ಮುಂಬಯಿ : ಪನ್ವೇಲ್ ಪರಿಸರದ ಆಕುರ್ಲಿಯಲ್ಲಿ ಸುಮಾರು 46 ಮಂದಿ ಬಿಹಾರ್ ರಾಜ್ಜದ ಕಟ್ಟಡ ಕಾರ್ಮಿಕರು ಸಾಮಾನು ವಿತರಿಸುವ ಟೆಂಪೋದಲ್ಲಿ ತಮ್ಮ ಊರಿಗೆ ತೆರಳಲು ಡಿಮಾರ್ಟ್ ಬದಿಯಲ್ಲಿರುವ ಮೈದಾನದಲ್ಲಿ ಸಿದ್ಧತೆ ನಡೆಸಿದ್ದರು. ವಿಷಯ ತಿಳಿದು ರಾತ್ರಿ ಸುಮಾರು 8 ಗಂಟೆಗೆ ಅವರಿಗೆ ಸಹಾಯ ಮಾಡುವ ಉದ್ದೇಶದಿಂದ ಕೂಡಲೇ ಕಾರ್ಯಪ್ರವರ್ತರಾದ ಪನ್ವೇಲ್ ನಗರಸೇವಕರಾದ ಸಂತೋಷ್ ಜಿ ಶೆಟ್ಟಿ , ಶ್ರೀ ಭಾಸ್ಕರ್ ಶೆಟ್ಟಿ ಪದ್ಮ, , ಶ್ರೀ ಗುರು ಶೆಟ್ಟಿ ಕಾಪು ಮತ್ತು ಶ್ರೀ ಸುಧಾಕರ್ ಪೂಜಾರಿ ಕೆಮ್ಥೂರ್ ಇವರು ಸ್ಥಳಕ್ಕೆ ಧಾವಿಸಿದರು .ಟೆಂಪೋ ಚಾಲಕರನ್ನು ನೋಡಿ ಅನುಮಾನಬಂದು ವಿಚಾರಿಸಿದಾಗ ಯಾವುದೇ ರೀತಿಯ ಪರವಾನಿಗೆ ಇಲ್ಲದೆ ಪ್ರತಿಯೊಬ್ಬರಿಂದ ಸುಮಾರು 4500 ರಿಂದ 5000 ರೂ ( ಸುಮಾರು ರೂ ಎರಡು ಲಕ್ಷ ) ವಸೂಲಿ ಮಾಡಿ ಕಾರ್ಮಿಕರಿಗೆ ಮೋಸ ಮಾಡುವ ಉದ್ದೇಶದಿಂದಲೇ ಪೂನಾ ನೋಂದಣಿಯ ಟೆಂಪೋ ಚಾಲಕರು ಪನ್ವೇಲ್ಗೆ ಬಂದಿದ್ದರು.
ನಗರಸೇವಕ ಸಂತೋಷ್ ಜಿ ಶೆಟ್ಟಿ ಯವರ ಆಗಮನ ಅರಿತ ಟೆಂಪೋ ಚಾಲಕರು ಕಾರ್ಮಿಕರನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾದರು. ಬೆಳಿಗ್ಗೆಯಿಂದ ಅನ್ನ ನೀರು ಇಲ್ಲದೆ ಧಣಿದ ಕಾರ್ಮಿಕರಿಗೆ ಶ್ರೀ ವೃಂದಾವನ ಬಾಬಾ ಮಂಡಳಿ ವತಿಯಿಂದ ಊಟದ ವ್ಯವಸ್ಥೆಯನ್ನು ಹಾಗು ರಾತ್ರಿ ಮಲಗಲು ವೃಂದಾವನ ಬಾಬಾ ಆಶ್ರಮದಲ್ಲಿ ವ್ಯವಸ್ಥೆಯನ್ನು ಮಾಡಲಾಯಿತು. ಸಂತೋಷ್ ಜಿ ಶೆಟ್ಟಿ ಯವರು ಕಾಂದ ಕಾಲೋನಿ ಪೊಲೀಸ್ ಠಾಣೆಯ ನಿರೀಕ್ಷಕರಲ್ಲಿ ಮಾತನಾಡಿ ವಂಚಕ ಟೆಂಪೋ ಚಾಲಕರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು ಅದೇ ರೀತಿ ಕಾರ್ಮಿಕರಿಗೆ ಅವರ ಊರಿಗೆ ಹೋಗುವ ವ್ಯವಸ್ಥೆಯನ್ನು ಮಾಡಿಕೊಡಲು ವಿನಂತಿಸಲಾಯಿತು. ಕೂಡಲೇ ಸ್ಪಂದಿಸಿದ ಪೊಲೀಸ್ ನಿರೀಕ್ಷಕರು ಕಾರ್ಮಿಕರಿಗೆ ಊರಿಗೆ ಕಳುಹಿಸುವ ವ್ಯವಸ್ಥೆಯನ್ನು ಕೂಡಲೇ ಮಾಡಲಾಗುದೆಂದು ಭರವಸೆಯನ್ನು ನೀಡಿದರು.
