಚೆನ್ನೈಗೆ 2 ಹಾಗೂ ಮುಂಬಯಿಗೆ 6 ವಿಮಾನಗಳು ಸಂಚರಿಸುತ್ತಿದ್ದವು. ಹೊಸದಿಲ್ಲಿ ವಿಮಾನ ಎರಡು ತಿಂಗಳ ಹಿಂದೆ ಸ್ಥಗಿತಗೊಂಡಿತ್ತು. ಬೆಳಗಾವಿಗೆ ವಿಮಾನ ಓಡಾಟದ ಘೋಷಣೆ ಆಗಿದ್ದು, ಸಂಚಾರ ಆರಂಭವಾಗಿರಲಿಲ್ಲ. ವಿದೇಶಗಳಿಗೆ ದುಬಾೖ, ದೋಹಾ, ಕತಾರ್‌, ಶಾರ್ಜಾ, ಬಹ್ರೈನ್‌, ಕುವೈಟ್‌, ಮಸ್ಕತ್‌ಗೆ ಇಲ್ಲಿನ ವಿಮಾನ ಸಂಚರಿಸುತ್ತಿತ್ತು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English