ಕೆಲಸಕ್ಕೆ ಹೋಗುವುದಾಗಿ ಹೇಳಿ ಯುವತಿ ನಾಪತ್ತೆ

11:55 AM, Saturday, May 23rd, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Vinuta Merryಮಂಗಳೂರು ಮೇ 22 ಕರ್ನಾಟಕ ವಾರ್ತೆ:- ಯುವತಿ ನಾಪತ್ತೆಯಾಗಿರುವ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿನುತ ಮೇರಿ (23) ಎಂಬ ಯುವತಿ ಮೇ 20ರಂದು ಪಡೀಲ್ ಬಳಿಯ ತನ್ನ ಮನೆಯಿಂದ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದವಳು ವಾಪಾಸ್ಸು ಮನೆಗೆ ಬಾರದೆ ಕಾಣೆಯಾಗಿದ್ದಾರೆ.

ಕಾಣೆಯಾದ ಯುವತಿಯ ಚಹರೆ ಇಂತಿವೆ:- ಹೆಸರು-ವಿನುತ ಮೇರಿ, ಪ್ರಾಯ-23 ವರ್ಷ, ಎತ್ತರ- 5 ಅಡಿ 5 ಇಂಚು, ಮೈ ಬಣ್ಣ ಬಿಳಿ, ಸಾಧಾರಣ ಮೈಕಟ್ಟು ಕುತ್ತಿಗೆಯ ಬಲಬದಿಯಲ್ಲಿ ಎಳ್ಳು ಮಚ್ಚೆ ಗುರುತು, ಧರಿಸಿದ ಬಟ್ಟೆ- ಕಪ್ಪು ಬಣ್ಣದ ಡಾಟ್ ಇರುವ ಸಲ್ವಾರ್ ಮತ್ತು ಪ್ಯಾಂಟ್, ಮಾತನಾಡುವ ಭಾಷೆ-ಕನ್ನಡ, ತುಳು.

ಕಾಣೆಯಾದ ಯುವತಿ ಬಗ್ಗೆ ಮಾಹಿತಿ ದೊರಕಿದ್ದಲ್ಲಿ ಠಾಣಾಧಿಕಾರಿ ಕಂಕನಾಡಿ ನಗರ ಠಾಣೆ, ಸಂಪರ್ಕಿಸಲು ಕಂಕನಾಡಿ ನಗರ ಠಾಣೆ ಪ್ರಕಟಣೆ ತಿಳಿಸಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English