ಸ್ಥಳದಲ್ಲಿ ನಗರ ಸೇವಕರಾದ ಶ್ರೀ ಸಂತೋಷ್ ಜಿ ಶೆಟ್ಟಿ , ಬಿ ಜೆ ಪಿ ಯ ರಾಯಘಡ್ ಜಿಲ್ಲಾ ದಕ್ಷಿಣ ವಿಭಾಗದ ಅಧ್ಯಕ್ಷರಾದ ಶ್ರೀ ಭಾಸ್ಕರ್ ಶೆಟ್ಟಿ ಪದ್ಮ ಹಾಗು ಶ್ರೀ ವೃಂದಾವನ ಬಾಬಾ ಮಂಡಳಿ ಸದಸ್ಯರಾದ ಶ್ರೀ ಸತೀಶ್ ಶೆಟ್ಟಿ , ಶ್ರೀ ದಿವಾಕರ್ ಶೆಟ್ಟಿ, ಶ್ರೀ ಶಶಿ ಶೆಟ್ಟಿ, ಶ್ರೀ ಸುದರ್ಶನ್ ಶೆಟ್ಟಿ, ಶ್ರೀ ರತ್ನಾಕರ್ ಶೆಟ್ಟಿ , ಶ್ರೀ ಜೀತೆಂದ್ರ ತಿವಾರಿ , ಸುನಿಲ್ ಅಬ್ದಗಿರಿ ಮತ್ತು ಶ್ರೀ ಸುರೇಶ ಬಂಗೇರ ಉಪಸ್ಥಿತರಿದ್ದರು .
ಈ ಸಂದರ್ಭದಲ್ಲಿ ಶ್ರೀ ಸಂತೋಷ್ ಶೆಟ್ಟಿಯವರು ಕೊರೊನ ಮಹಾಮಾರಿಯಿಂದ ತತ್ತರಿಸಿರುವ ಈ ಕಠಿಣ ಸಮಯದಲ್ಲಿ ಮಾನವರಾದ ನಾವು ಸ್ವಾರ್ಥ ಮರೆತು ಈ ಮಾನವ ಜನ್ಮ ವೆಂಬುದು ಇನ್ನೊಬ್ಬರಿಗೆ ಸಹಾಯ ಮಾಡಲು ತಾಳಿದ್ದು ಎಂದು ತಿಳಿದು ತಮ್ಮ ಕೈಲಾದಷ್ಟು ಇನ್ನೊಬ್ಬರಿಗೆ ಸಹಾಯ ಮಾಡಿ ಮಾನವೀಯತೆ ಮೆರೆಯಬೇಕು ಎಂದರು ಹಾಗು ಈ ಕಾರ್ಯಕ್ಕೆ ಸಹಕರಿಸಿದ ಶ್ರೀ ವೃಂದಾವನ ಬಾಬಾ ಮಂಡಳಿಯ ಸದಸ್ಯರೆಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
Click this button or press Ctrl+G to toggle between Kannada and English