ಮಾಸ್ಕೋ: ಮಹಾಮಾರಿ ಕೊರೋನಾ ವೈರಸ್ ಜಗತ್ತನ್ನೇ ನಡುಗಿಸುತ್ತಿದೆ. ಕೊರೋನಾ ತಡೆಯಲು ವೈದ್ಯಕೀಯ ಸಿಬ್ಬಂದಿ ಮತ್ತು ನರ್ಸ್ ಗಳು 24 ಗಂಟೆ ಕರ್ತವ್ಯದಲ್ಲಿ ನಿರತರಾಗಿದ್ದಾರೆ.
ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ಕೆಲಸ ಮಾಡುತ್ತಿರುವ 20 ವರ್ಷದ ನರ್ಸ್ ಒಬ್ಬರು ಕೊರೋನಾಗೆ ತುತ್ತಾಗಿರುವ ಪುರುಷರ ವಾರ್ಡ್ ನಲ್ಲಿ ಕೆಲಸ ಮಾಡುತ್ತಿದ್ದು ಪಿಪಿಈ ಪಾರದರ್ಶಕ ಗೌನ್ ಧರಿಸಿ ಚಿಕಿತ್ಸೆ ನೀಡುತ್ತಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದಕ್ಕೆ ನರ್ಸ್ ಸ್ಪಷ್ಟನೆ ನೀಡಿದ್ದಾರೆ.
ಯುನಿಫಾರ್ಮ್ ಧರಿಸಿ ಅದರ ಮೇಲೆ ಪಿಪಿಈ ಕಿಟ್ ಧರಿಸಿದರೆ ಸೆಕೆಯಾಗುತ್ತದೆ ಅದೇ ಕಾರಣಕ್ಕೆ ನಾನು ಬಿಕಿನಿ ಧರಿಸಿದ್ದಾಗೆ ನರ್ಸ್ ಹೇಳಿದ್ದಾರೆ.
Click this button or press Ctrl+G to toggle between Kannada and English